ಕರ್ನಾಟಕ

karnataka

ETV Bharat / state

Live Karnataka News: Wed Nov 20 2024 ಕರ್ನಾಟಕ ಇತ್ತೀಚಿನ ಸುದ್ದಿಗಳು - KARNATAKA NEWS TODAY WED NOV 20 2024

Etv Bharat
Etv Bharat (Etv Bharat)

By Karnataka Live News Desk

Published : Nov 20, 2024, 8:10 AM IST

Updated : Nov 20, 2024, 11:00 PM IST

10:57 PM, 20 Nov 2024 (IST)

ಎಲೆಕ್ಟ್ರಿಕಲ್ ಶೋರೂಂ ನಲ್ಲಿ ಅಗ್ನಿ- ಅವಘಡ ಪ್ರಕರಣ: ಶೋರೂಂ ಮಾಲೀಕ, ಮ್ಯಾನೇಜರ್ ಬಂಧನ

ಎಲೆಕ್ಟ್ರಿಕಲ್ ಶೋರೂಂನಲ್ಲಿ ನಡೆದ ಅಗ್ನಿ ಅವಘಡದ ಪ್ರಕರಣದ ಸಂಬಂಧ ಶೋರೂಂ ಮಾಲೀಕ, ಮ್ಯಾನೇಜರ್​​ನನ್ನು ಬಂಧಿಸಲಾಗಿದೆ. | Read More

ETV Bharat Live Updates - ELECTRICAL SHOWROOM FIRE INCIDENT

10:42 PM, 20 Nov 2024 (IST)

ಹುಬ್ಬಳ್ಳಿ ಹಳೇ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ ಪುನಾರಂಭ: ಮರುಕಳಿಸಲಿದೆ ಗತವೈಭವ: ಏನಿದರ ವೈಶಿಷ್ಟ್ಯ

ಈ ತಿಂಗಳ ಅಂತ್ಯಕ್ಕೆ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ಧಗೊಳ್ಳಲಿದ್ದು, ಏನೆಲ್ಲ ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ ಎಂಬ ಕುರಿತಂತೆ ಈಟಿವಿ ಭಾರತದ ಪ್ರತಿನಿಧಿ ಹೆಚ್ ಬಿ ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates - DHARWAD

10:35 PM, 20 Nov 2024 (IST)

ಕೂಡ್ಲುವಿನ ಮೂಲ ಮನೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ

ಹುಟ್ಟಿ ಬೆಳೆದ ಕೂಡ್ಲುವಿನ ಸ್ವಂತ ಜಾಗದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. | Read More

ETV Bharat Live Updates - VIKRAM GOWDA LAST RITES IN KUDLU

09:08 PM, 20 Nov 2024 (IST)

ಚನ್ನಪಟ್ಟಣ, ಶಿಗ್ಗಾಂವಿ ಎನ್​ಡಿಎ ಮೈತ್ರಿಗೆ, ಸಂಡೂರು ಕಾಂಗ್ರೆಸ್​ಗೆ: ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ

ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶಕ್ಕೆ ಮೂರೇ ದಿನಗಳು ಬಾಕಿ ಇದ್ದು, ಮತದಾನೋತ್ತರ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧವಾಗಿ ಬಂದಿದೆ. | Read More

ETV Bharat Live Updates - KARNATAKA BY ELECTION EXIT POLL

08:48 PM, 20 Nov 2024 (IST)

ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ

ದೀಪಾವಳಿ ಹಿನ್ನೆಲೆಯಲ್ಲಿ ಮಾದಪ್ಪನಿಗೆ ಭರಪೂರ ಆದಾಯ ಬಂದಿದೆ. 27 ದಿನಗಳಲ್ಲಿ 2,43,65,775 ರೂ ಸಂಗ್ರಹವಾಗಿದೆ. | Read More

ETV Bharat Live Updates - MMHILLS

08:21 PM, 20 Nov 2024 (IST)

ಕೋರ್ಟ್ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ; ದೃಶ್ಯ ಜಾಲತಾಣದಲ್ಲಿ ವೈರಲ್‌

