ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ತಮ್ಮ ಕೆಳ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಮುಕ್ತ ತನಿಖೆ ಮಾಡೋಣ ಎಂದು ಧೈರ್ಯ ತುಂಬಿದ್ದಾರೆ. | Read More
Karnataka News - Karnataka Today Live : ಕರ್ನಾಟಕ ವಾರ್ತೆ Sat Sep 28 2024 ಇತ್ತೀಚಿನ ಸುದ್ದಿ
Published : Sep 28, 2024, 7:15 AM IST
|Updated : Sep 28, 2024, 10:42 PM IST
'ಆರೋಪಗಳು ಶುದ್ಧ ಸುಳ್ಳು': ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ - ADGP Chandrashekhar Letter
ಹುಬ್ಬಳ್ಳಿಗೂ ಬಂತು ರಿಯಾಯಿತಿ ದರದ ಈರುಳ್ಳಿ: ಗ್ರಾಹಕರಲ್ಲಿ ಖುಷಿಯೋ ಖುಷಿ - Low price onion
ಕೇಂದ್ರ ಸರ್ಕಾರ ಬೆಲೆ ಸ್ಥಿರೀಕರಣ ನಿಧಿ ಅಡಿ 550 ಉತ್ಪನ್ನಗಳನ್ನು ಗುರುತಿಸಿದ್ದು, ಯಾವ ಉತ್ಪನ್ನದ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತದೋ ಅಂತಹ ಉತ್ಪನ್ನವನ್ನು ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರ ಹೊರೆ ಇಳಿಸುವ ಕೆಲಸ ಮಾಡುತ್ತಿದೆ. | Read More
ರಾಮನಗರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಂಕೆ ಮಾಂಸ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು - Forest officers seized deer meat
ಜಿಂಕೆ ಮಾಂಸ ಸಂಗ್ರಹಿಸಿ ಇಟ್ಟಿದ್ದ ಆರೋಪಿಯ ಮನೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹಾರೋಬೆಲೆಯ ಜ್ಯೋತಿ ನಗರದಲ್ಲಿ ನಡೆದಿದೆ. | Read More
ರಾಜ್ಯದಲ್ಲಿ ಮುಂಗಾರು ಅಂತ್ಯಕ್ಕೆ ಒಂದೆರಡು ದಿನ ಬಾಕಿ: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Karnataka Rain Forecast
ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಿದೆ. | Read More
ಹೊಟ್ಟೆ ತುಂಬ ಹಿಟ್ಟು - ಬಾಯಿ ತುಂಬ ಅನ್ನ: ಅಮ್ಮನ ಮಾತು ಸ್ಮರಿಸಿದ ಸಿ ಎಂ ಸಿದ್ದರಾಮಯ್ಯ - CM Siddaramaiah
ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಯ ಕುರಿತು ಮಾತನಾಡಿದರು. ನಾನು ಅನ್ನಭಾಗ್ಯ ಜಾರಿಗೆ ತರಲು ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ಕಾರಣ ಎಂದು ಹೇಳಿದರು. | Read More
ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ಸುಲಿಗೆ ಆರೋಪ: ನಿರ್ಮಲಾ ಸೀತಾರಾಮನ್, ಕಟೀಲ್ ಸೇರಿ ಹಲವರ ವಿರುದ್ಧ ಎಫ್ಐಆರ್ - FIR Against Nirmala Sitharaman
ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಸುಲಿಗೆ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. | Read More
ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡನ್ನೇ ಹೆದರಿಸುತ್ತಿದ್ದಾರೆ: ಪ್ರಲ್ಹಾದ್ ಜೋಶಿ - Pralhad Joshi
ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿಚಾರದಲ್ಲಿ ಏನು ಹೇಳಿದ್ದರು ಎಂಬುದು ಗೊತ್ತಿದೆ. ಈಗ ಎಫ್ಐಆರ್ ದಾಖಲಾಗಿರುವ ಕಾರಣ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದರು. | Read More
ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ರಾಷ್ಟ್ರೀಯ ಅಹಿಂದ ಸಂಘಟನೆ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಜನಯಾತ್ರೆ - Ahinda Supports CM
ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಅಹಿಂದ ಸಂಘಟನೆ ಅ. 3 ಹಾಗೂ 4 ರಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೈಕ್ಗಳ ಮೂಲಕ ಜನಯಾತ್ರೆ ಕೈಗೊಂಡಿದೆ. | Read More
ಸಚಿವ ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅಡ್ವೊಕೇಟ್ ಜನರಲ್ಗೆ ಟಿ.ಜೆ.ಅಬ್ರಹಾಂ ಮನವಿ - Abraham Writes to Advocate General
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಎತ್ತಿ ಹಿಡಿದ ಹೈಕೋರ್ಟ್ ಆದೇಶದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ಸಂಬಂಧ ರಾಜ್ಯ ಅಡ್ವೊಕೇಟ್ ಜನರಲ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಪತ್ರ ಬರೆದಿದ್ದಾರೆ. | Read More
ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಸಿಎಂ - DDCM D K Shivakumar
ಬೆಂಗಳೂರಿನ ಎಎಸ್ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಶನಿವಾರ ಸಮಾಲೋಚನೆ ನಡೆಸಿದರು. | Read More
ಮಂಗಳೂರು: ಅಪ್ರಾಪ್ತೆ ಅತ್ಯಾಚಾರ ಪ್ರಕರಣದ ಆರೋಪಿ ಖುಲಾಸೆ - Minor Rape Accused Acquitted
ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ. ಮಂಗಳೂರಿನ ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದೆ. | Read More
ಸೆಣಬಿನ ಚೀಲಗಳಲ್ಲೇ ಶೇ.20ರಷ್ಟು ಸಕ್ಕರೆ ತುಂಬಲು ಕೇಂದ್ರದ ಆದೇಶ: ತಡೆ ತೆರವುಗೊಳಿಸಿದ ದ್ವಿಸದಸ್ಯ ಪೀಠ - Sugar Packing In Jute Bags
ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿಯೇ ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ. | Read More
ಫ್ಲೈಓವರ್ ಕಾಮಗಾರಿ ವೇಳೆ ಕಬ್ಬಿಣದ ಪೈಪ್ ಬಿದ್ದು ಎಎಸ್ಐ ಸಾವು ಪ್ರಕರಣ: ಮತ್ತೋರ್ವನ ಬಂಧನ - ASI Death Case
ಕಬ್ಬಿಣದ ರಾಡ್ ಬಿದ್ದು ಮೃತಪಟ್ಟ ಎಎಸ್ಐ ನಾಭಿರಾಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. | Read More
ಕಿವುಡರ ರಾಜ್ಯ ಮಟ್ಟದ ಕ್ರೀಡಾಕೂಟ: 25 ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ - Deaf State Level Games
ಕ್ರೀಡಾಕೂಟದಲ್ಲಿ ಭಾಗವಹಸಿದ್ದ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಕರು ಹಾಗೂ ಇತರ ಕ್ರೀಡಾಪಟುಗಳು ಸನ್ನೆಗಳ ಮೂಲಕ ಸೂಚನೆಗಳನ್ನು ನೀಡುತ್ತಾ, ಹುರಿದುಂಬಿಸುವ ಕೆಲಸ ಮಾಡಿದರು. | Read More
ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇವೆ : ಮಲ್ಲಿಕಾರ್ಜುನ ಖರ್ಗೆ - Mallikarjuna kharge
ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿರುವ ಆರೋಪಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. | Read More
