ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ರಾಜ್ಯಾದ್ಯಂತ ವರದಿಗಾರರ ತರಹೇವಾರಿ ವರದಿಗಳಿಗೆ ಈ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ವರದಿ ಮಾಡಿದ ಮುದ್ರಣ ಹಾಗು ವಿದ್ಯುನ್ಮಾನ ಮಾಧ್ಯಮದ ವರದಿಗಾರರಿಗೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗಳನ್ನು ಫೆ.3 ಮತ್ತು 4 ರಂದು ದಾವಣಗೆರೆಯಲ್ಲಿ ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪ್ರಶಸ್ತಿಗಳ ವಿವರ ಹೀಗಿದೆ....!
1. ಜಿ. ನಾರಾಯಣಸ್ವಾಮಿ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿ) ಸಣ್ಣವಂಡ ಕಿಶೋರ್ ನಾಚಪ್ಪ, ಮಡಿಕೇರಿ
ಸಂಶುದ್ದೀನ್ ಕೆ.ಎಣ್ಣೂರು - ವಾರ್ತಾಭಾರತಿ, ಮಂಗಳೂರು
2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ(ಅತ್ಯುತ್ತಮ ಮಾನವೀಯ ವರದಿ) ಸಿ.ಎನ್.ಶಿವಶಂಕರ, ದೂರದರ್ಶನ ವರದಿಗಾರ, ಕೋಲಾರ ಎಂ.ಎನ್. ಯೋಗೇಶ್- ಪ್ರಜಾವಾಣಿ ಮಂಡ್ಯ
3. ಗಿರಿಧರ್ ಪ್ರಶಸ್ತಿ(ಅತ್ಯುತ್ತಮ ತನಿಖಾ ವರದಿ) ಡಿ.ಉಮೇಶ್ ನಾಯ್ಕ-ವಿಜಯವಾಣಿ, ತರೀಕೆರೆ. ಎಲ್.ದೇವರಾಜ್- ವಿಜಯ ಕರ್ನಾಟಕ
4. ಬಿ.ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ) ಚಂದ್ರಹಾಸ ಹಿರೇಮಳಲಿ- ಪ್ರಜಾವಾಣಿ, ಬೆಂಗಳೂರು ಎಸ್.ಶ್ರೀಧರ- ವಿಜಯ ಕರ್ನಾಟಕ, ರಾಮನಗರ
5. ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ) ಮಂಜುನಾಥ, ಜಾದಗೆರೆ, ವಿಜಯ ಕರ್ನಾಟಕ, ಬೆಂಗಳೂರು. ಇಬ್ರಾಹೀಂ ಖಲೀಲ್ ಬನ್ನೂರು, ವಾರ್ತಾಭಾರತಿ
6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ) ಶಶಿಧರ ಹೆಗಡೆ- ನಂದಿಕಲ್, ವಿಜಯ ಕರ್ನಾಟಕ. ಡಿ.ಎಚ್.ಸುಖೇಶ್- ಪಬ್ಲಿಕ್ ಟಿವಿ
7. ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ವಿಭಾಗ) ಕಾರಂತ ಪೆರಾಜೆ, ಅಡಿಕೆ ಪತ್ರಿಕೆ-ಪುತ್ತೂರು. ರಾಘವೇಂದ್ರ ತೊಗರ್ಸಿ- ಸುಧಾ
8. ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) ಕೆ.ಆರ್.ಯೋಗೀಶ- ಜನಮಿತ್ರ, ಕಡೂರು. ತಾಜುದ್ದೀನ್ ಅಜಾದ್- ಡೆಕ್ಕನ್ ಹೆರಾಲ್ಡ್, ಕಲಬುರಗಿ
9. ಅತ್ಯುತ್ತಮ ಪೋಟೋಗ್ರಫಿ: ಪಿ.ಕೆ. ಬಡಿಗೇರ -ಬೆಳಗಾವಿ. ನಟರಾಜ್, ಹಾಸನ. ಅನುರಾಗ್ ಬಸವರಾಜು, ಮೈಸೂರು
10.ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ) ಪ್ರಕಾಶ್ ಎಸ್.ಶೇಟ್, ವಿಜಯವಾಣಿ, ಹುಬ್ಬಳ್ಳಿ, ಅಮರೇಶ ದೇವದುರ್ಗ, ರಾಯಚೂರು.
11.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ) ಅಖಿಲೇಶ್ ಚಿಪ್ಪಲಿ, ಪ್ರಜಾವಾಣಿ, ಶಿವಮೊಗ್ಗ
12.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ, ಬೀದರ್ ಪ್ರಕಾಶ್ ಬಾಳಕ್ಕನವರ್, ಪ್ರಜಾವಾಣಿ, ಬಾಗಲಕೋಟೆ
13. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ) ಪಿ.ಶಾಂತಕುಮಾರ್, ಕನ್ನಡ ಪ್ರಭ, ಅರಸೀಕೆರೆ. ಹೆಚ್.ಕೆ.ರಾಘವೇಂದ್ರ, ಕೋಲಾರ ಪತ್ರಿಕೆ, ಕೋಲಾರ
14. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ:ನಂಜುಂಡಪ್ಪ, ದೂರದರ್ಶನ ಮತ್ತು ಆಕಾಶವಾಣಿ, ತೃಪ್ತಿ ಕುಂಬ್ರಗೋಡು, ಉದಯವಾಣಿ, ಎಚ್.ಆರ್.ಅಶ್ವಿನಿ, ವಿಜಯವಾಣಿ, ಬೆಂಗಳೂರು.