ಕರ್ನಾಟಕ

karnataka

ETV Bharat / state

ರಷ್ಯಾ ಸೇನೆಯಲ್ಲಿ ಭಾರತೀಯರು: ಖರ್ಗೆ​ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಜೈಶಂಕರ್ - ರಷ್ಯಾ ಸೇನೆಯಲ್ಲಿ ಭಾರತೀಯರು

ರಷ್ಯಾ ಸೇನೆಯಲ್ಲಿ ಕಲಬುರಗಿ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳ ಯುವಕರು ಇರುವುದು ಗೊತ್ತಿರುವ ಸಂಗತಿ. ಈ ಸಂಬಂಧ ಮಲ್ಲಿಕಾರ್ಜುನ್ ಖರ್ಗೆ ಅವರು​ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಜೈಶಂಕರ್ ಉತ್ತರ ನೀಡಿದ್ದಾರೆ.

Indians in Russian Army  Union Minister Jaishankar  Kharge letter  ರಷ್ಯಾ ಸೇನೆಯಲ್ಲಿ ಭಾರತೀಯರು  ಕೇಂದ್ರ ಸಚಿವ ಜೈಶಂಕರ್
ಖರ್ಗೆ​ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಜೈಶಂಕರ್

By ETV Bharat Karnataka Team

Published : Mar 4, 2024, 12:45 PM IST

ಕಲಬುರಗಿ:ಜಿಲ್ಲೆಯ ಮೂಲದ ಮೂವರು ಹಾಗೂ ತೆಲಂಗಾಣದ ಯುವಕನೊಬ್ಬನನ್ನು ರಷ್ಯಾ ಸೈನ್ಯಕ್ಕೆ ನಿಯೋಜನೆ ಮಾಡಿ ಯುದ್ಧಪೀಡಿತ ಉಕ್ರೇನ್ ಗಡಿಗೆ ಕಳಿಸಿರುವ ಹಿನ್ನೆಲೆ ಅವರ ಬಿಡುಗಡೆಗೆ ಆಗ್ರಹಿಸಿ ರಾಜ್ಯಸಭೆ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಖರ್ಗೆ ಅವರು ಬರೆದ ಪತ್ರಕ್ಕೆ ಸಚಿವ ಜೈಶಂಕರ್ ಉತ್ತರ ನೀಡಿದ್ದಾರೆ. ಯುವಕರ ರಕ್ಷಣೆ ಹಾಗೂ ತಕ್ಷಣ ವಾಪಸಾತಿಗೆ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಲಾಗಿದ್ದು, ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಜೈಶಂಕರ್ ಅವರಿಗೆ ಫೆಬ್ರುವರಿ 22 ರಂದು ಪತ್ರ ಬರೆದು ಯುವಕರ ರಕ್ಷಣೆ ಹಾಗೂ ವಾಪಸಾತಿಗೆ ಮನವಿ ಮಾಡಿದ್ದರು. ಖರ್ಗೆ ಅವರ ಪತ್ರಕ್ಕೆ ಫೆಬ್ರುವರಿ 27 ರಂದು ಉತ್ತರಿಸಿರುವ ಅವರು ಈ ವಿಷಯದ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ರಷ್ಯಾ ರಾಯಭಾರಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಜೈಶಂಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವ ಜೈಶಂಕರ್ ಪತ್ರ

ಓದಿ:ರಷ್ಯಾದಲ್ಲಿ ಸಿಲುಕಿರುವ ಯುವಕರ ರಕ್ಷಣೆಗೆ ಕೋರಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ

ನಮ್ಮ ಪ್ರಾಮಾಣಿಕ ಹಾಗೂ‌ ನಿಷ್ಠಾವಂತ ಪ್ರಯತ್ನದಿಂದಾಗಿ ಭಾರತೀಯ ನಾಗರಿಕರ ವಾಪಸಾತಿಯ ಭರವಸೆ ನೀಡುತ್ತಿದ್ದೇನೆ. ನಿಮ್ಮ‌ ಪತ್ರದಲ್ಲಿ (ಮನವಿಯಲ್ಲಿ ) ಹೇಳಿರುವಂತೆ ಕಲಬುರಗಿ ಮೂಲದ ಮೂವರ ಹಾಗೂ ತೆಲಂಗಾಣದ ಯುವಕನೊಬ್ಬ ರಕ್ಷಣೆ ಹಾಗೂ ಅವರನ್ನು ಭಾರತಕ್ಕೆ ಮರಳಿ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮಾಸ್ಕೋದಲ್ಲಿರುವ ಭಾರತದ ರಾಯಭಾರಿ ರಷ್ಯಾದ ಪ್ರಾಧಿಕಾರದೊಂದಿಗೆ ಚರ್ಚಿಸಿದ್ದಾರೆ. ಈ ವಿಷಯವನ್ನು ಹೆಚ್ಚಿನ ಆದ್ಯತೆ ಎಂದು ಪರಿಗಣಿಸಲಾಗಿದೆ. ವಿದೇಶದಲ್ಲಿರುವ ಭಾರತೀಯರ ಸದಾ ರಕ್ಷಣೆ, ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಭರವಸೆ ನೀಡುತ್ತಿದ್ದೇನೆ ಎಂದು ಜೈಶಂಕರ್ ಅವರು ಖರ್ಗೆ ಅವರಿಗೆ ಬರೆದ ಉತ್ತರದಲ್ಲಿ ಹೇಳಿದ್ದಾರೆ.

ಓದಿ:ಹೊಸ ಸರ್ಕಾರದ 100 ದಿನದ ಅಜೆಂಡಾ ಸಿದ್ಧ: 'ಹೋಗಿ, ಗೆದ್ದು ಬನ್ನಿ' ಸಚಿವರಿಗೆ ಹುರಿದುಂಬಿಸಿದ ಮೋದಿ

ABOUT THE AUTHOR

...view details