ತುಮಕೂರು:ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ತುಮಕೂರು-ಶಿರಾ ಮಾರ್ಗದಲ್ಲಿ ಇಂದು ಬೆಳಗ್ಗೆಯಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ಸಮಸ್ಯೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.
ಇಂದು ಮುಂಜಾನೆ ಐದು ಗಂಟೆಯಿಂದಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ನಲ್ಲಿ ವಾಹನ ಸವಾರರು ಸಿಲುಕಿ ಪರದಾಡುತ್ತಿದ್ದಾರೆ. ಆಂಬ್ಯುಲೆನ್ಸ್ಗಳು ಸಹ ಟ್ರಾಫಿಕ್ನಲ್ಲಿ ಸಿಲುಕಿವೆ. ತುರ್ತು ತೆರಳಲು ಸಾಧ್ಯವಾಗದೆ ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಸೈರನ್ ಹೊಡೆಯುತ್ತ ನಿಂತಿದ್ದ ದೃಶ್ಯ ಕಂಡುಬಂತು.
ವಾಹನ ಸವಾರರ ಪರದಾಟ (ETV Bharat) ಹಬ್ಬಕ್ಕೆ ಹೋದವರೆಲ್ಲರೂ ವಾಪಸ್ ಬೆಂಗಳೂರಿಗೆ ತೆರಳುತ್ತಿರುವುದು ಒಂದೆಡೆ ಆದರೆ, ಇನ್ನೊಂದೆಡೆ ಹೆದ್ದಾರಿಯ ಐದು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಪರಿಣಾಮ ಬೆಳಗ್ಗೆ ಐದು ಗಂಟೆಗೆ ಹೆದ್ದಾರಿಯಲ್ಲಿ ಸಿಲುಕಿದವರು ಬೆ. 10 ಗಂಟೆಯಾದರೂ ತುಮಕೂರು ಬಿಟ್ಟು ಹೋಗೋಕು ಪರದಾಡಿದರು.
ತುಮಕೂರಿನ ಹೊರವಲಯದ ಊರುಕೆರೆ ಬಳಿ, ಬೆಳ್ಳಾವಿ ಕ್ರಾಸ್ ಬಳಿ, ನೆಲಹಾಲ್ ಸಮೀಪ, ಕಳ್ಳಂಬೆಳ್ಳ ಸಮೀಪದಲ್ಲಿ ಎರಡು ಸೇತುವೆ ಕಾಮಗಾರಿ ನಡೆಯುತ್ತಿದ್ದು, ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: ಸುದೀರ್ಘ ರಜೆ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆ; ಉದ್ಯೋಗಿಗಳಿಗೆ WFH ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರ ಪತ್ರ - Traffic Joint Commissioner Letter