ಕೋರ್ಟ್‌ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ ಗಡಿ ಹೊಸೂರಿನಲ್ಲಿ ನಡೆದಿದೆ. ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇಡೀ ಆನೇಕಲ್‌ ಭಾಗ ಬೆಚ್ಚಿ ಬಿದ್ದಿದೆ. | Read More

ETV Bharat Live Updates - FATAL ATTACK ON LAWYER

07:17 PM, 20 Nov 2024 (IST)

ಪ್ರಿಯಕರರೊಂದಿಗೆ ಸೇರಿ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ ತಾಯಂದಿರು: ಪ್ರಕರಣ ಬೇಧಿಸಿದ ಪೊಲಿಸರು

ಹಣಕ್ಕಾಗಿ ಪ್ರಿಯಕರರೊಂದಿಗೆ ಸೇರಿ ಸ್ವಂತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿದ ತಾಯಂದಿರ ಪ್ರಕರಣವನ್ನು ಬೇಧಿಸಿದ ಪೊಲಿಸರು, ಆ ಮಕ್ಕಳನ್ನು ರಕ್ಷಣೆ ಮಾಡುವುದರ ಜೊತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. | Read More

ETV Bharat Live Updates - DHARWAD CHILD KIDNAPPING CASE

06:52 PM, 20 Nov 2024 (IST)

ಎಚ್​ಎಸ್​ಆರ್​ಪಿ ನಂಬರ್​ ಪ್ಲೇಟ್ ಅಳವಡಿಕೆಗೆ ಡಿಸಂಬರ್​ 5ರವರೆಗೂ ಗಡುವು ವಿಸ್ತರಿಸಿದ ಹೈಕೋರ್ಟ್

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. | Read More

ETV Bharat Live Updates - HSRP NUMBER PLATES

05:49 PM, 20 Nov 2024 (IST)

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಆಯ್ಕೆ

ಡಿಸೆಂಬರ್‌ 20ರಿಂದ ಮೂರು ದಿನ ಕಾಲ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. | Read More

ETV Bharat Live Updates - KANNADA SAHITYA SAMMELANA

05:43 PM, 20 Nov 2024 (IST)

ಎನ್​ಕೌಂಟರ್ ನಡೆದ ಸ್ಥಳಕ್ಕೆ ಶೀಘ್ರ ಭೇಟಿ ನೀಡಲಾಗುತ್ತದೆ; ಕೆ. ಪಿ. ಶ್ರೀಪಾಲ್

ನಕ್ಸಲ್ ಚಳವಳಿಯಲ್ಲಿ ಇರುವವರು ತಮ್ಮ ಈ ರಕ್ತಪಾತದ ಮಾರ್ಗದಿಂದ ಹೊರಬಂದು ಜಾಪ್ರಭುತ್ವದಡಿ ಚಳವಳಿ ನಡೆಸುವಂತೆ ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತ ಸಮಿತಿ ಸದಸ್ಯ ಕೆ.ಪಿ. ಶ್ರೀಪಾಲ್ ಮನವಿ ಮಾಡಿದರು. | Read More

ETV Bharat Live Updates - NAXALITE VIKRAM GOWDA ENCOUNTER

05:30 PM, 20 Nov 2024 (IST)

ಸಿಎಂ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌

ಸಿಎಂ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌, ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಹಲವು ನಿಯೋಗಗಳು ಭಾಗವಹಿಸಲಿವೆ ಎಂದಿದ್ದಾರೆ. | Read More

ETV Bharat Live Updates - MEETING WITH CM SIDDARAMAIAH

05:23 PM, 20 Nov 2024 (IST)

ಇಡಿ ದುರ್ಬಳಕೆ ಆರೋಪ : ಕಟೀಲ್ ವಿರುದ್ಧದ ಪ್ರಕರಣ ರದ್ದು ಕೋರಿರುವ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್​ ಕುಮಾರ್​ ವಿರುದ್ಧದ ಪ್ರಕರಣದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. | Read More

ETV Bharat Live Updates - NALIN KUMAR KATIL

04:55 PM, 20 Nov 2024 (IST)

