ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಕೊಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ, ನೀರಿನ ಮಧ್ಯ ದೇವಿಯ ದರ್ಶನ - KOKATANURA YALLAMMA TEMPLE

ಮಂಗಳವಾರ ರಾತ್ರಿ ಸುರಿದ ಮಳೆಗೆ ಪ್ರಸಿದ್ಧ ದೇವಸ್ಥಾನ ಕೊಕಟನೂರ ಯಲ್ಲಮ್ಮ ದೇವಸ್ಥಾನ ನೀರಿನಿಂದ ಅರ್ಧದಷ್ಟು ಮುಳುಗಡೆಯಾಗಿದೆ.

ಕೋಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ
ಕೋಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ (ETV Bharat)

By ETV Bharat Karnataka Team

Published : Oct 16, 2024, 1:05 PM IST

ಚಿಕ್ಕೋಡಿ:ರಾಜ್ಯದಾದ್ಯಂತ ಕೆಲವು ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ಗಡಿನಾಡು ಶಕ್ತಿ ದೇವತೆ ಭಂಡಾರ ಒಡತಿ ಕೊಕಟನೂರ ಯಲ್ಲಮ್ಮ ದೇವಿ ದೇವಸ್ಥಾನ ಹಳ್ಳದ ನೀರಿನಿಂದ ಜಲದಿಗ್ಬಂಧನಕ್ಕೊಳಗಾಗಿದೆ.

ಕೊಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ, ನೀರಿನ ಮಧ್ಯ ದೇವಿಯ ದರ್ಶನ (ETV Bharat)

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದ ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ಹೊಕ್ಕಿದ್ದು ದೇವಿ ಮೂರ್ತಿ ಅರ್ಧದಷ್ಟು ಮುಳುಗಡೆ ಆಗಿದೆ. ನೀರಿನ ಮಧ್ಯದಲ್ಲಿ ದೇವಿಯ ದರ್ಶನವನ್ನು ಭಕ್ತರು ಪಡೆಯುತ್ತಿದ್ದಾರೆ.

ಕೊಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ (ETV Bharat)

ನಾಳೆ ಹುಣ್ಣಿಮೆ ಇರುವುದರಿಂದ ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ದೇವಸ್ಥಾನ ಆವರಣದಲ್ಲಿ ಉಭಯ ರಾಜ್ಯಗಳ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ:ಚಾಮರಾಜನಗರದಲ್ಲಿ ಮಳೆ ಆರ್ಭಟಕ್ಕೆ ಮತ್ತೆ ಕೆರೆಗಳು ಕೋಡಿ: ಕೆರೆ ಏರಿ ಒಡೆಯುವ ಭೀತಿಯಲ್ಲಿ ಜನ

ABOUT THE AUTHOR

...view details