ಬೆಂಗಳೂರು:ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅವಾಂತರದ ಸರಮಾಲೆಯೇ ಸೃಷ್ಟಿಯಾಗಿದೆ. ಯಲಹಂಕ, ಮಲ್ಲೇಶ್ವರ, ಸಿಲ್ಕ್ ಬೋರ್ಡ್ ಸೇರಿದಂತೆ ನಾನಾ ಕಡೆಗಳಲ್ಲಿ ಮಳೆ ನೀರು ರಸ್ತೆಗಳಲ್ಲಿ ತುಂಬಿಕೊಂಡಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ ಮನೆಯಿಂದ ಆಚೆ ಬರಲಾಗದಷ್ಟು ಜಲಾವೃತವಾಗಿದೆ. ಇದರ ಬೆನ್ನಲ್ಲೇ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕಟ್ಟಡ ಕುಸಿತದ ಅವಘಡದಲ್ಲಿ 20 ಕ್ಕೂ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಈ ಪೈಕಿ ಬಿಹಾರ ಮೂಲದ ಅರ್ಮನ್ ಎಂಬ ಕಾರ್ಮಿಕ ಓರ್ವ ಮೃತಪಟ್ಟಿದ್ದಾನೆ. ಇನ್ನು 13 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಏಳು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ.
ಓರ್ವ ಕಾರ್ಮಿಕರ ಮೃತಪಟ್ಟಿದ್ದು, ಹಲವರನ್ನು 13 ಕಾರ್ಮಿಕರನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿದ್ದಾರೆ. ಎಲ್ಲರನ್ನು ರಕ್ಷಿಸಲು ಭರದಿಂದ ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ ಎಂದು ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಖಚಿತಪಡಿಸಿದ್ದಾರೆ.
ರಕ್ಷಣೆಯಾದವರು: ಬಿಹಾರ ಮೂಲದ ಕಾರ್ಮಿಕರಾದ ಜಿಸಾನ್, ಮಹಮ್ಮದ್ ಸಾಹಿಲ್, ರಶೀದ್, ಸಿತಾರೆ, ಇಲಿಫ್, ಸೋಹಿಲ್, ಆಂಧ್ರಪ್ರದೇಶದ ಚಿತ್ತೂರಿನ ಪ್ರದೀಪ್ ರೆಡ್ಡಿ ಅವರನ್ನು ರಕ್ಷಣೆ ಮಾಡಲಾಗಿದೆ.