ಕರ್ನಾಟಕ

karnataka

ETV Bharat / state

'ಸತೀಶ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ': ಬೆಳಗಾವಿಯಲ್ಲಿ ಕರವೇ ಬ್ಯಾನರ್ - SATISHA JARAKIHOLI

ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ ಎಂದು ಬರೆಯಲಾದ ಹೋರ್ಡಿಂಗ್ಸ್ ಅಳವಡಿಸಲಾಗಿದೆ.

banner
ಕರವೇ ಬ್ಯಾನರ್ (ETV Bharat)

By ETV Bharat Karnataka Team

Published : Oct 13, 2024, 12:57 PM IST

ಬೆಳಗಾವಿ:ರಾಜ್ಯದಲ್ಲಿಮುಖ್ಯಮಂತ್ರಿ ಬದಲಾವಣೆ ವಿಚಾರ ಎಷ್ಟು ಚರ್ಚೆಯಾಗುತ್ತಿದೆಯೋ, ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎನ್ನುವುದೂ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ‌ಜಾರಕಿಹೊಳಿ 'ಭವಿಷ್ಯದ‌ ಮುಖ್ಯಮಂತ್ರಿ' ‌ಎಂದು ಬ್ಯಾನರ್ ಅಳವಡಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ‌ರಕ್ಷಣಾ ವೇದಿಕೆ‌ ನಾರಾಯಣಗೌಡ ಬಣದ ಮುಖಂಡರು ಹೋರ್ಡಿಂಗ್ಸ್ ಅಳವಡಿಸಿದ್ದಾರೆ. ಐವರು ಜಾರಕಿಹೊಳಿ ಸಹೋದರರು, ಸಂಸದೆ ಪ್ರಿಯಾಂಕಾ‌, ರಾಹುಲ್ ಜಾರಕಿಹೊಳಿ ಭಾವಚಿತ್ರಗಳು ಬ್ಯಾನರ್​​ನಲ್ಲಿವೆ.

ಕರ್ನಾಟಕ ‌ರಾಜ್ಯೋತ್ಸವ, ದೀಪಾವಳಿ, ವಾಲ್ಮೀಕಿ ‌ಜಯಂತಿಗೆ ಶುಭ ಕೋರುವ ಬ್ಯಾನರ್ ಇದಾಗಿದ್ದು, ಬೆಳಗಾವಿಯ ಚೆನ್ನಮ್ಮ ‌ವೃತ್ತದಲ್ಲಿ ಅಳವಡಿಸಲಾಗಿದೆ. ಸತೀಶ ಜಾರಕಿಹೊಳಿ ಭಾವಚಿತ್ರದ ಕೆಳಗೆ ಜಿಲ್ಲಾ ಉಸ್ತುವಾರಿ ಬೆಳಗಾವಿ, ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ, ಭವಿಷ್ಯದ ಮುಖ್ಯಮಂತ್ರಿ ಎಂದು ಬರೆಯಲಾಗಿದೆ.

ಕರವೇ ಬ್ಯಾನರ್ (ETV Bharat)

ಕರವೇ ಮುಖಂಡರು ಹೇಳುವುದೇನು?: ಬ್ಯಾನರ್ ಅಳವಡಿಸಿರುವ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಈ ಕುರಿತು ಪ್ರತಿಕ್ರಿಯಿಸಿದ್ದು, ''ಒಂದು ವೇಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಸಂಗ ಒದಗಿ ಬಂದರೆ ಸತೀಶ ಜಾರಕಿಹೊಳಿ ಅವರನ್ನೇ ಸಿಎಂ ಮಾಡಬೇಕು‌. ಇದರಿಂದ ಇಡೀ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಬ್ಯಾನರ್ ಬರೆಸಿದ್ದೇವೆ'' ಎಂದು ಹೇಳಿದರು.

ಇದನ್ನೂ ಓದಿ:ಬಾಬಾ ಸಿದ್ದಿಕಿ ಕೊಲೆ: 'ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ'- ಡಿ.ಕೆ.ಶಿವಕುಮಾರ್

ಇತ್ತೀಚೆಗೆ, ಸತೀಶ ಜಾರಕಿಹೊಳಿ ವಿವಿಧ ಸಚಿವರ ಜೊತೆಗೆ ಸಭೆಗಳನ್ನು ನಡೆಸಿರುವುದು ಹಾಗೂ ದೆಹಲಿ ಪ್ರವಾಸದಿಂದಾಗಿ ಅವರು ಸಿಎಂ ರೇಸ್​​ನಲ್ಲಿದ್ದಾರೆ ಎಂಬುದು ಚರ್ಚೆಯಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಅವರು, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ತಾವು 2028ರಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:'ಬಿಜೆಪಿಯವರು ಆರ್​ಎಸ್​ಎಸ್ ಮೇಲಿನ​ ಕೇಸ್​ ವಾಪಸ್​ ಪಡೆದಿದ್ದರಲ್ಲವೇ?': ಸಿಎಂ ಸಿದ್ದರಾಮಯ್ಯ

ABOUT THE AUTHOR

...view details