ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್; ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ! (ETV Bharat) ಕಾರವಾರ:ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಿಂದ ಗಂಗಾವಳಿ ನದಿಗೆ ಉರುಳಿಬಿದ್ದು ಸಡಗೇರಿ ಬಳಿ ಕೊಚ್ಚಿ ಹೋಗಿದ್ದ ಎಚ್.ಪಿ.ಗ್ಯಾಸ್ ಟ್ಯಾಂಕರ್‌ನಿಂದ ಗ್ಯಾಸ್ ಹೊರಬಿಟ್ಟು ಖಾಲಿ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆ ನಡೆದ ಸ್ಥಳದಿಂದ ಹಲವು ಕಿ.ಮೀಗಳಷ್ಟು ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಅನ್ನು ಸಗಡಗೇರಿಯ ಸಮೀಪದಲ್ಲಿ ನಿಲ್ಲಿಸಲಾಗಿದೆ. ಕೋಸ್ಟ್ ಗಾರ್ಡ್ ಸಮ್ಮುಖದಲ್ಲಿ ಕಂಪೆನಿಯ ತಜ್ಞರು ಟ್ಯಾಂಕರ್ನಲ್ಲಿದ್ದ 18 ಕ್ವಿಂಟಲ್ ಗ್ಯಾಸ್ ಹೊರಬಿಡುತ್ತಿದ್ದಾರೆ. ಶೇ 60ರಷ್ಟು ಗ್ಯಾಸ್ ಅನ್ನು ನದಿಗೆ ಬಿಡಲಾಗುತ್ತಿದೆ.
ಮುಂಜಾಗೃತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್ಡಿಆರ್ಎಫ್, ಎನ್‌ಡಿಆರ್‌ಎಫ್, ಹೆಚ್ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡದವರು ಸ್ಥಳದಲ್ಲಿದ್ದಾರೆ. ಟ್ಯಾಂಕರ್ನಲ್ಲಿರುವ ಗ್ಯಾಸ್ ಅನ್ನು ಮೀಟರ್ ಮಾಪನನಿಂದ ಅಳೆದು ನದಿ ಹಾಗೂ ಗಾಳಿಯಲ್ಲಿ ಬಿಡಲಾಗುತ್ತಿದೆ.
ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮೊಬೈಲ್, ವಾಹನ ಸಂಚಾರ, ಒಲೆ ಉರಿಸುವುದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಊರಿನ ಸುತ್ತ ಡಂಗೂರ ಕೂಡಾ ಸಾರಲಾಗಿದೆ.
ಇದನ್ನೂ ಓದಿ:ಕುಮಟಾದಲ್ಲಿ ತೆರವು ಕಾರ್ಯಾಚರಣೆ ವೇಳೆಯೇ ಕುಸಿದ ಗುಡ್ಡ; ಭಯಾನಕ ವಿಡಿಯೋ - Landslide In Kumta