ETV Bharat / state

ಯಾರೋ ಒಂದಿಬ್ಬರು ಹಗುರವಾಗಿ ಮಾತಾಡುತ್ತಿರಬಹುದು, ತಲೆಕೆಡಿಸಿಕೊಳ್ಳುವುದು ಬೇಡ : ಬಿಎಸ್​ವೈ - FORMER CM B S YEDIYURAPPA

ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಭಿನ್ನರ ಮಾತಿನ ಕುರಿತು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.

former-cm-b-s-yediyurappa
ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ (ETV Bharat)
author img

By ETV Bharat Karnataka Team

Published : Jan 11, 2025, 6:41 AM IST

ಬೆಂಗಳೂರು : ಯಾರೋ ಒಂದಿಬ್ಬರು ಹಗುರವಾಗಿ ಮಾತನಾಡುತ್ತಿರಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಹೈಕಮಾಂಡ್ ನಾಯಕರು ಕೈಕಟ್ಟಿ ಕೂತಿದ್ದಾರೆ ಎಂದು ಯಾರೂ ಭಾವಿಸಬೇಡಿ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಪರೋಕ್ಷವಾಗಿ ಭಿನ್ನರ ಬಗ್ಗೆ ಮಾತನಾಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಜಿ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸುಮ್ಮನೆ ಕುಳಿತಿಲ್ಲ. ಆ ರೀತಿ ನೀವು ಭಾವಿಸಿದರೆ ಅದು ತಪ್ಪು. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ವರಿಷ್ಠರು ಮಾಡ್ತಾರೆ. ನೀವು ಯಾರು ಇನ್ಮೇಲೆ ಅದಕ್ಕೆ ರಿಯಾಕ್ಟ್ ಮಾಡಬೇಡಿ ಎಂದು ಖಡಕ್ ಸಂದೇಶ ನೀಡಿದರು.

ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಮಾತನಾಡಿದರು (ETV Bharat)

ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ ಅವರು ಯಾರಿಗೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವ ಸಂಶಯ, ಅನುಮಾನ ಇಟ್ಟುಕೊಳ್ಳೋದು ಬೇಡ ಎಂದು ಹೇಳುವ ಮೂಲಕ ಸಭೆಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂಬ ಸುಳಿವು ಕೊಟ್ಟರು.

ಯತ್ನಾಳ್ ತಂಡದ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಬಾರದು. ಎಲ್ಲವೂ ಹೈಕಮಾಂಡ್ ಗಮನಕ್ಕೆ ಇದೆ. ಹೈಕಮಾಂಡ್​ನವರೇ ಇವರ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಅನಾವಶ್ಯಕ ಮಾತನಾಡಿ ಗೊಂದಲ ಮೂಡಿಸದಂತೆ ಬಿಎಸ್​ವೈ ಸೂಚನೆ ನೀಡಿದರು.

ರಾಜ್ಯಾಧ್ಯಕ್ಷರು ಜಿಲ್ಲಾ ಪ್ರವಾಸಕ್ಕೆ ಬರುತ್ತಾರೆ, ನಾನೂ ಬರುತ್ತೇನೆ. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರನ್ನ ಸೇರಿಸಿ ಸಭೆ ನಡೆಸಬೇಕು. ಹಾಗೂ ಅವರ ಅಹವಾಲನ್ನು ಕೇಳಬೇಕು. ಆ ಮೂಲಕ ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ದರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಯಲ್ಲಿ ಒಡಕು ಇರುವುದು ನಿಜ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ: ಬಿ ಎಸ್ ಯಡಿಯೂರಪ್ಪ - FORMER CM B S YEDIYURAPPA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.