ಅಹಮದಾಬಾದ್ : ಯುವ ನಾಯಕ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡದ ಎದುರು ಪ್ಯಾಟ್ ಕಮಿನ್ಸ್ ಮುನ್ನಡೆಸುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಗುಜರಾತ್ ಫೀಲ್ಡಿಂಗ್ ಮಾಡಲಿದೆ. ದೇಶದ ಅತಿ ದೊಡ್ಡದಾದ ಅಹಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ಗಳ ಟಾರ್ಗೆಟ್ ನೀಡಿ ಗೆದ್ದಿರುವ ಹೈದರಾಬಾದ್ ಇಂದು ಕೂಡ ಅದೇ ವಿಶ್ವಾಸದಲ್ಲಿ ಕಣಕ್ಕಿಳಿದಿದೆ. ಇನ್ನೊಂದೆಡೆ ಮಾಜಿ ರನ್ನರ್ ಅಪ್ ಗುಜರಾತ್ ಸಹ ತನ್ನ ಉತ್ತಮ ತಂತ್ರಗಾರಿಕೆಯೊಂದಿಗೆ ಕಮಿನ್ಸ್ ಪಡೆಯನ್ನು ಕಟ್ಟಿಹಾಕುವ ಉತ್ಸಾಹದಲ್ಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಗುಜರಾತ್ ಮತ್ತು ಹೈದರಾಬಾದ್ ತಂಡಗಳು ತಲಾ ಒಂದು ಗೆಲುವು ಮತ್ತು ಒಂದು ಸೋಲು ಕಂಡಿವೆ.