ಕರ್ನಾಟಕ

karnataka

ETV Bharat / state

ಜಮ್ಮು ಕಾಶ್ಮೀರ, ಹರಿಯಾಣ ಫಲಿತಾಂಶ: ಹೀಗಿದೆ ರಾಜ್ಯ ಕಾಂಗ್ರೆಸ್​ ನಾಯಕರ ಪ್ರತಿಕ್ರಿಯೆ

ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತಮ್ಮ ಪಕ್ಷ ಗಳಿಸುತ್ತಿರುವ ಸ್ಥಾನಗಳ ಬಗ್ಗೆ ರಾಜ್ಯದ ಕಾಂಗ್ರೆಸ್​ ನಾಯಕರು ಮಾತನಾಡಿದ್ದಾರೆ.

By ETV Bharat Karnataka Team

Published : 7 hours ago

D K Shivakumar, G Parameshwar Krishna Byregowda
ಡಿ.ಕೆ. ಶಿವಕುಮಾರ್​, ಜಿ.ಪರಮೇಶ್ವರ್​, ಕೃಷ್ಣ ಬೈರೇಗೌಡ (ETV Bharat)

ಬೆಂಗಳೂರು: "ಜನರು ಬಿಜೆಪಿಯನ್ನು ತಿರಸ್ಕರಿಸುತ್ತಿರುವುದು ಗೊತ್ತಾಗುತ್ತಿದೆ. ಮಹಾರಾಷ್ಟ್ರದಲ್ಲೂ ಇದೇ ರೀತಿ ಮಾಡುತ್ತೇವೆ. ಬದಲಾವಣೆ ಪ್ರಾರಂಭವಾಗಿದೆ. ಜಮ್ಮು ಕಾಶ್ಮೀರದಲ್ಲಿ‌ ಸಮ್ಮಿಶ್ರ ಸರ್ಕಾರ ಬರಲಿದೆ. ಹರಿಯಾಣದಲ್ಲಿ ಬಹುಮತ ಗಳಿಸುತ್ತೇವೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, "ಗ್ಯಾರೆಂಟಿಗಳು‌ ಮುಳುವಾದವಾ ಗೊತ್ತಿಲ್ಲ. ಆರ್ಥಿಕ‌ ಸ್ಥಿತಿಗತಿ‌ ಅಧ್ಯಯನ ಮಾಡಿ ತಂದಿದ್ದು. ಬಡತನ ಗಮನದಲ್ಲಿಟ್ಟುಕೊಂಡು ಗ್ಯಾರೆಂಟಿ ತಂದೆವು. ಪ್ರಾರಂಭದಲ್ಲಿ ಪ್ರಧಾನಿ, ಬಿಜೆಪಿ ನಾಯಕರು ಸೇರಿ ಬಹಳಷ್ಟು ಜನ ಟೀಕೆ ಮಾಡಿದ್ರು. ರಾಜ್ಯದಲ್ಲೂ ಗ್ಯಾರಂಟಿಗೆ ಟೀಕೆ ಮಾಡಿದ್ರು. ಬಡತನದ ರೇಖೆಗಿಂತ ಜನರು ಮೇಲೆ ಬರಬೇಕು.‌ ನಾವು ವೋಟ್ ಬ್ಯಾಂಕ್ ಮಾಡ್ತೇವೆ ಅಂತ ಹೇಳಲ್ಲ. ಬಡವರನ್ನು ಮೇಲೆತ್ತಲು‌ ಮಾಡಿದ್ದು. ಈಗ ಅವರಿಗೂ ಇದರ ಬಗ್ಗೆ ಅರ್ಥವಾಗಿದೆ. ಬಹುಶಃ ಅವರೂ ಮಾಡಬಹುದು" ಎಂದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್​ (ETV Bharat)

ಜಾತಿ‌ ಜನಗಣತಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ಮುಂಚೆ ಬಿಜೆಪಿ ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿದ್ದಾರೆ ಅಂತ ಹೇಳಿದ್ರು. ಈಗ ಜಾರಿ ಮಾಡಲು ಹೊರಟರೆ ಬೇರೆಯೇ ಹೇಳ್ತಿದ್ದಾರೆ. ಜಾತಿ ಗಣತಿ ಆಧಾರದಲ್ಲಿ ನಾವು ಮುಂದೆ ಕಾರ್ಯಕ್ರಮ ಮಾಡಲು ಸಹಾಯವಾಗಲಿದೆ. ಈ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ತರುತ್ತೇವೆ. ಸೆ.18ರ ಸಂಪುಟ ಸಭೆಗೆ ತರುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಸಬ್ ಕಮಿಟಿ‌ ಮಾಡೋದಾ? ಬೇರೆ ಏನು ಮಾಡೋದು ಯೋಚಿಸ್ತೇವೆ. ವಸ್ತುಸ್ಥಿತಿಯನ್ನು ಜನರ ಮುಂದೆ ಇಡ್ತಾರೆ. ಅದೂ ಬೇಡವೆಂದರೆ ಹೇಗೆ? 160 ಕೋಟಿ ಖರ್ಚು ಮಾಡಿ ಮಾಡಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರ ಸೆನ್ಸಸ್ ಮಾಡೋಕೆ ನೋಡ್ತಿದೆ.‌ ನಾವು ಪ್ರಧಾನಿಯವರನ್ನು ಭೇಟಿ ಮಾಡಿದ್ದೆವು. ಆಗ ಸೆನ್ಸೆಸ್ ಬಗ್ಗೆ ಅವರು ಹೇಳಿದ್ದರು. ಆಗಲೂ ವರದಿ ಬರುತ್ತಲ್ಲ ಆಗ ಏನು ಹೇಳ್ತಾರೆ. ಇದು ಅಧಿಕೃತವೇ ಅಲ್ವೇ?" ಎಂದು ಪ್ರಶ್ನಿಸಿದರು.

