ಹುಬ್ಬಳ್ಳಿ:ರಾಜ್ಯದಲ್ಲಿ ಇಂದು 2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಮತಗಟ್ಟೆ ಸಂಖ್ಯೆ 191ರಲ್ಲಿ ಹಕ್ಕು ಚಲಾಯಿಸಿದರು.
ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಆಗಮಿಸಿ ಬಸವರಾಜ ಹೊರಟ್ಟಿ ಮತದಾನ - Basavaraj Horatti - BASAVARAJ HORATTI
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕುಟುಂಬಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾನ (Etv Bharat)
Published : May 7, 2024, 8:49 AM IST
"ಮತ ಚಲಾಯಿಸಿದ್ದೇನೆ. ಬಹಳಷ್ಟು ಜನ ಮತದಾನ ಮಾಡುವುದಿಲ್ಲ. ಪ್ರಜಾಪ್ರಭುತ್ವ ಕಲಿತವರು, ತಿಳಿದವರು ಕಡ್ಡಾಯ ಮತದಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲರಿಗೂ ಮತದಾನ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮುಂದಾಗಬೇಕು. ಈ ಚುನಾವಣೆ ಕೇವಲ ಟೀಕೆ ಮಾಡುವುದಕ್ಕೆ ಸೀಮಿತವಾಗಿತ್ತೇ ಹೊರತು ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಲಿಲ್ಲ" ಎಂದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಮತದಾರರ ಸೆಳೆಯಲು ವಿಶೇಷ ಮತಗಟ್ಟೆಗಳ ಸ್ಥಾಪನೆ - Special Polling Booths