ಉಜಿರೆ(ದಕ್ಷಿಣ ಕನ್ನಡ):ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದೆ.
ದಕ್ಷಿಣ ಕನ್ನಡ: ಶಿವರಾತ್ರಿಯಂದೇ ಧರ್ಮಸ್ಥಳದ ಹಿರಿಯ ಆನೆ ಲತಾ ನಿಧನ - elephant of dharmasthala died
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಮಂಜುನಾಥನ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಶಿವರಾತ್ರಿಯಂದೇ ಮೃತಪಟ್ಟಿದೆ.

ದಕ್ಷಿಣ ಕನ್ನಡ: ಶಿವರಾತ್ರಿಯಂದೇ ಧರ್ಮಸ್ಥಳದ ಹಿರಿಯ ಆನೆ ಲತಾ ನಿಧನ
Published : Mar 8, 2024, 10:53 PM IST
60 ವರ್ಷ ಪ್ರಾಯವಾಗಿರುವ ಲತಾ ಧರ್ಮಸ್ಥಳ ಕ್ಷೇತ್ರದ ಜಾತ್ರೋತ್ಸವ, ಲಕ್ಷದೀಪೋತ್ಸವ, ನಡಾವಳಿ, ಶಿವರಾತ್ರಿ ಉತ್ಸವ ಹೀಗೆ ಎಲ್ಲ ಉತ್ಸವದಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಳು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಧರ್ಮಸ್ಥಳದ ಪಶುವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ:ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ಆರಂಭ