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಚಿಕಿತ್ಸಾ ದರ ಪರಿಷ್ಕರಣೆ: ಆರೋಗ್ಯ ಸಚಿವರ ಸ್ಪಷ್ಟನೆ

ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆ ಚಿಕಿತ್ಸಾ ವೆಚ್ಚ ಹೆಚ್ಚಳ ಮಾಡುತ್ತಿದ್ದು, ಇದೂ ಕೂಡಾ ಗ್ಯಾರಂಟಿಗೆ ಹಣ ಕ್ರೋಢೀಕರಿಸುವ ನಿಟ್ಟಿನಲ್ಲಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates - INCREASES PRIMARY HEALTHCARE COSTS

04:43 PM, 20 Nov 2024 (IST)

ನನಗೆ ಯಾವುದೇ ಬಣ ಇಲ್ಲ, ವಕ್ಫ್​​ ವಿರುದ್ಧ ಹೋರಾಟ ಅಷ್ಟೇ: ಪ್ರತಾಪ್‌ ಸಿಂಹ

ಮೈಸೂರು - ಚಾಮರಾಜನಗರ ಭಾಗದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸುವುದಾಗಿ ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿದರು. | Read More

ETV Bharat Live Updates - FORMER MP PRATAP SIMHA

04:20 PM, 20 Nov 2024 (IST)

ಜಾಗತಿಕ ಹೂಡಿಕೆದಾರರ ಸಮಾವೇಶ: ’ಇನ್ವೆಸ್ಟ್ ಕರ್ನಾಟಕ-2025’ ರ ಸಮನ್ವಯ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ್

ಮುಂದಿನ ವರ್ಷ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್​ ನೇತೃತ್ವದಲ್ಲಿ ಇನ್ವೆಸ್ಟ್​ ಕರ್ನಾಟಕ ಸಮನ್ವಯ ಸಭೆ ನಡೆಸಲಾಯಿತು. | Read More

ETV Bharat Live Updates - COORDINATION MEETING

03:51 PM, 20 Nov 2024 (IST)

ಬಡವರ ಅನ್ನ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ತಟ್ಟಲಿದೆ: ಪ್ರತಿಭಟನೆಯ ಎಚ್ಚರಿಕೆ ನೀಡಿದ ಆರ್‌.ಅಶೋಕ್

ಅನರ್ಹರ ಬಿಪಿಎಲ್​ ಕಾರ್ಡ್​ ರದ್ದು ಮಾಡುವ ಸರ್ಕಾರದ ನೀತಿ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಬಡವರ ಅನ್ನ ಕಿತ್ತುಕೊಂಡವರ ಶಾಪ ಕಾಂಗ್ರೆಸ್​ ಸರ್ಕಾರಕ್ಕೆ ತಟ್ಟಲಿದೆ ಎಂದು ಆರ್​ ಅಶೋಕ್​​​​ ಕಿಡಿಕಾರಿದ್ದಾರೆ. | Read More

ETV Bharat Live Updates - R ASHOK

03:39 PM, 20 Nov 2024 (IST)

'ನಕ್ಸಲ್ ವಿಕ್ರಂ ಗೌಡದ್ದು ನಕಲಿ ಎನ್​ಕೌಂಟರ್'; ನ್ಯಾಯಾಂಗ ತನಿಖೆಗೆ ಎಡಪಂಥೀಯ ಮುಖಂಡರ ಆಗ್ರಹ

ನಕ್ಸಲ್ ವಿಕ್ರಂ ಗೌಡ ಅವರದ್ದು ನಕಲಿ ಎನ್​ಕೌಂಟರ್ ಆಗಿದ್ದು, ಇದನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಎಡಪಂಥೀಯ ಮುಖಂಡರಾದ ನೂರ್​ ಶ್ರೀಧರ್ ಮತ್ತು ಸುರಿಮನೆ ನಾಗರಾಜ್​ ​ ಆಗ್ರಹಿಸಿದರು. | Read More

ETV Bharat Live Updates - NAXAL LEADER VIKRAM GOWDA ENCOUNTER

03:33 PM, 20 Nov 2024 (IST)