ಪದೇ ಪದೆ ದಲಿತ ಸಚಿವರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, "ಚಾಯ್ ಪೇ ಚರ್ಚೆ ಆಗ್ತಿದೆಯಲ್ಲ.‌ ಹಾಗೆ ಕಾಫಿ ಪೇ ಚರ್ಚೆ ಆಗಬೇಕಲ್ಲ. ನಾವು ಎಲ್ಲೋ ಕುಳಿತು ಚರ್ಚೆ ಮಾಡಿದ್ರೆ, ನಾವು ಮಾತನಾಡೋದ್ರಿಂದ ಏನೂ ಆಗಲ್ಲ. ಆ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲವಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲ್ಲ. ಅಂತಹ ಅಗತ್ಯವೂ ಬಂದಿಲ್ಲ. ಪದೇ ಪದೆ ಅವರು ಹೇಳ್ತಿದ್ದಾರೆ. ನಾವೂ ಅದನ್ನೇ ಹೇಳ್ತಿದ್ದೇವೆ" ಎಂದರು.

ಬಿಟ್ ಕಾಯಿನ್ ಹಗರಣದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, "ಪೂಜಾರ್ ಎಂಬುವರನ್ನು ಹುಡುಕುತ್ತಿದ್ರು. ತಪ್ಪಿಸಿಕೊಂಡು ತಿರುಗುತ್ತಿದ್ದ ಆ ವ್ಯಕ್ತಿ ಸುಪ್ರೀಂ ಕೋರ್ಟ್​ಗೂ‌ ಹೋಗಿದ್ರು. ಆದ್ರೆ ಏನೂ ಪ್ರಯೋಜನವಾಗಲಿಲ್ಲ. ಅದಕ್ಕೆ ಈಗ ಸರೆಂಡರ್ ಆಗಿದ್ದಾರೆ. ತನಿಖೆ ನಡೆಯುತ್ತಿದೆ, ಮುಂದುವರಿಯುತ್ತೆ" ಎಂದರು.

ಜನ‌ಬದಲಾವಣೆ ಬಯಸಿದ್ದಾರೆ- ಡಿಸಿಎಂ ಡಿಕೆಶಿ:"ಮುಂದೆ ಮಹಾರಾಷ್ಟ್ರ ಚುನಾವಣೆ ಇದೆ. ನಾವು ಜನರ ಪರ ಕಾರ್ಯಕ್ರಮ ಕೋಟ್ಟಿದ್ದೇವೆ. ಭಾವನೆ ಬೇಡ ಅಂತ ಬದುಕಿಗಾಗಿ‌ ಕಾರ್ಯಕ್ರಮ ಕೊಟ್ಟಿದ್ದೇವೆ. ಜನರ ಭಾವನೆಯೇ ಇದು. ನಾನು ಮುಂದಿನ ಚುನಾವಣೆ ದಿಕ್ಸೂಚಿ ಅಂತ ಹೇಳ್ತಿಲ್ಲ. ಬದಲಾವಣೆಯೇ ಬೆಳಕು. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆಜನ ಬದಲಾವಣೆ ಬಯಸಿದ್ದಾರೆ. ನಮ್ಮ ರಾಜ್ಯದಿಂದ ಕಾರ್ಯಕ್ರಮಗಳು ಆರಂಭವಾಗಿವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಎಲ್ಲದಕ್ಕೂ ಒಂದೊಂದು ಕಾಲ ಇರುತ್ತೆ. ಎನ್​ಡಿಎಗೆ ಜನ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಈಗ ಜನರು ಬದಲಾವಣೆ ಬಯಸಿದ್ದಾರೆ. ಅದರ ಫಲವಾಗಿ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್​ ಮೈತ್ರಿಕೂಟ ಅಧಿಕಾರಕ್ಕೆ‌ ಬರುತ್ತಿದೆ" ಎಂದರು.

ಇದನ್ನೂ ಓದಿ:ವಿಧಾನಸಭೆ ಚುನಾವಣೆ ಫಲಿತಾಂಶ; ಹರಿಯಾಣದಲ್ಲಿ ಬಿಜೆಪಿ ಮುನ್ನಡೆ, ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕಮಾಲ್​

ABOUT THE AUTHOR

...view details