ಕರ್ನಾಟಕ

karnataka

ETV Bharat / state

ಪಬ್‌, ಬಾರ್ - ರೆಸ್ಟೋರೆಂಟ್‌ ಮುಚ್ಚುವ ಸಮಯ ಒಂದು ಗಂಟೆ ವಿಸ್ತರಿಸಿ : ಹೋಟೆಲ್ ಅಸೋಸಿಯೇಷನ್ ಮನವಿ - Hotel association - HOTEL ASSOCIATION

ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮುಚ್ಚುವ ಸಮಯವನ್ನು ಒಂದು ಗಂಟೆಗಳವರೆಗೆ ವಿಸ್ತರಿಸುವಂತೆ ಹೋಟೆಲ್ ಅಸೋಸಿಯೇಷನ್ ಡಿಸಿಎಂ ಡಿ ಕೆ ಶಿವಕುಮಾರ್​ಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.

Bengaluru
ಬೆಂಗಳೂರು (ETV Bharat)

By ETV Bharat Karnataka Team

Published : Jul 10, 2024, 10:58 PM IST

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸಮಯವನ್ನು ಒಂದು ಗಂಟೆಗಳ ಕಾಲ ವಿಸ್ತರಿಸುವಂತೆ ಹೋಟೆಲ್​ ಅಸೋಸಿಯೇಷನ್ ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.

ಡಿಸಿಎಂ ಡಿ ಕೆ ಶಿವಕುಮಾರ್​ಗೆ ಮನವಿ ಮಾಡಿಕೊಂಡ ಹೋಟೆಲ್ ಅಸೋಸಿಯೇಷನ್ (ETV Bharat)

ಈ ಕುರಿತು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ಮಾತನಾಡಿ, ಎಲ್ಲ ಹೋಟೆಲ್​ಗಳ ಪ್ರಸ್ತುತ ಮುಚ್ಚುವ ಸಮಯವನ್ನು ಮಧ್ಯರಾತ್ರಿ 1 ಗಂಟೆಗೆ ಮಿತಿಗೊಳಿಸಲಾಗಿದೆ. ಸುಮಾರು 8 ರಿಂದ 10 ತಿಂಗಳ ಹಿಂದೆ ಎಲ್ಲಾ ಹೋಟೆಲ್​ಗಳಿಗೆ, ವಿಶೇಷವಾಗಿ ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳ ಬಳಿ ಇರುವವರಿಗೆ 24/7 ಸಮಯ ತೆರೆದಿಡಲು ವಿನಂತಿ ಮಾಡಿಕೊಂಡಿದ್ದೆವು. ಸಾಮಾನ್ಯವಾಗಿ ತಡರಾತ್ರಿಯವರೆಗೆ ಪ್ರಯಾಣಿಸುವ ಗ್ರಾಹಕರಿಗೆ ಸೇವೆ ನೀಡಲು ಪ್ರಸ್ತುತ ಸಮಯವನ್ನು 2 ಗಂಟೆಗೆ ಹೆಚ್ಚಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದರು.

ಜುಲೈ 23 ರಂದು ಮಂಡಿಸಲಿರುವ ಮುಂಬರುವ ಕೇಂದ್ರ ಬಜೆಟ್‌ಗೆ ಸಲಹೆಗಳು ಮತ್ತು ನಿರೀಕ್ಷೆಗಳ ಬಗ್ಗೆೆ ಸಂಘವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಹೋಟೆಲ್ ಉದ್ಯಮಕ್ಕೆೆ ಸುಲಭವಾಗಿ ವ್ಯಾಪಾರ ಮಾಡಲು ಉತ್ತೇಜಿಸಲು, ಎಲ್ಲ ಪರವಾನಗಿಗಳನ್ನು ಏಕಗವಾಕ್ಷಿ ಅನುಮತಿಗಳ ಅಡಿ ತರಬೇಕು ಎಂದು ಸಂಘವು ವಿನಂತಿ ಮಾಡಿಕೊಂಡಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪರವಾನಗಿಗಳನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಸ್ತುತ ಅಗತ್ಯವಿಲ್ಲದ ಕಾರಣ ಸಾರ್ವಜನಿಕ ಕಾರ್ಯಕ್ಷಮತೆ ಪರವಾನಗಿ ರದ್ದುಗೊಳಿಸಬೇಕು ಎಂದು ಹೇಳಿದರು.

ಇದನ್ನೂ ಓದಿ :ಹೋಟೆಲ್​, ರೆಸ್ಟೋರೆಂಟ್ ಆಸ್ಪತ್ರೆಗಳಿಗೆ ತಟ್ಟುತ್ತಿದೆ ನೀರಿನ ಅಭಾವದ ಬಿಸಿ

ABOUT THE AUTHOR

...view details