ಕರ್ನಾಟಕ

karnataka

ETV Bharat / state

ನೋಟಿಸ್​ ಜೊತೆ ಅಪ್ರಾಪ್ತೆಯ ಫೋಟೋ ತೆಗೆದ ಆರೋಪ: ವರದಿ ಸಲ್ಲಿಸಲು ಮಾನವ ಹಕ್ಕು ಆಯೋಗ ನಿರ್ದೇಶನ - ALLEGATIONS ON POLICE

ಪ್ರಕರಣವೊಂದರ ಸಂಬಂಧ ಪೊಲೀಸರು ಅಪ್ರಾಪ್ತೆಯನ್ನು ನಿಲ್ಲಿಸಿ ಫೋಟೋ ತೆಗೆದ ಆರೋಪದ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಮಾನವ ಹಕ್ಕು ಆಯೋಗವು ಡಿಸಿಪಿಗೆ ನಿರ್ದೇಶಿಸಿದೆ.

human rights commission
ಮಾನವ ಹಕ್ಕುಗಳ ಆಯೋಗ (ETV Bharat)

By ETV Bharat Karnataka Team

Published : 6 hours ago

Updated : 6 hours ago

ಬೆಂಗಳೂರು:ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಮ್ಮ ಮನೆಗೆ ಸಮನ್ಸ್ ಅಂಟಿಸಿ, ಮನೆಯಲ್ಲಿದ್ದ ಅಪ್ರಾಪ್ತೆಯನ್ನು ಬಲವಂತವಾಗಿ ನಿಲ್ಲಿಸಿ ಮೊಬೈಲ್​ನಲ್ಲಿ ಫೋಟೊ ಹಿಡಿದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ನಗರದ ಈಶಾನ್ಯ ವಿಭಾಗದ ಡಿಸಿಪಿಗೆ ನಿರ್ದೇಶನ ನೀಡಿದೆ.

ವಿದ್ಯಾರಣ್ಯಪುರ ನಿವಾಸಿ ಹಾಗೂ ಉದ್ಯಮಿ ಎಂ.ಕೆ. ಶಶಾಂಕ್ ಎಂಬವರು ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದವರು. ಈ ಸಂಬಂಧ ದೂರು ದಾಖಲಿಸಿಕೊಂಡ ಅಯೋಗವು ನಾಲ್ಕು ವಾರಗಳಲ್ಲಿ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ನಗರದ ಈಶಾನ್ಯ ವಿಭಾಗದ ಡಿಸಿಪಿಗೆ ನಿರ್ದೇಶಿಸಿದೆ. ಅಲ್ಲದೆ, ವಿಚಾರಣೆಯನ್ನ ಜನವರಿ 7ಕ್ಕೆ ಮುಂದೂಡಿದೆ.

ಇದನ್ನೂ ಓದಿ:ಅಕ್ರಮವಾಗಿ ಶ್ರೀಗಂಧ ಪೂರೈಕೆ ಆರೋಪ; ಕಾವೇರಿ ಎಂಪೋರಿಯಂನಲ್ಲಿ ಅರಣ್ಯಾಧಿಕಾರಿಗಳ ಶೋಧ

ದೂರಿನ ವಿವರ:ನಿವೇಶನಕ್ಕೆ ಅತಿಕ್ರಮ ಪ್ರವೇಶಿಸಿ ಜೀವ ಬೆದರಿಕೆವೊಡ್ಡಿರುವುದಾಗಿ ಆರೋಪಿಸಿ ಶೇಖರ್ ಸೇರಿ ಇನ್ನಿತರರ ವಿರುದ್ಧ ಎಂ.ಕೆ. ಶಶಾಂಕ್ ಕಳೆದ ಅಕ್ಟೋಬರ್​ 24ರಂದು ದೂರು ನೀಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ''ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ನಾನು ಊರಿಗೆ ಹೋಗಿದ್ದೆ. ಈ ವೇಳೆ ಪೊಲೀಸರು ಮನೆಗೆ ಬಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲು ಬಂದಿದ್ದಾರೆ. ಮನೆಯಲ್ಲಿ ತಾನು ಇರಲಿಲ್ಲ. ಮನೆ ಮುಂದೆ ನೋಟಿಸ್ ಅಂಟಿಸಿದ್ದಾರೆ. ಜೊತೆಗೆ, ಈ ನೋಟಿಸ್ ಅಂಟಿಸಿದ ಬಗ್ಗೆ ಸಾಕ್ಷ್ಯಕ್ಕಾಗಿ ನನ್ನ ಸಹೋದರನ ಪುತ್ರಿಯನ್ನು ನಿಲ್ಲಿಸಿ ಪೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಘಟನೆ ಬಳಿಕ ಬಾಲಕಿಗೆೆ ಜ್ವರ ಕಾಣಿಸಿಕೊಂಡಿತ್ತು. ಈ ಸಂಬಂಧ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿ ಶಶಾಂಕ್ ದೂರು ನೀಡಿದ್ದರು.

ಇದನ್ನೂ ಓದಿ:ಮಂಗಳೂರಿಗೆ ಮಾದಕ ವಸ್ತು ಕೊಕೇನ್ ಪೂರೈಸುತ್ತಿದ್ದ ನೈಜೇರಿಯಾ ಪ್ರಜೆ ಸೆರೆ

Last Updated : 6 hours ago

ABOUT THE AUTHOR

...view details