ಮಂಗಳೂರು: ಚಲಿಸುತ್ತಿರುವಾಗಲೇ ಐಷಾರಾಮಿ ಕಾರು ಬೆಂಕಿಗಾಹುತಿ; ವಿಡಿಯೋ - BMW Car Fire
ಐಷಾರಾಮಿ ಬಿಎಂಡಬ್ಲ್ಯೂ ಕಾರೊಂದು ಸಂಚರಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಬಳಿ ನಡೆದಿದೆ. | Read More
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಬೇರೆ ಕಾರ್ಯಗಳಿಗೆ ಬಳಕೆ: ಹೈಕೋರ್ಟ್ ತೀವ್ರ ತರಾಟೆ - High Court
ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಸರ್ಕಾರದ ನಡೆಗೆ ಹೈಕೋರ್ಟ್ ಆಕ್ರೋಶ ಹೊರಹಾಕಿದೆ. | Read More
ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ, ರಾಜಕೀಯವಾಗಿಯೇ ಉತ್ತರ ಕೊಡುತ್ತೇವೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - Minister Lakshmi Hebbalkar
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದಕ್ಕೆ ರಾಜಕೀಯವಾಗಿಯೇ ಉತ್ತರ ನೀಡುವುದಾಗಿ ಹೇಳಿದ್ದಾರೆ. | Read More
ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್ ಬಸ್ ಅನಾವರಣ; ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ - Science Bus unveiled
ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್ ಬಸ್ ಅನಾವರಣಗೊಳಿಸಲಾಗಿದ್ದು, ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ ಕಲ್ಪಿಸಲಾಗಿದೆ. | Read More
ರೈತರ ದರ್ಖಾಸ್ತು ಪೋಡಿ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರದಿಂದ ದೃಢ ಹೆಜ್ಜೆ: ಸಚಿವ ಕೃಷ್ಣ ಬೈರೇಗೌಡ - Good News For Farmers
ರಾಜ್ಯಾದ್ಯಂತ ಪೋಡಿ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೇ ಮಾದರಿಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. | Read More
ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ: ಸಿಎಂ ಸಿದ್ದರಾಮಯ್ಯ - cm siddaramaiah
ಬಿಜೆಪಿಯಲ್ಲಿರುವ ಭ್ರಷ್ಟಾಚಾರಿಗಳ ವಿರುದ್ಧ ಮೊದಲು ಪ್ರಧಾನಿ ಮೋದಿಯವರು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. | Read More
ಸುಮ್ಮನೆ ರಾಜೀನಾಮೆ ಕೊಡಲು ನನಗೆ ತಲೆ ಕೆಟ್ಟಿದ್ಯಾ? ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ - HD Kumaraswamy
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. | Read More
ಅಶ್ವಿನಿ ಪುನೀತ್ ರಾಜ್ಕುಮಾರ್ ಕೊಟ್ಟ ಸೈಕಲ್ನಲ್ಲಿ ವಿಶ್ವ ಪರ್ಯಟನೆ: 45 ದಿನಗಳಲ್ಲಿ ಕನ್ನಡ ಕಲಿತ ಅಪ್ಪು ಅಭಿಮಾನಿ - Appu Fan World tour on bicycle
ಈವರೆಗೆ 23,650 ಕಿಲೋಮೀಟರ್ ಪೂರ್ಣಗೊಳಿಸಿರುವ ಅಪ್ಪು ಅಭಿಮಾನಿ ಮುತ್ತು ಸೆಲ್ವನ್ 5 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಮೂರ್ಣಗೊಳಿಸಿ ಮುಂದಿನ ವರ್ಷ ಜನವರಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಬಳಿ ತಮ್ಮ ವಿಶ್ವ ಪರ್ಯಟನೆಗೆ ಅಂತ್ಯ ಹಾಡಲಿದ್ದಾರೆ. | Read More
