ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಹೆಚ್​ಡಿಕೆ ಖಂಡಿತ ಗೆಲ್ಲುತ್ತಾರೆ: ಸುಮಲತಾ ಅಂಬರೀಶ್​ - Sumalatha Ambareesh - SUMALATHA AMBAREESH

ನನ್ನ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್​.ಡಿ. ಕುಮಾರಸ್ವಾಮಿಯವರ ಪರ ಕೆಲಸ ಮಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಮಂಡ್ಯದಲ್ಲಿ ಕುಮಾರಸ್ವಾಮಿಯವರು ಖಂಡಿತ ಗೆಲ್ಲುತ್ತಾರೆ: ಸುಮಲತಾ
ಮಂಡ್ಯದಲ್ಲಿ ಕುಮಾರಸ್ವಾಮಿಯವರು ಖಂಡಿತ ಗೆಲ್ಲುತ್ತಾರೆ: ಸುಮಲತಾ

By ETV Bharat Karnataka Team

Published : Apr 28, 2024, 5:13 PM IST

ಸುಮಲತಾ ಅಂಬರೀಶ್​

ದಾವಣಗೆರೆ: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರು ನನ್ನ ಸಹಕಾರ ಕೋರಿದ್ದರು. ಆದರೆ ಪ್ರಚಾರಕ್ಕೆ ಇಂತಹ ದಿನ, ಸ್ಥಳ ಹಾಗೂ ಸಮಯಕ್ಕೆ ಬನ್ನಿ ಎಂದು ಯಾರು ಸಮನ್ವಯತೆ ಮಾಡಿಲ್ಲ ಎಂದಷ್ಟೇ ಹೇಳಿದ್ದೇನೆ. ನನ್ನ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿಯವರ ಪರ ಕೆಲಸ ಮಾಡಿದ್ದಾರೆ, ಮಂಡ್ಯದಲ್ಲಿ ಅವರು ಖಂಡಿತ ಗೆಲ್ಲುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್​ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಬರೀಶ್​ ಅವರು ಪಕ್ಷಾತೀತ ವ್ಯಕ್ತಿ, ಅವರಿಗೆ ಎಲ್ಲರ ನಂಟು ಇತ್ತು. ಎಲ್ಲಾ ಪಕ್ಷದವರು ಅವರಿಗೆ ಸ್ನೇಹಿತರಾಗಿದ್ದರು. ಅವರಿಗೆ ಯಾರು ಶತ್ರುಗಳಿರಲಿಲ್ಲ. ಪ್ರಸ್ತುತ ನಮ್ಮ ಗುರಿ ಲೋಕಸಭಾ ಚುನಾವಣೆ. ಎಷ್ಟು ಸ್ಥಾನಗಳನ್ನು ಶ್ರಮವಹಿಸಿ ಗೆಲ್ಲಿಸಬೇಕು, ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ನೋಡಬೇಕು. ಇದೇ ನಮ್ಮ ಗುರಿ ಎಂದರು. ಬಿಜೆಪಿಯಲ್ಲಿ ನಿಮಗೆ ಸ್ಥಾನಮಾನ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸುಮಲತಾಗೆ ಸ್ಥಾನಮಾನ ಜನರಲ್ಲಿ ಯಾವತ್ತೂ ಇದೆ. ರಾಜಕೀಯ ಬೇರೆ, ಜನರಲ್ಲಿ ಜನಪ್ರಿಯತೆ ಬೇರೆ. ಹೀಗಾಗಿ ನಾನು ಬೇರೆ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ದಾವಣಗೆರೆ ನಗರದ ಜಿಎಂಐಟಿ ಹೆಲಿಪ್ಯಾಡ್​ಗೆ ಬಂದಿಳಿದ ಸುಮಲತಾ ಅಂಬರೀಶ್​, ಸಂಸದ‌ ಜಿ ಎಂ ಸಿದ್ದೇಶ್ವರ್, ಮಾಜಿ ಸಚಿವ ಬಿ. ಸಿ‌. ಪಾಟೀಲ್ ಸೇರಿದಂತೆ ಪ್ರಮುಖರ ಜೊತೆ ಮಾತುಕತೆ ನಡೆಸಿದರು.

ಇದನ್ನೂ ಓದಿ:ಇಂದು ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ - Modi Rally In Davanagere

ABOUT THE AUTHOR

...view details