ನಮಗೆ ಲೋಕಾಯುಕ್ತ ತನಿಖೆಯ ಮೇಲೆ ಅನುಮಾನ: ಸ್ನೇಹಮಯಿ ಕೃಷ್ಣ

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂಬ ಅನುಮಾನ ಇದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. | Read More

ETV Bharat Live Updates - ನಮಗೆ ಲೋಕಾಯುಕ್ತ ತನಿಖೆಯ ಮೇಲೆ ಅನುಮಾನ ಸ್ನೇಹಮಯಿ ಕೃಷ್ಣ

03:16 PM, 20 Nov 2024 (IST)

ನಕ್ಸಲ್ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡನ ಎನ್​ಕೌಂಟರ್; ಸಿಎಂ ಸಿದ್ದರಾಮಯ್ಯ

ಪೊಲೀಸರು ನಕ್ಸಲ್​ ವಿಕ್ರಂ ಗೌಡನನ್ನು ಹುಡುಕುತ್ತಿದ್ದರು. ಶರಣಾಗುವಂತೆ ಆದೇಶ ಕೂಡ ನೀಡಲಾಗಿತ್ತು. ಆದರೆ, ಶರಣಾಗಿರಲಿಲ್ಲ. ಹಾಗಾಗಿ ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್​​ಕೌಂಟರ್ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. | Read More

ETV Bharat Live Updates - CM REACTION ON ENCOUNTER

03:08 PM, 20 Nov 2024 (IST)

ಚಾಮರಾಜನಗರ: ಮಗು ಅಪಹರಿಸಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಬಂಧನ, ಕಂದನ ರಕ್ಷಣೆ

ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಬಳಿಕ ಅವರ ಮಗುವನ್ನು ಅಪಹರಿಸಿದ್ದ ಭಿಕ್ಷುಕಿಯನ್ನು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - CHAMARAJANAGAR

02:33 PM, 20 Nov 2024 (IST)

ಪೊಲೀಸರು ಶೂಟ್ ಮಾಡದೇ ಇದ್ದರೆ ಅವನೇ ದಾಳಿ ಮಾಡುತ್ತಿದ್ದ: ಡಾ.ಜಿ.ಪರಮೇಶ್ವರ್

ವಿಕ್ರಂ ಗೌಡ ಶರಣಾಗತಿಗೆ ಈ ಹಿಂದೆ ಪ್ರಯತ್ನಗಳು ನಡೆದಿದ್ದವು, ಸಂಬಂಧಿಕರು ಹೇಳಿದರೂ ಆತ ಒಪ್ಪಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು. | Read More

ETV Bharat Live Updates - BENGALURU

02:26 PM, 20 Nov 2024 (IST)

ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಯಕೃತ್​ ರವಾನೆ

ಬೆಳಗಾವಿಯ ದಾನಿಯೊಬ್ಬರು ನೀಡಿದ ಯಕೃತ್​ ಅನ್ನು ವಿಮಾನದ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ, ರೋಗಿಯೊಬ್ಬರಿಗೆ ಕಸಿ ಮಾಡಲಾಗಿದೆ. | Read More

ETV Bharat Live Updates - BELAGAVI

01:41 PM, 20 Nov 2024 (IST)

ಯಾರೂ ಆತಂಕಪಡಬೇಡಿ, ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ: ಡಿ.ಕೆ. ಶಿವಕುಮಾರ್

ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಪಡಿತರ ಕಾರ್ಡ್​​ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. | Read More

ETV Bharat Live Updates - BENGALURU

01:29 PM, 20 Nov 2024 (IST)

ರಾಜ್ಯದ ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಉಚಿತ ನೀಟ್​, ಜೆಇಇ, ಸಿಇಟಿ ಕೋಚಿಂಗ್ ಆರಂಭ

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ನೀಟ್​/ಜೆಇಇ/ಸಿಇಟಿ ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ ನೀಡಲಾಗಿದೆ. | Read More

ETV Bharat Live Updates - COACHING FOR PUC STUDENTS

01:15 PM, 20 Nov 2024 (IST)

ವಿಜಯನಗರ ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು: 101 ಸರ್ಕಾರಿ ನೌಕರರಿಗೆ ನೋಟಿಸ್, ದಂಡ

