ಚಿಕ್ಕಮಗಳೂರು:ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರಿಸಿದೆ. ರಾಜ್ಯ ಅತೀ ಎತ್ತರದ ಪ್ರದೇಶವಾದ ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಮಳೆಯ ನೀರು ಎರಡು ಅಡಿಗಳಷ್ಟು ಹರಿದಿದೆ. ಗಿರಿ ಪ್ರದೇಶಕ್ಕೆ ತೆರಳಿದ್ದ ಪ್ರವಾಸಿಗರು ಮಳೆಯಿಂದ ಪರದಾಡಿದರು.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ರಸ್ತೆ ಮೇಲೆ ಹರಿದ 2 ಅಡಿಗಳಷ್ಟು ನೀರು
ಪಶ್ಚಿಮಘಟ್ಟ ಪ್ರದೇಶದ ಪ್ರಸಿದ್ಧ ಪ್ರವಾಸಿ ಕೇಂದ್ರ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಮಳೆಯ ನೀರು ಎರಡು ಅಡಿಗಳಷ್ಟು ಹರಿದಿದೆ.
ರಸ್ತೆ ಮೇಲೆ ಹರಿದ 2 ಅಡಿಗಳಷ್ಟು ನೀರು (ETV Bharat)
Published : Oct 20, 2024, 11:06 PM IST
ವೃದ್ಧೆಯನ್ನು ಹೊತ್ತು ಸಾಗಿದ ಹಳ್ಳಿಗರು:ಕಿರು ಸೇತುವೆ ಜಲಾವೃತಗೊಂಡ ಪರಿಣಾಮ ವೃದ್ಧೆಯನ್ನ ಅಂಗೈಲಿ ಹೊತ್ತು ಹಳ್ಳಿಗರು ಸೇತುವೆ ದಾಟಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ವಾಯುಭಾರ ಕುಸಿತದ ಪರಿಣಾಮ ನಿರಂತರ ಮಳೆ, ಮುಳುಗುತ್ತಿದೆ ಬೆಂಗಳೂರು; ಹತ್ತು ಹಲವು ಅವಾಂತರ ಸೃಷ್ಟಿ