ದಾವಣಗೆರೆ:ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಗುಡುಗುಸಹಿತ ಭಾರಿ ಮಳೆಯಾಯಿತು. ಹಳ್ಳ, ಕೊಳ್ಳ ಕಾಲುವೆಗಳು ತುಂಬಿ ಹರಿದವು. ದಾವಣಗೆರೆ, ಚನ್ನಗಿರಿ, ಹರಿಹರ ತಾಲೂಕಿನ ಹಲವೆಡೆ ಮಳೆಯಾಗಿದೆ. ಮಾಯಕೊಂಡ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಜಮೀನುಗಳಲ್ಲಿ ನೀರು ತುಂಬಿತ್ತು. ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಅಲ್ಲಲ್ಲಿ ಜಲಾವೃತಗೊಂಡಿವೆ.
ದಾವಣಗೆರೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ, ಸರ್ಕಾರಿ ಶಾಲೆ ಜಲಾವೃತ - Davanagere Rain - DAVANAGERE RAIN
ದಾವಣಗೆರೆ ಜಿಲ್ಲೆಯಲ್ಲಿ ಇಂದು ಬೆಳಕು ಹರಿಯುವ ಮುನ್ನವೇ ಜೋರು ಮಳೆ ಸುರಿಯಿತು.

ಸರ್ಕಾರಿ ಶಾಲೆ ಎದುರು ನಿಂತ ಮಳೆ ನೀರು (ETV Bharat)
Published : Sep 30, 2024, 11:41 AM IST
ಇಂದು ನಸುಕಿನ ಜಾವ 3.15ಕ್ಕೆ ಆರಂಭವಾದ ಮಳೆ ಸತತ ಒಂದು ಗಂಟೆ ಬಿರುಸಾಗಿ ಸುರಿಯಿತು. ಆವರಗೆರೆಯ ಸರ್ಕಾರಿ ಶಾಲೆಯ ಎದುರು ಮಳೆ ನೀರು ನಿಂತಿತ್ತು. ಹೀಗಾಗಿ, ಮಕ್ಕಳು ಶಾಲೆಗೆ ತೆರಳಲು ಅಸಾಧ್ಯವಾಗಿದೆ. ನಗರದ ಬೇತೂರು ರಸ್ತೆಯ ವೆಂಕಟೇಶ್ವರ ನಗರದ ತಗ್ಗು ಪ್ರದೇಶದಲ್ಲಿರುವ ಮನೆಗಳ ಆವರಣ ತುಂಬಾ ಚರಂಡಿ ನೀರು ನಿಂತಿರುವುದು ಕಂಡುಬಂತು.
ದಾವಣಗೆರೆಯಲ್ಲಿ ಗುಡುಗು ಸಹಿತ ಭಾರಿ ಮಳೆ (ETV Bharat)
ಇದನ್ನೂ ಓದಿ:ಮುಂಗಾರು ಮತ್ತೆ ಚುರುಕು: ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ - Karnataka Rain Forecast