ಕರ್ನಾಟಕ

karnataka

ETV Bharat / state

ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿದರೆ ₹500 ಬಹುಮಾನ: ಕೊಪ್ಪಳ ರೈತನಿಂದ ವಿಭಿನ್ನ ಜಾಗೃತಿ - Unused Borewells - UNUSED BOREWELLS

ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವವರಿಗೆ ನಗದು ಬಹುಮಾನ ನೀಡಲು ಕೊಪ್ಪಳದ ರೈತರೊಬ್ಬರು ಮುಂದಾಗಿದ್ದಾರೆ.

useless tube wells  Koppal
ನಿರುಪಯುಕ್ತ ಕೊಳುವೆ ಬಾವಿ ಮುಚ್ಚಿದರೆ ನಗದು ಬಹುಮಾನ: ರೈತನಿಂದ ವಿಭಿನ್ನ ಜಾಗೃತಿ

By ETV Bharat Karnataka Team

Published : Apr 7, 2024, 2:52 PM IST

ಗಂಗಾವತಿ:ಕೃಷಿ, ಕುಡಿಯುವ ನೀರು ಸೇರಿದಂತೆ ನಾನಾ ಕಾರಣಕ್ಕೆ ಕೊರೆಯಿಸುವ ಕೊಳವೆ ಬಾವಿಗಳು ವಿಫಲವಾದರೆ ಮತ್ತು ಅವುಗಳನ್ನು ವೈಜ್ಞಾನಿಕವಾಗಿ ಮುಚ್ಚದೇ ಹಾಗೆಯೇ ಬಿಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ನಿರುಪಯುಕ್ತ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇವೆ. ಕೊಪ್ಪಳ ಜಿಲ್ಲೆಯಲ್ಲಿರುವ ಇಂತಹ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವವರಿಗೆ ರೈತರೊಬ್ಬರು ನಗದು ಬಹುಮಾನ ಘೋಷಿಸಿದ್ದಾರೆ. ಗಂಗಾವತಿ ನಗರದ ರೈತ ಉಪ್ಪಾರ ಸಮುದಾಯದ ಹಿರಿಯ ಮುಖಂಡ ಹಾಗು ರೈತರಾದ ಗ್ಯಾರೇಜ್ ಮಾರಣ್ಣ ಅಲಿಯಾಸ್ ಶಿವಣ್ಣ ಎಂಬವರು, ಕೊಳವೆ ಬಾವಿ ತೋಡಿಸಿದ್ದರ ಬಗ್ಗೆ ದಾಖಲೆ ಮತ್ತು ನಿರುಪಯುಕ್ತವಾದ ಬಳಿಕ ಮುಚ್ಚಿದ ಬಗ್ಗೆ ವಿಡಿಯೋಸಮೇತ ಮಾಹಿತಿ ನೀಡಿದರೆ ಅಂತಹ ಜನರಿಗೆ ನೇರವಾಗಿ 500 ರೂಪಾಯಿ ನಗದು ಬಹುಮಾನ ಪ್ರಕಟಿಸಿದ್ದಾರೆ.

2018ರಿಂದಲೂ ಇವರು ಜಾಗೃತಿ ಮೂಡಿಸುತ್ತಿದ್ದಾರೆ. ಕರಪತ್ರ ಪತ್ರ ಹಂಚುವುದು, ಜಾನಪದ ಕಲಾವಿದ ಶರಣಪ್ಪ ವಡಗೇರಿ ತಂಡದವರಿಂದ ಕೊಪ್ಪಳ ಬಸ್ ನಿಲ್ದಾಣ, ಕೂಕನಪಳ್ಳಿ ಸಂತೆ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೊಳವೆ ಬಾವಿಗಳಿಂದ ಉಂಟಾಗುತ್ತಿರುವ ಅನಾಹುತಗಳ ಕುರಿತು ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವ ಮೂಲಕವೂ ಅರಿವು ಮೂಡಿಸುತ್ತಿದ್ದಾರೆ.

"ಮಾನವೀಯತೆಯ ಉದ್ದೇಶಕ್ಕೆ ಈ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಗ್ರಾಮದ ಕೊಳವೆ ಬಾವಿಗಳೊಳಗೆ ಮಕ್ಕಳು ಬೀಳಬಾರದು. ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸಿಬಾರದು. ಕೊಪ್ಪಳ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಮುಚ್ಚಲು ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಶಿವಣ್ಣ ಜಿಲ್ಲಾಡಳಿತಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಭೀಕರ ಬರಗಾಲ: ಬರಿದಾದ ಹೇಮಾವತಿ ಒಡಲು, ಕಾಫಿನಾಡಿನ ಜನರಲ್ಲಿ ಆತಂಕ - Hemavati River

For All Latest Updates

ABOUT THE AUTHOR

...view details