ಬಿಪಿಎಲ್​ ಕಾರ್ಡ್​ ಅಮಾನತಾಗಿರುವವರು ತಮ್ಮ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷವಿರುವ ಬಗ್ಗೆ ಆದಾಯ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಿದಲ್ಲಿ, ಅದು ಬಿಪಿಎಲ್​ ಕಾರ್ಡ್​ ಆಗಿಯೇ ಮುಂದುವರಿಯಲಿದೆ ಎಂದು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ. | Read More

ETV Bharat Live Updates - VIJAYANAGARA

01:17 PM, 20 Nov 2024 (IST)

ಹುಟ್ಟುಹಬ್ಬಕ್ಕೆ ಬಟ್ಟೆ ತಂದಿಟ್ಟಿದ್ದೆ, ನಮ್ಮ ಮನೆ ದೇವರಾಗಿದ್ದ ಮಗಳ ಪ್ರಾಣವೇ ಹೋಯ್ತು; ತಂದೆಯ ಕಣ್ಣೀರು

ಎಲೆಕ್ಟ್ರಿಕಲ್​​ ಬೈಕ್​​ ಶೋರೂಂನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಯುವತಿಯ ತಂದೆ 'ತನ್ನ ಮಗಳು ಮನೆ ದೇವರು. ಇಂದು ಅವಳ ಹುಟ್ಟುಹಬ್ಬ. ಇಷ್ಟಾದರೂ ಕಂಪನಿ ಕಡೆಯಿಂದ ಒಂದು ಕರೆಯೂ ಬರಲಿಲ್ಲಾ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. | Read More

ETV Bharat Live Updates - RAJAJINAGAR FIRE ACCIDENT

12:23 PM, 20 Nov 2024 (IST)

ಮಂಗಳೂರು: 'ಡ್ರೀಮ್​​ ಡೀಲ್ ಡ್ರಾ'ದಲ್ಲಿ ಸಿಬ್ಬಂದಿಯ ವಂಚನೆಯಾಟ: ವಿಡಿಯೋ ವೈರಲ್ ಬಳಿಕ ಸಂಸ್ಥೆಯ ಸ್ಪಷ್ಟನೆ

ಡ್ರೀಮ್​​ ಡೀಲ್​ ಕಂಪನಿಯ ತಿಂಗಳ ಬಹುಮಾನದ ಡ್ರಾದಲ್ಲಿ ಸಿಬ್ಬಂದಿ ಎಸಗಿದ ವಂಚನೆ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದ್ದಲ್ಲದೇ, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. | Read More

ETV Bharat Live Updates - DREAM DEAL DRAW VIDEO

11:20 AM, 20 Nov 2024 (IST)

ರಾಯಚೂರು: ಸಿ.ಎ. ಸೈಟ್‌ನಲ್ಲಿ ನಿರ್ಮಿಸಿದ್ದ ದೇವಸ್ಥಾನ ರಾತ್ರೋರಾತ್ರಿ ತೆರವು

ಸಿ.ಎ. ಸೈಟ್‌ನಲ್ಲಿ Civic Amenities (CA) ನಿರ್ಮಾಣ ಮಾಡಲಾಗಿದ್ದ ದೇವಸ್ಥಾನವನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಗಿದೆ. | Read More

ETV Bharat Live Updates - RAICHUR

11:16 AM, 20 Nov 2024 (IST)

ಸಾಫ್ಟ್‌ವೇರ್​​ ಇಂಜಿನಿಯರ್​ ಮಗನ ಸಲಹೆಯಂತೆ ಡ್ರ್ಯಾಗನ್​ ಫ್ರೂಟ್​ ಬೆಳೆದು ಯಶಸ್ವಿಯಾದ ತಂದೆ, ಕೈ ತುಂಬಾ ಆದಾಯ

ಬೆಳಗಾವಿಯಲ್ಲಿ ತಂದೆ-ಮಗ ಸೇರಿ ಡ್ರ್ಯಾಗನ್​ ಫ್ರೂಟ್​ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ. 'ಈಟಿವಿ ಭಾರತ' ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ಈ ಕುರಿತು ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates - DRAGON FRUIT SUCCESS STORY

