ಕರ್ನಾಟಕ

karnataka

ETV Bharat / state

ಕೊಡಗು: ಹತ್ಯೆಗೈದು ಬಾಲಕಿಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl murder case - KODAGU GIRL MURDER CASE

ಬಾಲಕಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅರೆಸ್ಟ್
ಆರೋಪಿ ಅರೆಸ್ಟ್ (ETV Bharat)

By ETV Bharat Karnataka Team

Published : May 11, 2024, 9:43 AM IST

Updated : May 11, 2024, 10:35 AM IST

ಕೊಡಗು:ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡು 16 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆಗೈದು, ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಬಾಲಕಿಯ ಭೀಕರ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್​ನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

ಇನ್ನು ಆರೋಪಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುಳ್ಳು ವದಂತಿ ಶುಕ್ರವಾರ ವರದಿಯಾಗಿತ್ತು. ಆ ಬಳಿಕ ಈ ಕುರಿತ ಸುದ್ದಿ ಸುಳ್ಳು, ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಎಸ್​ಪಿ ಪ್ರತಿಕ್ರಿಯೆ ನೀಡಿದ್ದರು.

ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿ ಬಂಧನದ ಫೋಟೋ ಕೂಡ ಬಿಡುಗಡೆಗೊಳಿಸಿದ್ದಾರೆ. ಆರೋಪಿಯ ಬಂಧನವಾಗಿದೆ. ಆದರೆ ಆತ ತೆಗೆದುಕೊಂಡ ಹೋಗಿದ್ದ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ:ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಆರೋಪಿ ಪರಾರಿ - Kodagu Girl Murder

ಕೊಲೆ ಪ್ರಕರಣದ ವಿವರ:ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ, ಬಾಲಕಿ ಅಪ್ರಾಪ್ತೆಯಾದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆ ಬಳಿಕ ಎರಡೂ ಮನಯ ಪೋಷಕರು, ಬಾಲಕಿಗೆ 18 ವರ್ಷವಾದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡಲು ಒಪ್ಪಿಕೊಂಡಿದ್ದರು. ನಂತರ ಅಧಿಕಾರಿಗಳು ಮತ್ತು ಪ್ರಕಾಶ್ ಮನೆಯವರು ಬಾಲಕಿ ಮನೆಯಿಂದ ತೆರಳಿದ್ದರು.

ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡ ಪ್ರಕಾಶ್ ಗುರುವಾರ ಸಂಜೆ ಬಾಲಕಿಯ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ. ಬಾಲಕಿಯ ತಂದೆ ತಾಯಿ ಮೇಲೆ ಹಲ್ಲೆ ಮಾಡಿ, ಬಾಲಕಿಯನ್ನು ಮನೆಯಿಂದ ಎಳೆದೊಯ್ದಿದ್ದ. ನಂತರ ಹತ್ಯೆ ಮಾಡಿ, ಆಕೆಯ ತಲೆಯನ್ನು ತೆಗೆದುಕೊಂಡು ಪರಾರಿಯಾಗಿದ್ದ. ಆರೋಪಿಯ ಹಲ್ಲೆಯಿಂದ ಬಾಲಕಿಯ ತಂದೆ ತಾಯಿಯೂ ಗಾಯಗೊಂಡಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ಕೊಲೆಯಾದ ಬಾಲಕಿಯ ಎಸ್​ಎಸ್​ಎಲ್​ಸಿ ಫಲಿತಾಂಶ ಗುರುವಾರವಷ್ಟೇ ಪ್ರಕಟವಾಗಿದ್ದು, ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಳು.ಪರೀಕ್ಷೆ ಪಾಸಾದ ಖುಷಿಯಲ್ಲಿದ್ದಾಗಲೇ ಕೊಲೆಯಾಗಿದ್ದಳು.

Last Updated : May 11, 2024, 10:35 AM IST

ABOUT THE AUTHOR

...view details