ಬೆಂಗಳೂರು: ಕಿರುತೆರೆಯ ಬಿಗ್‌ಬಾಸ್ ಸೀಸನ್- 11ರ ಸ್ಪರ್ಧಿಯಾಗಿರುವ ಚೈತ್ರಾ ಅವರು ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಎಲ್ಎ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚಿಸಿದ ಆರೋಪ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು.
ವಂಚನೆ ಆರೋಪ ಪ್ರಕರಣ; ಬಿಗ್‌ಬಾಸ್ ಮನೆಯಿಂದ ಬಂದು ಕೋರ್ಟ್ಗೆ ಹಾಜರಾದ BIG BOSS ಸ್ಪರ್ಧಿ ಚೈತ್ರಾ
ಎಂಎಎಲ್ಎ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಗಿದ್ದ ಚೈತ್ರಾ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಹೋಗಿದ್ದರು.
Published : Dec 3, 2024, 2:16 PM IST
|Updated : Dec 3, 2024, 2:32 PM IST
ನೋಟಿಸ್ ಬಂದ ಹಿನ್ನೆಲೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ನಗರದ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ವಾಪಾಸ್ ತೆರಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಚೈತ್ರಾ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದ ಚೈತ್ರಾ, ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು.
ಇದನ್ನೂ ಓದಿ:'ಪ್ರೀತಿ ಪಡೆಯಲು ಮತ್ತೆ ಬರುವೆ': ಬಿಗ್ ಬಾಸ್ನಿಂದ ಹೊರಬಂದು ಸುದೀಪ್, ಕನ್ನಡಿಗರಿಗೆ ಶೋಭಾ ಶೆಟ್ಟಿ ಪತ್ರ