ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಅಬ್ಬರಿಸಿದ ಮಳೆಯಲ್ಲಿ ಕೊಚ್ಚಿಹೋದ ಟೊಮ್ಯಾಟೊ ಫಸಲು; ರೈತನಿಗೆ ಕಣ್ಣೀರು ತರಿಸಿದ ವರುಣ - Tomato Washed out in Rain - TOMATO WASHED OUT IN RAIN

ದಾವಣಗೆರೆಯಲ್ಲಿ ಸುರಿದ ಧಾರಾಕಾರ ಮಳೆ ರೈತನ ಕಣ್ಣಲ್ಲಿ ನೀರು ತರಿಸಿದೆ. ಹೊಲದಲ್ಲಿ ಬೆಳೆದ ಟೊಮ್ಯಾಟೊ ನೀರಲ್ಲಿ ಕೊಚ್ಚಿ ಹೋಗಿದೆ. ಈ ಮನಕಲುಕುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

HEAVY RAIN  TOMATO CROP LOSS  DAVANGERE
ನೀರಿನಲ್ಲಿ ಕೊಚ್ಚಿದ ಟೊಮ್ಯಾಟೊ ಫಸಲು (ETV Bharat)

By ETV Bharat Karnataka Team

Published : Aug 20, 2024, 8:49 AM IST

ನೀರಿನಲ್ಲಿ ಕೊಚ್ಚಿದ ಟೊಮ್ಯಾಟೊ ಫಸಲು (ETV Bharat)

ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮಳೆ ಅಬ್ಬರಿಸಿದೆ. ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ‌. ಎಡೆಬಿಡದೆ ಸುರಿದ ಮಳೆಗೆ ರೈತ ಹಿಡಿಶಾಪ ಹಾಕಿದ್ದಾನೆ. ಒಂದು ಗಂಟೆ ಕಾಲ ಸುರಿದ ಮಳೆಗೆ ಕೈಗೆ ಬಂದಿದ್ದ ಟೊಮ್ಯಾಟೊ ಬೆಳೆಯ ಕೊಚ್ಚಿ ಹೋಗಿರುವ ಘಟನೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ರೈತ ಸುರೇಶ್ ಎಂಬುವರಿಗೆ ಸೇರಿದ ಟೊಮ್ಯಾಟೊ ಫಸಲು ನೀರಿ‌ನಲ್ಲಿ ಕೊಚ್ಚಿ ಹೋಗಿದೆ. ಜಮೀನಿನಲ್ಲಿ ಟೊಮ್ಯಾಟೊ ಕಿತ್ತು ಮಾರುಕಟ್ಟೆಗೆ ಒಯ್ಯಲು ಸುರೇಶ್ ಸಿದ್ಧತೆ ನಡೆಸಿದ್ದರು. ಟೊಮ್ಯಾಟೊವನ್ನು ಕಿತ್ತು ತಮ್ಮ ಹೊಲದಲ್ಲಿ ಒಂದೆಡೆ ಶೇಖರಣೆ ಮಾಡಿದ್ದರು. ಈ ವೇಳೆ ಒಂದು ಗಂಟೆ ಕಾಲ ಅಬ್ಬರಿಸಿದ ಮಳೆರಾಯನಿಂದ ಟೊಮ್ಯಾಟೊ ಬೆಳೆ ನೀರುಪಾಲಗಿದೆ.

ರೈತ ಸುರೇಶ್ ಟೊಮ್ಯಾಟೊ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಪಟ್ಟರು ಪ್ರಯೋಜನ ಆಗಿಲ್ಲ. ಈ ವೇಳೆ ಟ್ರೇಯಲ್ಲಿದ್ದ ಟೊಮ್ಯಾಟೊವನ್ನು ಹೇಗೋ ಪ್ರಯತ್ನ ಮಾಡಿ ಒಬ್ಬರೇ ಅಲ್ಪಸ್ವಲ್ಪ ಉಳಿಸಿಕೊಂಡಿದ್ದಾರೆ‌. ಇನ್ನು ಸ್ಥಳೀಯರು ಟೊಮ್ಯಾಟೊ ಕೊಚ್ಚಿ ಹೋಗ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಓದಿ:ಲಾಲ್ ಬಾಗ್ ಪುಷ್ಪ ಪ್ರದರ್ಶನ ಅಂತ್ಯ: 9 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ, ಬಂದ ಆದಾಯವೆಷ್ಟು? - Lalbagh flower show

ABOUT THE AUTHOR

...view details