ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರದ ಸರ್ಕಾರಿ ಹಾಸ್ಟೆಲ್​ಗಳಿಗೆ ಫುಲ್‌ ಡಿಮ್ಯಾಂಡ್‌!

ಅಚ್ಚುಕಟ್ಟು, ಸುರಕ್ಷತೆಗೆ ಹೆಸರಾಗಿರುವ ದೊಡ್ಡಬಳ್ಳಾಪುರದಲ್ಲಿರುವ ಸರ್ಕಾರದ ಸುಸಜ್ಜಿತ ವಿದ್ಯಾರ್ಥಿನಿಲಯಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಮುಗಿಬೀಳುತ್ತಿದ್ದಾರೆ.

ದೊಡ್ಡಬಳ್ಳಾಪುರದ ಸರ್ಕಾರಿ ಹಾಸ್ಟೆಲ್​ಗಳಿಗೆ ಫುಲ್‌ ಡಿಮ್ಯಾಂಡ್‌
ದೊಡ್ಡಬಳ್ಳಾಪುರದ ಸರ್ಕಾರಿ ಹಾಸ್ಟೆಲ್​ಗಳಿಗೆ ಭಾರಿ ಡಿಮ್ಯಾಂಡ್‌ (ETV Bharat)

By ETV Bharat Karnataka Team

Published : Oct 8, 2024, 10:29 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ತಾಲೂಕಿನಲ್ಲಿರುವ ಸರ್ಕಾರದ ಸುಸಜ್ಜಿತ ವಿದ್ಯಾರ್ಥಿನಿಲಯಗಳಿಗೆ ಮಾರು ಹೋಗಿರುವ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಲು ಮುಗಿಬೀಳುತ್ತಿದ್ದಾರೆ. ಸ್ಥಳೀಯರಷ್ಟೇ ಅಲ್ಲದೇ, ದೂರದ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಇಲ್ಲಿನ ಹಾಸ್ಟೆಲ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಟ್ಟು 8 ವಿದ್ಯಾರ್ಥಿನಿಲಯಗಳಿವೆ. ಇದರಲ್ಲಿ ಎರಡು ಬಾಲಕಿಯರು, 4 ಬಾಲಕರ ವಿದ್ಯಾರ್ಥಿ ನಿಲಯಗಳಿವೆ. ಇವುಗಳ ಪೈಕಿ 2 ಮೆಟ್ರಿಕ್‌ ನಂತರ, 6 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಿವೆ. 2 ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 221 ವಿದ್ಯಾರ್ಥಿಗಳು, 6 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 575 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸರ್ಕಾರ ಇಲ್ಲಿನ ವಿದ್ಯಾರ್ಥಿ ನಿಲಯಗಳಿಗೆ ಮಂಜೂರು ಮಾಡಿರುವ ಸ್ಥಾನ ಸಂಖ್ಯೆ 727. ಆದರೆ, ದಾಖಲಾಗಿರುವುದು 796 ಜನ ವಿದ್ಯಾರ್ಥಿಗಳು. ಪೈಕಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಬಳ್ಳಾರಿ ಜಿಲ್ಲೆ ವಿದ್ಯಾರ್ಥಿಗಳಾಗಿದ್ದಾರೆ.

ದೊಡ್ಡಬಳ್ಳಾಪುರದ ಸರ್ಕಾರಿ ಹಾಸ್ಟೆಲ್​ಗಳಿಗೆ ಫುಲ್‌ ಡಿಮ್ಯಾಂಡ್‌ (ETV Bharat)

ಬಿ.ಕಾಂ ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿ, "ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಮತ್ತು ತಾಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್​ಗಳಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಪದವಿ, ವೃತ್ತಿಪರ ಕೋರ್ಸ್​ಗಳಿಗೆ ಸಂಬಂಧಿಸಿದ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ವಿಜಯಪುರದಿಂದ ಬಂದಿದ್ದೇನೆ" ಎಂದು ತಿಳಿಸಿದರು.

ಬಿ.ಎಡ್ ವಿದ್ಯಾರ್ಥಿನಿ ಪ್ರೇಮಾ ಮಾತನಾಡಿ, "ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಅಧಿಕಾರಿಗಳು ಸೇರಿದಂತೆ ವಾರ್ಡನ್ ಮತ್ತು ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾದಾಗ ಔಷಧೋಪಚಾರ ಮಾಡುತ್ತಾರೆ. ಕುಡಿಯಲು ಬಿಸಿನೀರು, ಗಂಜಿಯನ್ನು ಮಾಡಿಕೊಡುತ್ತಾರೆ. ಇಲ್ಲಿನ ವಾತಾವರಣ ನಮ್ಮ ಮನೆಯಂತಿದೆ" ಎಂದು ಹೇಳಿದರು.

ಇದನ್ನೂ ಓದಿ:ಕನ್ನಡ ವಿರೋಧಿ ಧೋರಣೆಯಿಂದ HAL ಸ್ಥಳೀಯರ ಉದ್ಯೋಗ ಕಸಿದಿದೆ: ಪುರುಷೋತ್ತಮ ಬಿಳಿಮಲೆ - HAL JOB

ABOUT THE AUTHOR

...view details