ಹುಬ್ಬಳ್ಳಿ:ಯಾವುದೇಕೋಚಿಂಗ್ ಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದ ಹುಬ್ಬಳ್ಳಿಯ ಯುವತಿಯೊಬ್ಬರು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂದು ಪ್ರಕಟವಾದ ಯುಪಿಎಸ್ಸಿ 2023ರ ಪರೀಕ್ಷಾ ಫಲಿತಾಂಶದಲ್ಲಿ ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ.ಜೈನ್ 440ನೇ ರ್‍ಯಾಂಕ್ ಪಡೆದಿದ್ದಾರೆ.
ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ, ಬಳಿಕ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. 2020ರಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆಗಾಗಿ ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಪಡೆಯದೆ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಈ ಸಾಧನೆ ಮಾಡಿದ್ದಾರೆ.