ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಮತ್ತು ಸಫಲ್ ಹೆಲಿಕಾಪ್ಟರ್ ಇಂಜಿನ್ಸ್ ಪ್ರೈವೇಟ್ ಒಪ್ಪಂದಕ್ಕೆ ಸಹಿ ಹಾಕಿದೆ. ಸಫಲ್ 13-ಟನ್ ಮಧ್ಯಮ ಲಿಫ್ಟ್ ಕ್ಲಾಸ್ ಇಂಡಿಯನ್ ಮಲ್ಟಿ-ರೋಲ್ ಹೆಲಿಕಾಪ್ಟರ್ "ಅರಾವಳಿ" ಹೆಸರಿನ ಹೊಸ ಪೀಳಿಗೆಯ ಹೈಪವರ್ ಎಂಜಿನ್‌ನ ಜಂಟಿ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪೂರೈಕೆ ಮತ್ತು ಬೆಂಬಲವನ್ನು ಡೆಕ್-ಬೇಸ್ಡ್ ಮಲ್ಟಿ-ರೋಲ್ ಹೆಲಿಕಾಪ್ಟರ್ಗೆ ಪೂರೈಸಲು ಮುಂದಾಗಿದೆ. ಭಾರತದ ಪ್ರಬಲ ಪರ್ವತ ಶ್ರೇಣಿಯಿಂದ ಪಡೆದ ಹೆಸರು ಅರಾವಳಿಯಾಗಿದ್ದು, ಎಂಜಿನ್ ತಂತ್ರಜ್ಞಾನಗಳಲ್ಲಿ ಆತ್ಮನಿರ್ಭತೆಯನ್ನು ಸಾಧಿಸುವಲ್ಲಿ ದೇಶದ ಆಕಾಂಕ್ಷೆಗಳನ್ನು ಸಂಕೇತಿಸಲಿದೆ.
ಈ ಕುರಿತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಮಾತನಾಡಿ, ಸಫಲ್ ಜೊತೆಗಿನ ಈ ಪಾಲುದಾರಿಕೆಯು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ನಮ್ಮ ಪ್ರಯಾಣದ ಪ್ರಮುಖ ಮೈಲಿಗಲ್ಲಾಗಿದೆ. ಇದು ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯ ವಿಶಾಲ ಗುರಿಗೆ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳ ಸಿಇಒ ಸೆಡ್ರಿಕ್ ಗೌಬೆಟ್ ಮಾತನಾಡಿ, ಸಫ್ರಾನ್ ಮತ್ತು ಹೆಚ್ಎಎಲ್ ನಡುವಿನ 25 ವರ್ಷಗಳ ಯಶಸ್ವಿ ಪಾಲುದಾರಿಕೆಯ ಪರಿಣಾಮದಿಂದ ಹೊಸ ಇಂಜಿನ್ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಹೆಜ್ಜೆ ಹೆಚ್ಎಎಲ್ ಜೊತೆಗಿನ ಸಹಯೋಗವನ್ನು ಶ್ರೀಮಂತಗೊಳಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರ ಕೂಡ ಕಾರ್ಯಕ್ರಮಗಳ ಯಶಸ್ಸನ್ನು ಖಚಿತಪಡಿಸಲಿದೆ ಎಂದಿದ್ದಾರೆ.