ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಶೋಕಾಸ್ ನೋಟಿಸ್: ಹೊನ್ನಾಳಿ ಸ್ತಬ್ಧ! - Honnali bandh - HONNALI BANDH

ಬಿಜೆಪಿ - ಜೆಡಿಎಸ್ ಹಾಗೂ ರಾಜ್ಯಪಾಲರ ನಡೆಯನ್ನು ಖಂಡಿಸಿ ಕರೆದಿರುವ ಬಂದ್​ಗೆ ಹೊನ್ನಾಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವ್ಯಾಪಾರಿಗಳು ಉದ್ದಿಮೆದಾರರು ಖಾಸಗಿ ಸಾರಿಗೆಯವರೂ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ.

Honnali Bandh
ಹೊನ್ನಾಳಿ ಪಟ್ಟಣ (ETV Bharat)

By ETV Bharat Karnataka Team

Published : Aug 6, 2024, 1:40 PM IST

Updated : Aug 6, 2024, 7:52 PM IST

ದಾವಣಗೆರೆ: ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್​ ನೋಟಿಸ್ ನೀಡಿರುವುದನ್ನು ಖಂಡಿಸಿ ಹೊನ್ನಾಳಿ ಪಟ್ಟಣ ಅಹಿಂದ ವರ್ಗ ಬಂದ್​ಗೆ ಕರೆ ನೀಡಿದೆ. ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.

ಹೊನ್ನಾಳಿ ಪಟ್ಟಣ ಬಂದ್​ (ETV Bharat)

ಹೊನ್ನಾಳಿ ‌ಪಟ್ಟಣ ಬಂದ್​ಗೆ ಕರೆ ನೀಡಿರುವ ಹಾಲುಮತ ಹಾಗೂ ಅಲ್ಪಸಂಖ್ಯಾತ, ದಲಿತ ಸಂಘಟನೆಗಳು, ತಕ್ಷಣ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್​​ ಅನ್ನು ವಾಪಸ್​​ ಪಡೆಯಬೇಕು ಎಂದು ಒತ್ತಾಯಿಸಿವೆ. ಸಿಎಂಗೆ ಬೆಂಬಲ ಸೂಚಿಸಿ ಹೊನ್ನಾಳಿ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ವ್ಯಾಪಾರಿಗಳು ಉದ್ದಿಮೆದಾರರು ಖಾಸಗಿ ಸಾರಿಗೆಯವರೂ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ಕರೆದಿರುವ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಖಾಸಗಿ ಬಸ್, ಆಟೋ ಸಂಚಾರವಿಲ್ಲ. ಟಿಬಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಮಾರುಕಟ್ಟೆ ಎಲ್ಲ ಖಾಲಿ ಖಾಲಿಯಾಗಿದೆ. ಇಡೀ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಹಿಂದ ನಾಯಕರು ಕರೆದಿರುವ ಬಂದ್​ಗೆ ಪ್ರತಿಯೊಂದು ವರ್ಗದ ಜನ ಕೈ ಜೋಡಿಸಿ, ಸಿಎಂ ಪರ ನಿಂತಿದ್ದಾರೆ. ವಿವಿಧ ಅಂಹಿದ ಸಂಘಟನೆಗಳು ಸೇರಿ ಹೊನ್ನಾಳಿ ಪಟ್ಟಣದ ಟಿಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಇದಲ್ಲದೇ ಬೈಕ್ ರ‍್ಯಾಲಿ ಮಾಡುವ ಮೂಲಕ ಬಿಜೆಪಿ - ಜೆಡಿಎಸ್ ಹಾಗು ರಾಜ್ಯಪಾಲರ ನಡೆಯನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದನ್ನೂ ಓದಿ:ಮುಡಾ ಹಗರಣ: ಬಿಜೆಪಿ-ಜೆಡಿಎಸ್ ವಿರುದ್ಧ ದಾವಣಗೆರೆಯಲ್ಲಿ ಅಹಿಂದ ಪ್ರತಿಭಟನೆ - AHINDA Protest

Last Updated : Aug 6, 2024, 7:52 PM IST

ABOUT THE AUTHOR

...view details