ಕೇರಳ ಲಾರಿ ಚಾಲಕ ಅರ್ಜುನ್ ಮೃತದೇಹ ತಾಯ್ನಾಡಿಗೆ: ಅಂತಿಮ ದರ್ಶನ ಪಡೆದ ಗಡಿಭಾಗದ ಜನತೆ - last respect to Arjun
ಶಿರೂರು ದುರಂತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಅವರ ಅಂತಿಮ ದರ್ಶನಕ್ಕಾಗಿ ಗಡಿಭಾಗ ತಲಪಾಡಿಯಲ್ಲಿ ಜನಸ್ತೋಮ ಸೇರಿತ್ತು. | Read More
ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ಗೆ ಹುಸಿ ಬಾಂಬ್ ಬೆದರಿಕೆ - Hoax bomb threat
ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸುವುದಾಗಿ ಸಂದೇಶ ಕಳುಹಿಸಿದ್ದು, ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. | Read More
ಚಿಕ್ಕಮಗಳೂರು: ಮಾವನ ಮನೆ ಬಾಡೂಟಕ್ಕೆ ತೆರಳಲು ಪೊಲೀಸ್ ಜೀಪ್ನ್ನೇ ಕರೆಸಿಕೊಂಡ ಅಳಿಯ! ಮುಂದಾಗಿದ್ದೇನು? - Funny son in law
ಕಾಫಿನಾಡಿನ ಭೂಪನೊಬ್ಬ ತನ್ನ ಮಾವನ ಮನೆಗೆ ಬಾಡೂಟಕ್ಕೆ ತೆರಳಲು ವಾಹನ ಸಿಗದಿದ್ದಾಗ ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಆಮೇಲೇನಾಯ್ತು ಅನ್ನೋದರ ಮಾಹಿತಿ ಇಲ್ಲಿದೆ. | Read More
ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಸೇವೆ ಸ್ಥಗಿತದಿಂದ ಬಡ ರೋಗಿಗಳ ಪರದಾಟ: ಮುಖ್ಯವೈದ್ಯಾಧಿಕಾರಿಯ ಸ್ಪಷ್ಟನೆ - CT Scan Problem
ಬಡವರಿಗಾಗಿ ರಿಯಾಯಿತಿ ದರದಲ್ಲಿ ಸೇವೆ ವದಗಿಸಲಾಗುತ್ತಿರುವ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಕೇಂದ್ರಗಳು ತಾಂತ್ರಿಕ ಅಡಚಣೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದರಿಂದ ಹಾವೇರಿ ಜಿಲ್ಲೆಯ ಜನ ಪರದಾಡುವಂತಾಗಿದೆ. | Read More
ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್: ಅ.1ರಿಂದಲೇ ನಿಯಮ ಜಾರಿ - Hescom Rule
ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಅಕ್ಟೋಬರ್ 1ರಿಂದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೆಸ್ಕಾಂ ತಿಳಿಸಿದೆ. | Read More
ಶಾಸಕ ಮುನಿರತ್ನ ನಿವಾಸ, ಕಚೇರಿಗಳಲ್ಲಿ ಎಸ್ಐಟಿಯಿಂದ ಪರಿಶೀಲನೆ - SIT officers raid
ವೈಯಾಲಿಕಾವಲ್‌ನಲ್ಲಿರುವ ಶಾಸಕ ಮುನಿರತ್ನ ನಿವಾಸ ಸೇರಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳಿಂದ ತೀವ್ರ ಶೋಧ ನಡೆದಿದೆ. | Read More
ರಾತ್ರಿ ಹತ್ತು ಆದರೂ ಪ್ರಗತಿ ಪರಿಶೀಲನೆ ಸಭೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಿಎಂ ಸಿದ್ದರಾಮಯ್ಯ - review meeting
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು ಎಲ್ಲಾ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಅಭಿವೃದ್ಧಿಗಾಗಿ ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಕ್ತವಾಗಿ ಕೆಲಸ ಮಾಡುವಂತೆ ಸೂಚಿಸಿದರು. | Read More
ಬಸ್ಸಿನಲ್ಲಿ ಹಣ, ಒಡವೆ ಬ್ಯಾಗ್ ಬಿಟ್ಟಿದ್ದ ಪ್ರಯಾಣಿಕರು: ಮರಳಿಸಿ ಪ್ರಾಮಾಣಿಕತೆ ಮೆರೆದ NWKRTC ಸಿಬ್ಬಂದಿ - NWKRTC Honesty
