ಕರ್ನಾಟಕ

karnataka

ETV Bharat / state

'ಲೋಕದ ಡೊಂಕ ನೀವೇಕೆ ತಿದ್ದುವಿರಿ..': ದರ್ಶನ್‌ ಬಂಧನಕ್ಕೆ ಇಂದ್ರಜಿತ್‌ ಲಂಕೇಶ್‌ ಮಾರ್ಮಿಕ ಪ್ರತಿಕ್ರಿಯೆ - Indrajit Lankesh - INDRAJIT LANKESH

ಸಿನಿಮಾ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ನಟ ದರ್ಶನ್‌ ಬಂಧನ ವಿಚಾರವಾಗಿ ಶಿವಮೊಗ್ಗದಲ್ಲಿಂದು ಪ್ರತಿಕ್ರಿಯಿಸಿದ್ದಾರೆ.

ಇಂದ್ರಜಿತ್‌ ಲಂಕೇಶ್‌
ಇಂದ್ರಜಿತ್‌ ಲಂಕೇಶ್‌ (ETV Bharat)

By ETV Bharat Karnataka Team

Published : Jun 12, 2024, 3:45 PM IST

Updated : Jun 12, 2024, 4:21 PM IST

ಇಂದ್ರಜಿತ್‌ ಲಂಕೇಶ್‌ (ETV Bharat)

ಶಿವಮೊಗ್ಗ:ನಟ ದರ್ಶನ್​ ವಿರುದ್ಧದ ಕೂಲೆ ಆರೋಪ ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಇಂತಹ ಸಮಯದಲ್ಲಿ ನಾನು ಕಾಮೆಂಟ್ ಮಾಡಿದರೆ ತಪ್ಪಾಗುತ್ತದೆ ಎಂದು ​ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿದರು.

ನಗರದ ಪ್ರೆಸ್​ ಟ್ರಸ್ಟ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಕ್ಷಣಕ್ಷಣದ ವರದಿಯನ್ನು ನಾನೊಬ್ಬ ವೀಕ್ಷಕನಾಗಿ ನೋಡುತ್ತಿದ್ದೇನೆ ಎಂದರು.

ಇದೇ ವೇಳೆ, 'ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಯವರ ದು:ಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ' ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರಿಸಿದರು. ಬಳಿಕ, ಈಗ ದರ್ಶನ್​ ವಿಚಾರ ಬೇಡ. ನಮ್ಮ ಅಕ್ಕ ಗೌರಿ ಬಗ್ಗೆ ಮಾತನಾಡೋಣ. ಗೌರಿ ಸಿನಿಮಾ, ಲಂಕೇಶ್​, ಕುವೆಂಪು ಅವರ ಬಗ್ಗೆ ಮಾತನಾಡೋಣ ಎಂದು ಹೇಳಿದರು.

ನನ್ನ ಮಗ ಸಮರ್ಜಿತ್​ಗಾಗಿ, ನನ್ನ ಅಕ್ಕ ಗೌರಿ ಅವರ ನೆನಪಿಗಾಗಿ ಸಿನಿಮಾಗೆ ಗೌರಿ ಎಂದು ಹೆಸರಿಟ್ಟಿದ್ದೇನೆ. ನಾಯಕಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ 7 ಜನ ಸಂಗೀತ ನಿರ್ದೇಶಕರಿದ್ದಾರೆ. ನಮ್ಮ ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹೊಸದಾಗಿ ಚಿತ್ರತಂಗಕ್ಕೆ ಬರುವ ನಟ-ನಟಿಯರು ಒಂದೆರಡು ಚಿತ್ರ ಸಕ್ಸಸ್ ಆದ ತಕ್ಷಣ ಆಕಾಶದಲ್ಲಿ ಹಾರಾಡದೆ, ನಿರ್ದೇಶಕರು ಹೇಳಿದಂತೆ ನಡೆದುಕೊಂಡರೆ ಚೆನ್ನಾಗಿರುತ್ತದೆ ಎಂದು ವಿನಂತಿಸಿದರು.

ಗೌರಿ ಸಿನಿಮಾದ ನಾಯಕ ಸಮರ್ಜಿತ್​ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಇದ್ದರು.

ಇದನ್ನೂ ಓದಿ:'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

Last Updated : Jun 12, 2024, 4:21 PM IST

ABOUT THE AUTHOR

...view details