ಕರ್ನಾಟಕ

karnataka

ETV Bharat / state

ರಾಯಚೂರು: ಕೃಷ್ಣಾ ನದಿಯಲ್ಲಿ ಉಕ್ಕಿ ಹರಿದ ನೀರು.. ಪ್ರವಾಹ ಭೀತಿ ಹೆಚ್ಚಳ - Increase flood risk in Raichur - INCREASE FLOOD RISK IN RAICHUR

ಕೃಷ್ಣಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಹೆಚ್ಚಳವಾಗಿದೆ.

flood
ಪ್ರವಾಹ ಭೀತಿ (ETV Bharat)

By ETV Bharat Karnataka Team

Published : Jul 26, 2024, 8:26 PM IST

ಪ್ರವಾಹ ಭೀತಿ ಹೆಚ್ಚಳ (ETV Bharat)

ರಾಯಚೂರು :ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ನದಿ ತೀರದಲ್ಲಿ ಬರುವ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿದೆ. ಈಗಾಗಲೇ ನಡುಗಡ್ಡೆಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಬ್ರಿಡ್ಜ್ ಮುಳುಗಡೆಯಾಗಿ, ಮೇದಾರಗಡ್ಡಿ, ಕರಕಲ್ ಗಡ್ಡಿ, ವೆಂಕಮ್ಮನ ಗಡ್ಡಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ದೇವದುರ್ಗ ತಾಲೂಕಿನ ಹೂವಿನ ಹಡಗಲಿ ಬ್ರಿಡ್ಜ್ ಸಹ ಮುಳುಗಡೆ ಹಂತಕ್ಕೆ ಬಂದಿರುವುದರಿಂದ ರಸ್ತೆಯ ಮೇಲೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಸೇತುವೆ ರಾಯಚೂರಿನಿಂದ ದೇವದುರ್ಗ ಮಾರ್ಗವಾಗಿ ಹತ್ತಿಗುಡೂರು ಕ್ರಾಸ್, ಶಹಾಪುರ, ಕಲಬುರಗಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಸಂಚಾರವನ್ನು ನಿಷೇಧಿಸಿ, ಬ್ಯಾರಿಕೇಡ್ ಹಾಕಿ ಪೊಲೀಸ್ ಹಾಗೂ ಹೋಮ್‌ ಗಾರ್ಡ್​ಗಳನ್ನ ಬಂದೋ‌ಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

ಅಲ್ಲದೇ ನಡುಗಡ್ಡೆಯಲ್ಲಿ ವಾಸಿಸುವ ಜನರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕವನ್ನು ಸಹ ಹೊಂದಿದ್ದಾರೆ‌. ಅವಶ್ಯಕತೆ ಬಿದ್ದಲ್ಲಿ ಆಸರೆ ಕೇಂದ್ರಗಳನ್ನು ಸ್ಥಾಪಿಸಲು ಸಹ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸದ್ಯ ನಾರಾಯಣಪುರ (ಬಸವಸಾಗರ) ಡ್ಯಾಂಗೆ 2.75 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದು, 2.90 ಕ್ಯೂಸೆಕ್ ನೀರನ್ನ ಕೃಷ್ಣಾ ನದಿಗೆ ಹರಿಸಲಾಗಿದ್ದು, ಇದರಿಂದ ಪ್ರವಾಹ ಭೀತಿ ಎದುರಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಳವಾದರೆ, ಹೊರ ಹರಿವಿನ ಪ್ರಮಾಣ ಸಹ ಹೆಚ್ಚಳವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ :ಸಪ್ತನದಿಗಳ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ: ಸಹಾಯವಾಣಿ ಆರಂಭಿಸಿದ SP - SP started helpline

ABOUT THE AUTHOR

...view details