ಬಸ್ಸಿನಲ್ಲಿ ಬಿಟ್ಟು ಹೋದ ಹಣ, ಒಡವೆ ಇದ್ದ ಬ್ಯಾಗ್ಅನ್ನು ಪ್ರಯಾಣಿಕರಿಗೆ ಮರಳಿಸಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. | Read More
ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡ್ತಾರಾ: ಸಿದ್ದರಾಮಯ್ಯ - CM Siddaramaiah
ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. | Read More
ಸರ್ಕಾರದ ಅನುಮತಿ ಪಡೆದು ಸಿಬಿಐ ರಾಜ್ಯದಲ್ಲಿ ತನಿಖೆ ಮಾಡುವಂತೆ ಆದೇಶ: ಗೃಹ ಸಚಿವ ಪರಮೇಶ್ವರ್ - Order to CBI
ಸಿಬಿಐಗೆ ಇತರ ರಾಜ್ಯಗಳಿಗೆ ತೆರಳಿ ತನಿಖೆ ಮಾಡಲು ಅವಕಾಶವಿದೆ. ಆದರೆ ಸದ್ಯ ರಾಜ್ಯ ಸರ್ಕಾರದ ಅನುಮತಿ ಪಡೆದು ರಾಜ್ಯದಲ್ಲಿ ಸಿಬಿಐ ತನಿಖೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು. | Read More
ಬೆಂಗಳೂಲ್ಲಿ ಲಾರಿ - ಆಟೋ ಡಿಕ್ಕಿ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು - Bengaluru Accident
ಬೆಂಗಳೂರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಲಾರಿ, ಆಟೋ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. | Read More
ರಾಜ್ಯದಲ್ಲಿ 4,071 ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗೆ ಅಸ್ತು; ಸಾವಿರಾರು ಜನರಿಗೆ ಉದ್ಯೋಗ ನಿರೀಕ್ಷೆ - Invest In Karnataka
ರಾಜ್ಯದಲ್ಲಿ 4,071.11 ಕೋಟಿ ಬಂಡವಾಳ ಹೂಡಿಕೆಯ 88 ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. | Read More
ಬೆದರಿಕೆ ಹಾಕುವಂತಹ ಸಂಘಗಳಿಗೆ ಕಡಿವಾಣ ಅಗತ್ಯವಿದೆ: ಹೈಕೋರ್ಟ್ - LPG Customers Association
ಅನುಮತಿ ಇಲ್ಲದೇ ಎಲ್ಪಿಜಿ ಗ್ರಾಹಕರನ್ನು ವರ್ಗಾಯಿಸದಂತೆ ತೈಲ ಕಂಪನಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. | Read More
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ನಾಳೆ ಕನ್ನಡ ಕಡ್ಡಾಯ ಪರೀಕ್ಷೆ: 5.75 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ - VA Recruitment exam
1000 ಗ್ರಾಮ ಆಡಳಿತ ಅಧಿಕಾರಿ ಹಾಗೂ 98 ಜಿಟಿಟಿಸಿ ಹುದ್ದೆಗಳ ನೇಮಕಾತಿಗೆ ಭಾನುವಾರ (ಸೆ.29) ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ. | Read More
ರಾಜ್ಯದಲ್ಲಿ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ; ಮೂರುವರೆ ಲಕ್ಷ ಉದ್ಯೋಗ ಸೃಷ್ಟಿ- ಸಚಿವ ಖರ್ಗೆ - Minister Priyank Khrage
ಕರ್ನಾಟಕದಲ್ಲಿ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆಕರ್ಷಿಸಿ, ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. | Read More
ಯತ್ನಾಳ್ ವಿರುದ್ಧದ ಕೇಸ್ ರದ್ದು; ಬಿಎನ್‌ಎಸ್‌ಎಸ್ ಅಡಿಯಲ್ಲಿ ಹೈಕೋರ್ಟ್ನಿಂದ ಮೊದಲ ಆದೇಶ - High Court
ಸಚಿವ ಶಿವಾನಂದ ಎಸ್. ಪಾಟೀಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಬಸನಗೌಡ ಪಾಟೀಲ ಯತ್ನಾಳ್ಗೆ ಜಾರಿ ಮಾಡಿದ್ದ ನೋಟಿಸ್ ಪ್ರಕ್ರಿಯೆಯಲ್ಲಿ ಕಾನೂನು ಲೋಪ ಕಂಡು ಬಂದಿದೆ ಎಂದು ಹೈಕೋರ್ಟ್ ತಿಳಿಸಿದೆ. | Read More