ತುಮಕೂರು:ತುಮಕೂರಿನಲ್ಲಿ ನಿಲ್ಲದ ಮಳೆ ರಗಳೆಯಾಗಿದ್ದು, ಕೆರೆಯಂತಾದ ಯಲ್ಲಾಪುರಗೆ ಹೋಗುವ ಅಂಡರ್ಪಾಸ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ನೀರಿನಿಂದ ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತವಾಗುತ್ತಿದೆ. ಪಾವಗಡ, ಮಧುಗಿರಿ, ಕೊರಟಗೆರೆಗೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಡ್ಡಲಾಗಿ ನಿರ್ಮಿಸಿರುವ ಅಂಡರ್ ಪಾಸ್ ಒಳಗೆ ನಿಂತ ನೀರು ಹೊರಗೆ ಹೋಗದೆ ಮಳೆ ನೀರಿನಲ್ಲೇ ಓಡಾಡುತ್ತಿರುವ ಕಾರು, ಬಸ್ ಸಾಮಾನ್ಯವಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಜಲಾವೃತವಾಗುವ ಅಂಡರ್ ಪಾಸ್ ಕುರಿತು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ತುಮಕೂರು - ವಿಜಯಪುರದಲ್ಲಿ ಮಳೆರಾಯನದ್ದೇ ಆರ್ಭಟ - Heavy rains - HEAVY RAINS
ತುಮಕೂರು - ವಿಜಯಪುರದಲ್ಲಿ ಬಿಡದೇ ಮಳೆಯಾಗುತ್ತಿದ್ದು, ರಸ್ತೆಗಳು ನದಿಯಂತಾಗಿದೆ, ನದಿ ನೀರು ಜಮೀನಿಗೆ ನುಗ್ಗಲಾರಂಭಿಸಿದೆ.
Published : Jun 7, 2024, 2:06 PM IST
ವಿಜಯಪುರದಲ್ಲೂ ಅವಾಂತರ ಸೃಷ್ಟಿಸಿದ ಮಳೆರಾಯ:ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಮಳೆ ನೀರಲ್ಲಿ ಬೈಕ್ ಕೊಚ್ಚಿ ಹೋದ ಘಟನೆ ನಡೆದಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿಯೂ ಭಾರೀ ಮಳೆಯಾಗಿದ್ದು, ಕೃಷ್ಣಾ ನದಿಗೆ, ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು ಇದಾಗಿದ್ದು 1,768 ಕ್ಯೂಸೆಕ್ ದಾಖಲಾಗಿದೆ. ಮಳೆಯಿಂದ ಡೋಣಿ ನದಿಯೂ ಉಕ್ಕಿ ಹರಿಯಲಾರಂಭಿಸಿದೆ. ಪರಿಣಾಮ ಸಾರವಾಡ ಗ್ರಾಮದ ಬಳಿ ಜಮೀನಿಗೆ ನದಿ ನೀರು ನುಗ್ಗಿದೆ.
ಇದನ್ನೂ ಓದಿ:ಬಾದಾಮಿಯಲ್ಲಿ ಧುಮ್ಮುಕ್ಕುತ್ತಿದೆ ಅಕ್ಕ ತಂಗಿಯರ ಫಾಲ್ಸ್ - WATCH VIDEO - Akka Thangi Falls