ಬೆಂಗಳೂರು:ಬಿಎಂಟಿಸಿ ಬಸ್‌ಗಳಲ್ಲಿ ಜನಸಂದಣಿ ಇರುವ ವೇಳೆ ಪ್ರಯಾಣಿಕರ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ 6 ಮಂದಿ ಅಂತರ್‌ರಾಜ್ಯ ಕಳ್ಳರನ್ನು ವೈಟ್ಫೀಲ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಾಯಿ ಕುಮಾರ್, ಬಾಲರಾಜು, ಪೆದ್ದರಾಜು, ರವಿತೇಜ, ರಮೇಶ್ ಹಾಗೂ ವೆಂಕಟೇಶ್ ಬಂಧಿತರು. ಆರೋಪಿಗಳಿಂದ 30 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಯ 107 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ರಶ್ ಇರುವ ಬಸ್‌ಗಳಲ್ಲಿ ಮೊಬೈಲ್ ದೋಚುತ್ತಿದ್ದ ಅಂತರ್‌ರಾಜ್ಯ ಕಿಸೆಕಳ್ಳರ ಬಂಧನ: ₹30 ಲಕ್ಷ ಮೌಲ್ಯದ 107 ಫೋನ್‌ಗಳು ವಶಕ್ಕೆ - Mobile Theft Case - MOBILE THEFT CASE
ಜನಸಂದಣಿ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಮೊಬೈಲ್ ಫೋನ್‌ಗಳನ್ನು ಎಗರಿಸುತ್ತಿದ್ದ ಅಂತರ್‌ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
Published : Apr 12, 2024, 4:01 PM IST
ಬಸ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು ಬಾಡಿಗೆಗೆ ರೂಮ್ ಪಡೆದು ಬಳಿಕ ಕೃತ್ಯ ಎಸಗುತ್ತಿದ್ದರು. ಜನಸಂದಣಿ ಇರುವ ಬಸ್‌ಗಳನ್ನೇ ಗುರಿಯಾಗಿಸಿಕೊಂಡು ಪ್ರಯಾಣಿಕರ ಮೊಬೈಲ್ ಫೋನ್‌ಗಳನ್ನು ಅವರ ಅರಿವಿಗೆ ಬಾರದಂತೆ ಎಗರಿಸುತ್ತಿದ್ದರು. ನಂತರ ಕದ್ದ ಮಾಲುಗಳನ್ನು ಒಂದೆಡೆ ಶೇಖರಿಸಿ, ಅವುಗಳನ್ನು ಬಸ್‌ಗಳ ಮೂಲಕವೇ ಅನ್ಯರಾಜ್ಯಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಆರೋಪಿಗಳು ಕಾಡುಗೋಡಿಯ ಚೆನ್ನಸಂದ್ರದಲ್ಲಿ ಬಾಡಿಗೆ ರೂಮ್‌ನಲ್ಲಿಟ್ಟಿದ್ದ 80 ವಿವಿಧ ಕಂಪನಿಯ ಮೊಬೈಲ್ ಫೋನ್, ಅವಲಹಳ್ಳಿ ಬಾಡಿಗೆ ರೂಮ್‌ನಲ್ಲಿಟ್ಟಿದ್ದ 24 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 107 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಸಾವು - Crime News