ಹೊಗೇನಕಲ್ನಲ್ಲಿ ಕಾವೇರಿ ಅಬ್ಬರ (ETV Bharat) ಚಾಮರಾಜನಗರ:ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ನದಿ ಅಕ್ಷರಶಃ ರುದ್ರ ತಾಂಡವವಾಡುತ್ತಿದ್ದು, ಸಾಗರದಂತೆ ಇಡೀ ಪರಿಸರ ಗೋಚರಿಸುತ್ತಿದೆ.
ನೀರಿನ ಪ್ರಮಾಣ ಹೆಚ್ಚಾಗಿ, ಕಲ್ಲು ಬಂಡೆಗಳ ಮೇಲೆ ಧುಮ್ಮಿಕ್ಕುತ್ತಿದ್ದ ದೃಶ್ಯ ಕಣ್ಮರೆಯಾಗಿದ್ದು ಜಲಪಾತವೇ ಮುಳುಗಡೆಯಾಗಿದೆ.
ಹೊಗೇನಕಲ್ ಜಲಪಾತ (ETV Bharat) ಕರ್ನಾಟಕದಂತೆ ತಮಿಳುನಾಡಿನಲ್ಲೂ ಕಾವೇರಿ ಪ್ರವಾಹ ಭೀತಿ ಎದುರಾಗಿದ್ದು ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕರೂರ್, ತಿರುಚಿ, ತಂಜಾವೂರು ಭಾಗಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಿಡಬ್ಲೂಸಿ ಎಂಜಿನಿಯರ್ ಪನ್ನೀರಸೆಲ್ವಂ ಎಚ್ಚರಿಕೆ ನೀಡಿದ್ದಾರೆ.
ಹೊಗೇನಕಲ್ ಜಲಪಾತ (ETV Bharat) ಕೊಳ್ಳೇಗಾಲ ಭಾಗದಲ್ಲಿ ಪ್ರವಾಹ ಭೀತಿ:ಕಾವೇರಿ ಹೊರಹರಿವು ಏರುತ್ತಿದ್ದಂತೆ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಸರಗೂರು, ಅಗ್ರಹಾರ, ಹಳೇ ಹಂಪಾಪುರ ಸೇರಿದಂತೆ 9 ಊರುಗಳಲ್ಲಿ ಆತಂಕ ಎದುರಾಗಿದ್ದು, ಕಾಳಜಿ ಕೇಂದ್ರಗಳಿಗೆ ಜನರು ಬರುವಂತೆ ಡಿಸಿ ಸೂಚಿಸಿದ್ದಾರೆ. ಜಾನುವಾರುಗಳಿಗೆ ಗೋಶಾಲೆ ತೆರೆಯಲಾಗುತ್ತಿದೆ.
ಇದನ್ನೂ ಓದಿ:ನವೀಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ: ಒಂದೆಡೆ ಮೊಸಳೆ ಮತ್ತೊಂದೆಡೆ ಪ್ರವಾಹ ಆತಂಕ - Navilutheertha Reservoir