ತುಮಕೂರು: ಬಸ್ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆಯನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಬಸ್ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಒಡವೆ ಹಿಂತಿರುಗಿಸಿದ ಕೆಜಿಎಫ್ ಘಟಕದ ಕಂಡಕ್ಟರ್ ಕಲ್ಲಪ್ಪ ಹನುಮಂತ್ ಕವಣಿ ಮತ್ತು ಚಾಲಕ ಸಂತೋಷ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು: ₹3 ಲಕ್ಷ ಮೌಲ್ಯದ ಒಡವೆ ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ - gold ornaments bag returned
ಪ್ರಯಾಣಿಕರೊಬ್ಬರು ಬಸ್ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
Published : Jun 5, 2024, 8:19 PM IST
ಅದೋನಿಯಿಂದ ಪ್ರಯಾಣಿಸಿದ್ದ ಪ್ರಮೀಳಾ ಎಂಬವರು ಬಳ್ಳಾರಿಯಲ್ಲಿ ತಮ್ಮ ಬ್ಯಾಗ್ಅನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದರು. ಬಸ್ನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಕಂಡಕ್ಟರ್ ಹಾಗೂ ಚಾಲಕ, ಶಿರಾ ಘಟಕಕ್ಕೆ ಬಂದು ಘಟಕದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಹೊಸಪೇಟೆ, ಬಳ್ಳಾರಿ ಹಾಗೂ ಶಿರಾ ಡಿಪೋಗಳ ಮುಖ್ಯಸ್ಥರ ಸಹಕಾರದಿಂದ ಶಿರಾ ಘಟಕದಲ್ಲಿ ತಮ್ಮ ಬ್ಯಾಗ್ ಇರುವ ಮಾಹಿತಿ ಪ್ರಮೀಳಾ ಅವರಿಗೆ ಸಿಕ್ಕಿದೆ. ಬಳಿಕ ಅವರು ಶಿರಾಕ್ಕೆ ಆಗಮಿಸಿ ತಮ್ಮ ಆಭರಣಗಳಿರುವ ಬ್ಯಾಗ್ ಸ್ವೀಕರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ಹಾವೇರಿಯ ಹೆಗ್ಗೇರಿ ಕೆರೆಗಾಗಿ ಬದುಕನ್ನೇ ಮುಡಿಪಿಟ್ಟ ಈ ಪರಿಸರಪ್ರೇಮಿಗೊಂದು ಸೆಲ್ಯೂಟ್! - World Environment Day