10:38 AM, 20 Nov 2024 (IST)

ಬೆಂಗಳೂರಿನ ಎಲೆಕ್ಟ್ರಿಕಲ್ ಬೈಕ್‌​ ಶೋ ರೂಂನಲ್ಲಿ ಅಗ್ನಿ ಅನಾಹುತ ಪ್ರಕರಣ: ಮಾಲೀಕ ನಾಪತ್ತೆ, ಎಫ್ಐಆರ್ ದಾಖಲು

ಮಂಗಳವಾರ ಬೆಂಗಳೂರಿನ ರಾಜಾಜಿನಗರದ ಎಲೆಕ್ಟ್ರಿಕಲ್ ಬೈಕ್​ ಶೋ ರೂಂನಲ್ಲಿ ನಡೆದ ಅಗ್ನಿ ದುರಂತ ಘಟನೆಗೆ ಸಂಬಂಧಿಸಿದಂತೆ ಮಾಲೀಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. | Read More

ETV Bharat Live Updates - BENGALURU

09:37 AM, 20 Nov 2024 (IST)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಚಂಪಾಷಷ್ಠಿ ಮಹಾರಥೋತ್ಸವ: ಪೂಜಾ ಸೇವೆ, ಉತ್ಸವಾದಿಗಳ ವಿವರ

ನಾಗಪೂಜೆಗೆ ಹೆಸರುವಾಸಿಯಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಐತಿಹಾಸಿಕ ಚಂಪಾಷಷ್ಠಿ ಮಹಾರಥೋತ್ಸವ ಡಿಸೆಂಬರ್​ 7ರಂದು ಜರುಗಲಿದೆ. | Read More

ETV Bharat Live Updates - KUKKE SUBRAHMANYA

09:31 AM, 20 Nov 2024 (IST)

ವೇಸ್ಟ್ ಹೂವಿನಿಂದ ಅಗರಬತ್ತಿ ತಯಾರಿಕೆ: ಮಂಗಳೂರಿನ 'ಸಾನಿಧ್ಯ' ವಸತಿ ಶಾಲೆ ವಿಶೇಷಚೇತರ ಕೌಶಲ್ಯ

ಮಂಗಳೂರಿನ 'ಸಾನಿಧ್ಯ' ವಸತಿ ಶಾಲೆಯಲ್ಲಿ ವಿಶೇಷಚೇತನ ವಿದ್ಯಾರ್ಥಿಗಳು ತ್ಯಾಜ್ಯ ಹೂವನ್ನು ಒಣಗಿಸಿ, ಹುಡಿ ಮಾಡಿ ಅಗರಬತ್ತಿ ತಯಾರಿಸುತ್ತಿದ್ದಾರೆ. ಈ ಕುರಿತು 'ಈಟಿವಿ ಭಾರತ್'​ ಪ್ರತಿನಿಧಿ ವಿನೋದ್ ಪುದು ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates - MANGALURU SANIDHYA SCHOOL

08:20 AM, 20 Nov 2024 (IST)

ಬೆಳಗಾವಿಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿ, ಆಸ್ಪತ್ರೆ ನಿರ್ದೇಶಕರಿಗೆ ಘೇರಾವ್ ಹಾಕಿದ್ದಾರೆ. | Read More

ETV Bharat Live Updates - BIMS HOSPITAL

08:12 AM, 20 Nov 2024 (IST)

ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಮಂಗಳವಾರ, ಶುಕ್ರವಾರ ವಿಶೇಷ ಬಸ್

ಈಗಾಗಲೇ ಕಲ್ಪಿಸಿದ್ದ ವಿಶೇಷ ಬಸ್​ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಭಕ್ತರ ಬೇಡಿಕೆಯ ಮೇರೆಗೆ ಛಟ್ಟಿ ಅಮವಾಸ್ಯೆಯವರೆಗೆ ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ತಿಳಿಸಿದೆ. | Read More

ETV Bharat Live Updates - HUBBALLI

08:09 AM, 20 Nov 2024 (IST)

ಮೆಟ್ರೋ, ಬಸ್ ಎಲ್ಲಿ ಬೇಕಾದ್ರೂ ಬಳಸಿ ಇ-ಕಿಕ್ ಸ್ಕೂಟರ್: ಮಡಚಿ ಬ್ಯಾಗ್​ನಲ್ಲೂ ಇಡಬಹುದು!

