ಕರ್ನಾಟಕ

karnataka

ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ: ನಿರಂಜನ ಹಿರೇಮಠ ಸ್ಪಷ್ಟನೆ ಹೀಗಿದೆ - Neha caste certificate issue

By ETV Bharat Karnataka Team

Published : Jun 1, 2024, 10:00 PM IST

ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ತಮ್ಮ ಮಗಳು ನೇಹಾ ಹಿರೇಮಠ ಹೆಸರಲ್ಲಿ ನಕಲಿ ಜಾತಿ ಪ್ರಮಾಣಪತ್ರ ಮಾಡಿಸಿದ್ದಾರೆ ಎಂದು ಸಮತಾ ಸೇನಾ ಸೇರಿ ವಿವಿಧ ಸಂಘಟನೆಗಳು ದೂರಿವೆ. ಇದೇ ವೇಳೆ, ನಾನು ಯಾವುದೇ ಖೊಟ್ಟಿ ದಾಖಲೆ ಸೃಷ್ಟಿ ಮಾಡಿಲ್ಲ ಎಂದು ನಿರಂಜನ ಹಿರೇಮಠ ತಿಳಿಸಿದ್ದಾರೆ.

Niranjan Hiremath
ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ: ನಿರಂಜನ ಹಿರೇಮಠ ಸ್ಪಷ್ಟನೆ (ETV Bharat)

ನಕಲಿ ಜಾತಿ ಪ್ರಮಾಣಪತ್ರ ಆರೋಪದ ಬಗ್ಗೆ ನಿರಂಜನ ಹಿರೇಮಠ ಸ್ಪಷ್ಟನೆ (ETV Bharat)

ಹುಬ್ಬಳ್ಳಿ:ನಗರದಲ್ಲಿ ಇತ್ತೀಚೆಗೆ ಕೊಲೆಯಾದ ವಿದ್ಯಾರ್ಥಿನಿನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ತಮ್ಮ ಮಗಳ ಹೆಸರಲ್ಲಿ 'ಬೇಡ ಜಂಗಮ'ದ ಪರಿಶಿಷ್ಟ ಜಾತಿ (ಎಸ್ಸಿ)ಯ ನಕಲಿ ಜಾತಿ ಪ್ರಮಾಣಪತ್ರ ಮಾಡಿಸಲಾಗಿದೆ ಎಂದು ಆರೋಪಿಸಿದ್ದು, ಇದನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಸಮತಾ ಸೇನಾ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ದೂರು ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರಂಜನ ಹಿರೇಮಠ, ನಾನು ಮೂಲತಃ ಹಿಂದೂ ಬೇಡ ಜಂಗಮ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಾತಿ ಪ್ರಮಾಣಪತ್ರ ಸಂಬಂಧ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಹಾಗೂ ಪೊಲೀಸ್​ ಆಯುಕ್ತರಿಗೆ ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ದೂರ ಸಲ್ಲಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಗುರುನಾಥ, ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಇರುವ ನೈಜ ಸತ್ಯವನ್ನು ಬಿಡುಗಡೆ ಮಾಡಿದ್ದೇವೆ. ನಿರಂಜನ ಹಿರೇಮಠ ಅವರು ಲಿಂಗಾಯತ ಜಂಗಮಕ್ಕೆ ಸೇರಿದ ಮೇಲ್ವರ್ಗದವರು. ಅವರ ಮಗಳು ನೇಹಾ ಮತ್ತು ನಿರಂಜನ ಹಿರೇಮಠ ಹುಬ್ಬಳ್ಳಿ ನಿವಾಸಿಗಳು. ಆದರೆ, ಬೆಂಗಳೂರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ದೂರಿದರು.

