ಕರ್ನಾಟಕ

karnataka

ETV Bharat / state

ಉಡುಪಿ: ಕೆಎಂಸಿ ಮಣಿಪಾಲದ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್‌ಗೆ ವುಮೆನೋವೇಟ‌ರ್​ ಪ್ರಶಸ್ತಿ - WOMENOVATOR AWARD - WOMENOVATOR AWARD

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಮಣಿಪಾಲ ಮೆಡಿಕಲ್​ ಕಾಲೇಜು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶೆರ್ಲಿ ಸಾಲಿನ್ಸ್​​ ಗ್ಲೋಬಲ್ ಇನ್‌ಕ್ಯುಬೇಟರ್ ಫಾರ್ ವುಮೆನ್ (ವುಮೆನೋವೇಟ‌ರ್) ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

DR SHIRLEY LEWIS SALINS
ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್‌ಗೆ ವುಮೆನೋವೇಟ‌ರ್​ ಪ್ರಶಸ್ತಿ (ETV Bharat)

By ETV Bharat Karnataka Team

Published : Sep 18, 2024, 12:51 PM IST

ಉಡುಪಿ:ಮಣಿಪಾಲ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾದ ಡಾ. ಶೆರ್ಲಿ ಎಲ್ ಸಾಲಿನ್ಸ್ ಅವರು ಆರೋಗ್ಯ ರಕ್ಷಣೆ ವೃತ್ತಿಪರ ವಿಭಾಗದಲ್ಲಿ ಭಾರತದ ಅಗ್ರ 100 ಮಹಿಳಾ ನವ ಆವಿಷ್ಕಾರಕರಲ್ಲಿ (ಇನ್ನೊವೇಟರ್ಸ್) ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚಿಗೆ ನವದೆಹಲಿಯ ಮಂಡಿ ಹೌಸ್‌ನಲ್ಲಿರುವ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಗ್ಲೋಬಲ್ ಇನ್‌ಕ್ಯುಬೇಟರ್ ಫಾರ್ ವುಮೆನ್ (ವುಮೆನೋವೇಟ‌ರ್) ಎಂಬ ಪ್ರತಿಷ್ಠಿತ ಮನ್ನಣೆಯನ್ನು ನೀಡಿ ಗೌರವಿಸಲಾಯಿತು. ತೃಪ್ತಿ ಸಿಂಘಾಲ್ ಸೋಮಾನಿ ಸ್ಥಾಪಿಸಿದ ವುಮೆನೋವೇಟರ್ ಉಪಕ್ರಮ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದಲ್ಲದೇ ಅಂಥ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತದೆ. ಇದು ಆರೋಗ್ಯ ರಕ್ಷಣೆ, ತಂತ್ರಜ್ಞಾನ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮಹಿಳಾ ನಾಯಕರು, ಉದ್ಯಮಿಗಳು ಮತ್ತು ನವೋದ್ಯಮಿಗಳನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತದೆ.

ಕೆಎಂಸಿ ಮಣಿಪಾಲದ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್‌ಗೆ ವುಮೆನೋವೇಟ‌ರ್​ ಪ್ರಶಸ್ತಿ (ETV Bharat)

ಜಾಗತಿಕವಾಗಿ 50 ನಗರಗಳಲ್ಲಿ ವ್ಯಾಪಿಸಿರುವ 10,000 ಮಹಿಳೆಯರ ಜಾಲದೊಂದಿಗೆ, ವೇದಿಕೆಯು ಮಹಿಳಾ ನವೋದ್ಯಮಿಗಳಿಗೆ ಮಾರ್ಗದರ್ಶನ, ಸಂವಹನ ಮತ್ತು ಧನಸಹಾಯದ ಅವಕಾಶಗಳನ್ನು ನೀಡುತ್ತದೆ. ಡಾ. ಶೆರ್ಲಿ ಅವರು ರೇಡಿಯೋಥೆರಪಿ ಮತ್ತು ಆಂಕೊಲಾಜಿಯಲ್ಲಿ ಅವರ ಸಾಧನೆ ಹಾಗೂ ಭಾರತದಲ್ಲಿ ಕ್ಯಾನ್ಸ‌ರ್ ಆರೈಕೆಯಲ್ಲಿ ಸುಧಾರಣೆಗೆ ಅವರು ಮಾಡಿದ ಕೆಲಸವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಜಾಗತಿಕವಾಗಿ 50 ನಗರಗಳಲ್ಲಿ ವ್ಯಾಪಿಸಿರುವ 10,000 ಮಹಿಳೆಯರ ಜಾಲದೊಂದಿಗೆ, ವೇದಿಕೆಯು ಮಹಿಳಾ ನವೋದ್ಯಮಿಗಳಿಗೆ ಮಾರ್ಗದರ್ಶನ, ಸಂವಹನ ಮತ್ತು ಧನಸಹಾಯದ ಅವಕಾಶಗಳನ್ನು ನೀಡುತ್ತದೆ. ಡಾ. ಶೆರ್ಲಿ ಅವರು ರೇಡಿಯೋಥೆರಪಿ ಮತ್ತು ಆಂಕೊಲಾಜಿಯಲ್ಲಿ ಅವರ ಸಾಧನೆ ಹಾಗೂ ಭಾರತದಲ್ಲಿ ಕ್ಯಾನ್ಸ‌ರ್ ಆರೈಕೆಯಲ್ಲಿ ಸುಧಾರಣೆಗೆ ಅವರು ಮಾಡಿದ ಕೆಲಸವನ್ನು ಗುರುತಿಸಿ ಈ ಗೌರವ ನೀಡಿದೆ.

ಕೆಎಂಸಿ ಮಣಿಪಾಲದ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್‌ಗೆ ವುಮೆನೋವೇಟ‌ರ್​ ಪ್ರಶಸ್ತಿ (ETV Bharat)

ಡಾ.ಶೆರ್ಲಿ ಅವರ ಸಾಧನೆಯ ಕುರಿತಂತೆ ಹರ್ಷ ವ್ಯಕ್ತಪಡಿಸಿದ ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಅವರು, ಡಾ. ಶೆರ್ಲಿ ಸಾಲಿನ್ಸ್ ಆಂಕೊಲಾಜಿ ಕ್ಷೇತ್ರದಲ್ಲಿ ತೋರಿದ ಪರಿಣತಿ ಸೇವೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮಾಡಿದ ಪರಿಣಾಮಕಾರಿ ಸಾಧನೆಗೆ ಸಿಕ್ಕ ಮನ್ನಣೆಯಾಗಿದೆ ಎಂದು ಈಟಿವಿ ಭಾರತದೊಂದಿಗೆ ಸಂತಸವನ್ನು ಹಂಚಿಕೊಂಡಿದ್ದರೆ.

ಇದನ್ನೂ ಓದಿ: ಉಡುಪಿ: ಶ್ರೀ ವಿದ್ಯೇಶತೀರ್ಥರಿಗೆ ಸಪ್ತತಿ ಅಭಿನಂದನೋತ್ಸವ, ಭಾಗವತ ಭಾಸ್ಕರ ಪ್ರಶಸ್ತಿ ಪ್ರದಾನ - CHATURMASYA VRATA

ABOUT THE AUTHOR

...view details