ಕರ್ನಾಟಕ

karnataka

ETV Bharat / state

ವಿಜಯಪುರ: ಬಸವ ತತ್ವದಂತೆ ಅಂತರ್ಜಾತಿ ವಿವಾಹವಾದ ಜೋಡಿ - ವಿಜಯಪುರ

ವಿಜಯಪುರದಲ್ಲಿ ದಲಿತ ಯುವತಿ ಮತ್ತು ಲಿಂಗಾಯತ ಯುವಕ ಅಂತರ್ಜಾತಿ ವಿವಾಹವಾದರು.

Etv Bharatವಿಜಯಪುರ: ಬಸವ ತತ್ವದಂತೆ ಅಂತರ್​ ಜಾತಿ ವಿವಾಹವಾಗಿ ಸಮಾನತೆ ಸಂದೇಶ ಸಾರಿದ ಜೋಡಿ
ವಿಜಯಪುರ: ಬಸವ ತತ್ವದಂತೆ ಅಂತರ್​ ಜಾತಿ ವಿವಾಹವಾಗಿ ಸಮಾನತೆ ಸಂದೇಶ ಸಾರಿದ ಜೋಡಿ

By ETV Bharat Karnataka Team

Published : Feb 28, 2024, 11:00 PM IST

Updated : Feb 28, 2024, 11:05 PM IST

ವಿಜಯಪುರ: ಬಸವ ತತ್ವದಂತೆ ಅಂತರ್ಜಾತಿ ವಿವಾಹವಾದ ಜೋಡಿ

ವಿಜಯಪುರ: 12ನೇ ಶತಮಾನದಲ್ಲೇ ಬಸವಣ್ಣನವರು ಜಾತಿ ಬೇಧ ತೊಡೆದು ಹಾಕಲು ಅಂತರ್ಜಾತಿ ವಿವಾಹ ಮಾಡಿಸಿದ್ದರು. ಅದೇ ರೀತಿ ಇಂದು ವಿಜಯಪುರ ನಗರದ ಹೊರಭಾಗದ ತೊರವಿಯ ಲಕ್ಷ್ಮೀ ದೇವಸ್ಥಾನದಲ್ಲಿ ಅಂತರ್ಜಾತಿ ವಿವಾಹವೊಂದು ಎರಡು ಕುಟುಂಬಗಳ ಸಮಕ್ಷಮದಲ್ಲಿ ನಡೆಯಿತು. ಇದಕ್ಕೆ ಹಲವು ಜನಪ್ರತಿನಿಧಿಗಳು, ಮಠಾಧೀಶರು ಸಾಕ್ಷಿಯಾದರು.

ದಲಿತ ಯುವತಿ‌ ವೀಣಾ ಹಾಗೂ ಲಿಂಗಾಯತ ಯುವಕ ಸೋಮಶೇಖರ್​ ಎಂಬವರು ಮದುವೆಯಾದ ಜೋಡಿ. ಈ ಇಬ್ಬರು ಮ್ಯಾಟ್ರಿಮೋನಿ ಸೈಟ್‌ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಇಬ್ಬರಿಗೆ ಪರಿಚಯವಾಗಿ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಬಳಿಕ ಹುಡುಗನ ಮನೆಯವರು ಹುಡುಗಿ ಮನೆಗೆ ತೆರಳಿ ವಧುವನ್ನು ನೋಡಿ ಇಷ್ಟಪಟ್ಟಿದ್ದಾರೆ.

ಎಂಬಿಎ ಮುಗಿಸಿರುವ ವೀಣಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ, ಬಿಇ ಮೆಕ್ಯಾನಿಕಲ್ ಮುಗಿಸಿರುವ ಸೋಮಶೇಖರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟ ಬಳಿಕ ಜಾತಿ ಬಗ್ಗೆ ಗೊತ್ತಾಗಿದೆ. ಆಗ ಯುವಕ ಸೋಮಶೇಖರ್ ನಮಗೆ ಜಾತಿ ಬೇಧವಿಲ್ಲ. ನಾವೆಲ್ಲ ಬಸವ ತತ್ವದ ಅನುಯಾಯಿಗಳು. ದಲಿತ ಯುವತಿಯನ್ನು ನಾನು ಮದುವೆಯಾಗುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಎರಡೂ ಕುಟುಂಬದವರು ನಿರ್ಣಯಿಸಿ ಬಸವ ತತ್ವದ ಅನುಗುಣವಾಗಿ ಅದ್ದೂರಿಯಾಗಿ ಮದುವೆ ನೆರವೇರಿಸಿದರು.

ಅಂತರ್ಜಾತಿ ವಿವಾಹದ ಬಗ್ಗೆ 12ನೇ ಶತಮಾನದಲ್ಲೇ ಬಸವಣ್ಣನವರು ಸಮಾನತೆಯ ಸಂದೇಶ ಸಾರಿದ್ದರು. ಇದೀಗ ಬಸವಣ್ಣನವರ ಹುಟ್ಟು ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ ಆಗುವ ಮೂಲಕ ವೀಣಾ ಸೋಮಶೇಖರ್ ದಂಪತಿಗಳು ಇತರರಿಗೆ ಮಾದರಿಯಾಗಿದ್ದಾರೆ.

ಈ ಮದುವೆಗೆ ಇಳಕಲ್ ಮಹಾಂತ ಸ್ವಾಮೀಜಿ, ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಸಚಿವ ಸತೀಶ ಜಾರಕಿಹೋಳಿ‌ ಅವರ ಪುತ್ರ ರಾಹುಲ್ ಜಾರಕಿಹೊಳಿ, ಮಾಜಿ ಶಾಸಕ ರಾಜು ಆಲಗೂರ ಸೇರಿದಂತೆ ಹಲವು ಜನಜನಪ್ರತಿನಿಧಿಗಳು ಮುಖಂಡರು ಸಾಕ್ಷಿಯಾದರು.

ಇದನ್ನೂ ಓದಿ:ಬೆಂಗಳೂರು: 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ

Last Updated : Feb 28, 2024, 11:05 PM IST

ABOUT THE AUTHOR

...view details