ನೇಹಾ ನಿರಂಜನ ಹಿರೇಮಠ ಸಂಬಂಧಪಟ್ಟ ಜಾತಿ ಪ್ರಮಾಣಪತ್ರವನ್ನು 2021ರಲ್ಲಿ ಪಡೆಯಲಾಗಿದೆ. ಖೊಟ್ಟಿ ಜಾತಿ‌ ಪ್ರಮಾಣಪತ್ರ ದಾಖಲೆ ಸೃಷ್ಟಿ ಮಾಡಲಾಗಿದೆ. ಇದರ ಉದ್ದೇಶವೇನು?, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಕಬಳಿಕೆ ಮಾಡಬೇಕು ಮತ್ತು ರಾಜಕೀಯ ಲಾಭ ಪಡೆಯಬೇಕೆಂದು ಮಾಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಗೃಹ ಸಚಿವರು, ಡಿಸಿಆರ್‌ಇ ಎಡಿಜಿಪಿ ಹಾಗೂ ಜಿಲ್ಲಾಧಿಕಾರಿಗಳು ನಿರಂಜನ ಹಿರೇಮಠ ವಂಶವೃಕ್ಷ ಪರಿಶೀಲನೆ ಮಾಡಬೇಕು. ಎಲ್ಲ ದಾಖಲೆಗಳು ಕ್ರೋಢಿಕರಿಸಿ, ಇವರು ನಿಜವಾದ ಬೇಡ ಜಂಗಮರೋ ಅಥವಾ ಲಿಂಗಾಯತ ಬೇಡ ಜಂಗಮರೋ ಎಂದು ಬಹಿರಂಗ ಪಡಿಸಬೇಕು ಎಂದು ಗುರುನಾಥ ಉಳ್ಳಿಕಾಶಿ ಒತ್ತಾಯಿಸಿದರು.

ನಿರಂಜನ್​ ಹಿರೇಮಠ್​ ಹೇಳಿದ್ದು ಇಷ್ಟು:ಮತ್ತೊಂದೆಡೆ, ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ನಿರಂಜನ ಹಿರೇಮಠ, ನಾನು ಯಾವುದೇ ಖೊಟ್ಟಿ ದಾಖಲೆ ಸೃಷ್ಟಿ ಮಾಡಿಲ್ಲ. ನಾನು ಮೂಲತಃ ಹಿಂದೂ ಬೇಡ ಜಂಗಮ. ರಾಜ್ಯ ಬೇಡ ಜಂಗಮ ಸಮಾಜ ಸಂಸ್ಥೆಯ ಯುವ ಘಟಕದ ಅಧ್ಯಕ್ಷ. ಜಾತಿ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಇದರಲ್ಲಿ ಯಾವುದೇ ಸುಳ್ಳಲ್ಲ. ನಾವು ಬೇಡ ಜಂಗಮರು. ಕೇಂದ್ರ ಸರ್ಕಾರದ ಹಿಂದೂ ಬೇಡ ಜಂಗಮದ ಎಸ್​​ಸಿ-ಎಸ್​ಟಿ ಪಟ್ಟಿಯಲ್ಲಿ 103 ಜಾತಿಗಳಲ್ಲಿ ನಮ್ಮದು 19 ಸಂಖ್ಯೆಯಾಗಿದೆ. ಯಾವುದೇ ರೀತಿಯಲ್ಲಿ ಮೋಸ ಮಾಡಿಲ್ಲ. ಜಾತಿ ಪ್ರಮಾಣ ಪತ್ರವನ್ನು ದೇಶಾದ್ಯಂತ ಎಲ್ಲಿಯಾದರೂ ಪಡೆಯಬಹುದು. ನಾವು ಬೆಂಗಳೂರಲ್ಲಿ ಶಿಕ್ಷಣದ ಉದ್ದೇಶಕ್ಕಾಗಿ ಜಾತಿ ಪ್ರಮಾಣವನ್ನು ಪಡೆದಿದ್ದೇವೆ. ಆದರೆ, ಇದರ ಹಿಂದೆ ಯಾರೋ ಕಾಣದ ಕೈಗಳು ಷಡ್ಯಂತ್ರ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ರೇಣುಕಾಚಾರ್ಯ ಸಹೋದರನಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ‌ ವಿಸ್ತರಣೆ

ABOUT THE AUTHOR

...view details