ನೀವು ಚಲಿಸುವುದಲ್ಲದೆ, ನಿಮ್ಮ ಬ್ಯಾಗ್​ನಲ್ಲಿಯೂ ಹೊತ್ತೊಯ್ಯಬಹುದಾದ ಪರಿಸರಸ್ನೇಹಿ ಇ-ಕಿಕ್​ ಸ್ಕೂಟರ್​ ವಾಹನವನ್ನು ರೋಡ್ಸ್ ಬೋರ್ಡ್ಸ್ ಕಂಪೆನಿ ಪರಿಚಯಿಸಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್​ನಲ್ಲಿ ಪ್ರದರ್ಶನಕ್ಕಿಡಲಾಗಿದೆ. | Read More

ETV Bharat Live Updates - BENGALURU

08:06 AM, 20 Nov 2024 (IST)

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಸರ್ಕಾದಿಂದಲೇ ತಜ್ಞ ವೈದ್ಯರಿಂದ 'ಉಚಿತ ಸೆಕೆಂಡ್ ಒಪಿನಿಯನ್'

ರಾಜ್ಯದಲ್ಲಿ ಸರ್ಜರಿಗಳ ಕುರಿತು ಆತಂಕದಲ್ಲಿರುವವರಿಗೆ ನೆರವಾಗಲು 'ಸೆಕೆಂಡ್ ಒಪಿನಿಯನ್' ಯೋಜನೆ ಜಾರಿಗೆ ತರಲಾಗಿದೆ. ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸ ತುಂಬುವ ನೂತನ ಕಾರ್ಯಕ್ರಮ ಇದಾಗಿದೆ. | Read More

ETV Bharat Live Updates - SECOND OPINION PLAN

08:01 AM, 20 Nov 2024 (IST)

ದೇಶದ ಸೆಮಿಕಂಡಕ್ಟರ್ ವಹಿವಾಟು ವಾರ್ಷಿಕ 100 ಶತಕೋಟಿ ಡಾಲರ್ ತಲುಪಲಿದೆ: ಮೂರ್ತಿ ದಸಾಕ

ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ (ಬಿಟಿಎಸ್) 'ಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿ' ಕುರಿತು ಗೋಷ್ಠಿ ನಡೆಯಿತು. | Read More

ETV Bharat Live Updates - MURTY DASAKA

07:21 AM, 20 Nov 2024 (IST)

ಸರ್ಕಾರದ ಗುತ್ತಿಗೆ, ಟೆಂಡರ್​ಗಳಲ್ಲಿ ಮಧ್ಯಸ್ಥಿಕೆ ಕಲಂ ರದ್ದುಗೊಳಿಸಲು ನಿರ್ಧಾರ: ಹೆಚ್.ಕೆ.ಪಾಟೀಲ್

ಮಧ್ಯಸ್ಥಿಕೆ ಕಲಂ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡುತ್ತಿದ್ದು, ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. | Read More

ETV Bharat Live Updates - BENGALURU

06:51 AM, 20 Nov 2024 (IST)

ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್‌ ಮಾಡೆಲ್‌ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ

ಭಾರತದಲ್ಲಿ ಎಂದಿಗೂ ಫೌಂಡೇಷನ್‌ ಲೆವೆಲ್‌ ಎಐಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಗೂಗಲ್‌ ಇಂಡಿಯಾ ರಿಸರ್ಚ್‌ ತಂಡದ ಮುಖ್ಯಸ್ಥ ಮನೀಶ್‌ ಗುಪ್ತಾ ಹೇಳಿದರು. | Read More

ETV Bharat Live Updates - ಬೆಂಗಳೂರು ತಂತ್ರಜ್ಞಾನ ಶೃಂಗಸಭೆ
Last Updated : Nov 20, 2024, 11:00 PM IST

ABOUT THE AUTHOR

...view details