ಹಾವೇರಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ವಾಹನಕ್ಕೆ ಕುರಿ ತುಂಬಿಕೊಂಡು ಬರುತ್ತಿದ್ದ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕುರಿಗಳೂ ಸಾವನ್ನಪ್ಪಿವೆ. ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್‌ಗೇಟ್ ಬಳಿ ಇಂದು ಘಟನೆ ನಡೆದಿದೆ.
ಮೃತರನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗುಡ್ಡಪ್ಪ ಕೈದಾಳಿ (40), ಮೈಲಾರೆಪ್ಪ ಕೈದಾಳಿ (41) ಮತ್ತು ಶಿವರಾಜ್ ಹೊಳೆಪ್ಪನವರ್ (22) ಎಂದು ಗುರುತಿಸಲಾಗಿದೆ. ಇವರೊಂದಿಗೆ ಬೊಲೆರೋದಲ್ಲಿದ್ದ ಬೀರಪ್ಪ ದೊಡ್ಡಚಿಕ್ಕಣ್ಣನವರ್, ನಿಂಗರಾಜ್ ಹಿತ್ತಲಮನಿ ಮತ್ತು ನಿಂಗಪ್ಪ ಕೂರಗುಂದ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆ ಹಾಗು ಹುಬ್ಬಳ್ಳಿ ಮತ್ತು ದಾವಣಗೆರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.