ಕರ್ನಾಟಕ

karnataka

ETV Bharat / state

ಹಾವೇರಿ: ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ - wife has killed her husband - WIFE HAS KILLED HER HUSBAND

ಪತಿಯನ್ನು ಕೊಲೆಗೈದು ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಗಾಯವಾಗಿತ್ತು ಎಂದು ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹಂಸಭಾವಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮೃತ ಸಾಧಿಕ್​, ಆರೋಪಿ ಪತ್ನಿ ಉಮ್ಮಿಸಲ್ಮಾ ಮತ್ತು ಆಕೆಯ ಪ್ರಿಯಕರ ಆರೋಪಿ ಜಾಫರ್ ಸಾಧಿಕ್​
ಮೃತ ಸಾಧಿಕ್​, ಆರೋಪಿ ಪತ್ನಿ ಉಮ್ಮಿಸಲ್ಮಾ ಮತ್ತು ಆಕೆಯ ಪ್ರಿಯಕರ ಆರೋಪಿ ಜಾಫರ್ ಸಾಧಿಕ್​ (ETV Bharath)

By ETV Bharat Karnataka Team

Published : Oct 3, 2024, 8:14 AM IST

ಹಾವೇರಿ:ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಚಿಕ್ಕೇರೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು 30 ವರ್ಷದ ಸಾಧಿಕ್​ ಎಂದು ಗುರುತಿಸಲಾಗಿದೆ. ಪತ್ನಿ 26 ವರ್ಷದ ಪತ್ನಿ ಉಮ್ಮಿಸಲ್ಮಾ ಮತ್ತು ಆಕೆಯ ಪ್ರಿಯಕರ 28 ವರ್ಷದ ಜಾಫರ್ ಸಾಧಿಕ್​ ಕೊಲೆ ಮಾಡಿರುವ ಆರೋಪಿಗಳು.

ಉಮ್ಮಿಸಲ್ಮಾ ಮತ್ತು ಪ್ರಿಯಕರ ಜಾಫರ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಉಮ್ಮಿಸಲ್ಮಾ ಮತ್ತು ಮೃತ ಸಾಧಿಕ್ 2021ರಂದು ದಾಂಪತ್ಯಕ್ಕೆ ಕಾಲಿರಿಸಿದ್ದು, ಗಂಡುಮಗು ಸಹ ಪಡೆದಿದ್ದಾರೆ. ಜಾಫರ್ ಮತ್ತು ಉಮ್ಮಿಸಲ್ಮಾ ನಡುವೆ ವಿವಾಹೇತರ ಸಂಬಂಧವಿದ್ದು, ಕೊನೆಗಾಣಿಸುವಂತೆ ಮೃತ ಸಾಧಿಕ್ ಎಚ್ಚರಿಕೆ ನೀಡಿದ್ದ. ಆದರೂ ಅದೇ ಸಂಬಂಧದಲ್ಲಿ ಆರೋಪಿಗಳಿಬ್ಬರು ಮುಂದುವರೆದಿದ್ದರು.

ಘಟನೆ ಬಗ್ಗೆ ಸ್ಥಳೀಯರ ಹೇಳಿಕೆಗಳು. (ETV Bharat)

ಕೊನೆಗೆ ಇಬ್ಬರ ಹೆಸರಲ್ಲಿ ಡೆತ್‌ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಧಿಕ್ ಎಚ್ಚರಿಕೆ ನೀಡಿದ್ದ. ಇದರಿಂದ ಆತಂಕಗೊಂಡ ಉಮ್ಮಿಸಲ್ಮಾ ಪ್ರಿಯಕರ ಜಾಫರ್ ಜೊತೆ ಸೇರಿ ಸೆಪ್ಟಂಬರ್ 25 ರಂದು ಸಾಧಿಕ್‌ನನ್ನು ಮನೆಯಲ್ಲಿ ಉಸಿರುಗಟ್ಟಿಸಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಅಪರಾಧ ನಡೆಸಿದ ಸ್ಥಳಕ್ಕೆ ಆರೋಪಿಗಳನ್ನು ಕರೆ ತಂದ ಪೊಲೀಸರು. (ETV Bharat)

ಈ ಕುರಿತಂತೆ ಸಾಧಿಕ್​ ಅಕ್ಕಪಕ್ಕದ ಮನೆಯವರು 'ಆರೋಪಿ ಉಮ್ಮಿಸಲ್ಮಾ ಪತಿಯನ್ನು ಕೊಲೆ ಮಾಡಿದ ನಂತರ ಬಚ್ಚಲು ಮನೆಯಲ್ಲಿ ಬಿದ್ದು ಗಾಯಗೊಂಡಿರುವ ನಾಟಕವಾಡಿದ್ದಾಳೆ' ಎಂದು ಆರೋಪಿಸಿದ್ದಾರೆ. ಸಾಧಿಕ್ ಸ್ನೇಹಿತರು ಉಮ್ಮಿಸಲ್ಮಾ ಮಾತು ಕೇಳಿ ಸಾಧಿಕ್‌ಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಸಾಧಿಕ್ ಮೃತಪಟ್ಟಿರುವುದಾಗಿ ತಿಳಿಸಿದ ನಂತರ ಸಾಧಿಕ್ ಅಂತ್ಯಕ್ರಿಯೆ ಮಾಡಿದ್ದಾರೆ.

ಸಾಧಿಕ್ ಸಹೋದರ್ ಹುಸೇನಿಮಿಯಾ ಈ ಕುರಿತಂತೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಇದು ಅಸ್ವಭಾವಿಕ ಸಾವಲ್ಲ ಕೊಲೆ ಎಂದು ಗೊತ್ತಾಗಿದೆ. ಅಲ್ಲದೇ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಸಾಧಿಕ್​ ಕೊಲೆ ಮಾಡಿರುವ ಆರೋಪಿಗಳಾದ ಉಮ್ಮಿಸಲ್ಮಾ ಮತ್ತು ಆಕೆಯ ಪ್ರಿಯಕರ್ ಜಾಫರ್ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೊಲೆ ಸಂಚು ರೂಪಿಸಿ ಕೊಲೆ ಮಾಡಿ ಅನುಮಾನಾಸ್ಪದ ಸಾವು ಎಂದು ಸಾಕ್ಷ್ಯಾಧಾರಗಳ ನಾಶ ಆರೋಪದಡಿ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಫುಟ್‌ಬೋರ್ಡ್ ಮೇಲೆ ನಿಲ್ಲಬೇಡಿ ಎಂದಿದ್ದಕ್ಕೆ ಕಂಡಕ್ಟರ್​ಗೆ ಚಾಕು ಇರಿತ: ಆರೋಪಿಯ ಅಟ್ಟಹಾಸದ ದೃಶ್ಯ ಸೆರೆ - Stabbing Accused Arrest

ABOUT THE AUTHOR

...view details