ಕರ್ನಾಟಕ

karnataka

ETV Bharat / state

ಹೊಸ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಗಿಫ್ಟ್: ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನ ಪರಿಷ್ಕರಣೆ - REVISION OF ACCUMULATED PAY

ಸಿಎಂ, ಡಿಸಿಎಂ, ಸಂಪುಟ ಸಚಿವರ, ವಿಧಾನಸಭೆ ಮತ್ತು ಪರಿಷತ್​ನ ಸೇರಿ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಗಿಫ್ಟ್ ನೀಡಿದೆ.

ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನ ಪರಿಷ್ಕರಣೆ
ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನ ಪರಿಷ್ಕರಣೆ (ETV Bharat)

By ETV Bharat Karnataka Team

Published : Dec 24, 2024, 3:56 PM IST

ಬೆಂಗಳೂರು:ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಕಾರ್ಯಾಲಯ ಸೇರಿದಂತೆ ವಿವಿಧ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು 2024ನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅದರಂತೆ ಗುತ್ತಿಗೆ ಆಧಾರದ ಸಿಬ್ಬಂದಿಯ ಪರಿಷ್ಕೃತ ಸಂಚಿತ ವೇತನ ನ.1 ರಿಂದ ಜಾರಿಗೆ ಬಂದಿದೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ, ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಕಾರ್ಯಾಲಯ, ಸಂಪುಟ ದರ್ಜೆ ಸಚಿವರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ, ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಗಳ ಆಪ್ತ ಶಾಖೆಗಳಲ್ಲಿ ಮತ್ತು ಕೆಲವು ಆಯೋಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಚಿತ ವೇತನ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನ ಪರಿಷ್ಕರಣೆ (ETV Bharat)
ಗುತ್ತಿಗೆ ಆಧಾರದ ಸಿಬ್ಬಂದಿಯ ಸಂಚಿತ ವೇತನ ಪರಿಷ್ಕರಣೆ (ETV Bharat)

ಹೊರಗುತ್ತಿಗೆ ಸಿಬ್ಬಂದಿಗೆ ಅನ್ವಯವಾಗಲ್ಲ: ಪರಿಷ್ಕೃತ ವೇತನ ಶ್ರೇಣಿಯ ವೇತನ ಹಂತವನ್ನು ಪರಿಷ್ಕರಿಸಿದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

ಯಾರಿಗೆ ಎಷ್ಟು ಪರಿಷ್ಕರಣೆ: ವಿಶೇಷ ಅಧಿಕಾರಿ/ವಿಶೇಷ ಕರ್ತವ್ಯಾಧಿಕಾರಿಗಳಿಗೆ 69,250 ರೂ., ಸಹಾಯಕರ ಹುದ್ದೆ ಮತ್ತು ಶೀಘ್ರ ಲಿಪಿಗಾರರಿಗೆ 49,050 ರೂ., ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರಿಗೆ 34,100 ರೂ. ಹಾಗೂ ಡಿ ದರ್ಜೆ ನೌಕರರಿಗೆ 27 ಸಾವಿರ ರೂ.ವರೆಗೆ ವೇತನ ಪರಿಷ್ಕರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೇ ನೌಕರರನ್ನು ವರ್ಗಾವಣೆ ಮಾಡಿದರೆ ಶಿಸ್ತು ಕ್ರಮ: ಆದೇಶ

ಇದನ್ನೂ ಓದಿ: ಮಾಸಿಕ 6 ಲಕ್ಷ ಜೀವನಾಂಶ- ಪತ್ನಿಯ ಬೇಡಿಕೆಗೆ ’ಹೈ’ ಆಕ್ಷೇಪ; ವೈವಾಹಿಕ ಸುಖಭೋಗಕ್ಕೆ ಅಡ್ಡಿಪಡಿಸುವುದು ಕ್ರೌರ್ಯಕ್ಕೆ ಸಮ; ಹೈಕೋರ್ಟ್​ ತೀರ್ಪುಗಳಿವು!

ABOUT THE AUTHOR

...view details