ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರು ಅಪಘಾತ (ETV Bharat) ರಾಮನಗರ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಹಾರಿದೆ.
ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ಬೆಂಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಸ್ಕೋಡಾ ಕಾರು ಮುಂದೆ ಹೋಗುತ್ತಿದ್ದ ಮತ್ತೊಂದು ಕಾರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಡಿವೈಡರ್‌ಗೆ ಡಿಕ್ಕಿಯಾಯಿತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರೋಡ್ ಪಕ್ಕದಲ್ಲಿದ್ದ ಕೆರೆಗೆ ಹಾರಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಡಕ್ಕೂ ಕ್ಯಾರೆನ್ನದ ಚಾಲಕರು!:ರಸ್ತೆಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ದಂಡಾಸ್ತ್ರ ಪ್ರಯೋಗಿಸುತ್ತಿದೆ. ಅದರಂತೆ, 80 ಕಿಲೋ ಮೀಟರ್ ಮೀರಿ ಚಾಲನೆ ಮಾಡುವ ಚಾಲಕರಿಗೆ ದಂಡದ ಬರೆ ಎಳೆಯಾಗುತ್ತಿದೆ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಳವಡಿಸಿರುವ ಎಐ ಕ್ಯಾಮರಾಗಳ ಮೂಲಕ ವೇಗದ ಮಿತಿ ಮೀರುವ ವಾಹನಗಳನ್ನು ಸೆರೆ ಹಿಡಿದು ದಂಡ ಹಾಕಲಾಗುತ್ತಿದ್ದು, ಕೇವಲ ಎರಡು ದಿನಕ್ಕೆ 43 ಲಕ್ಷ ರೂ ಸಂಗ್ರಹವಾಗಿದೆ. ಆದರೂ ಬಹಳಷ್ಟು ವಾಹನ ಚಾಲಕರು ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.
ಇದನ್ನೂ ಓದಿ:ಅಂತ್ಯಕ್ರಿಯೆ ವೇಳೆ ಚಿತೆ ಏರಿ ಕುಳಿತ ಕೋತಿ! ವಿಡಿಯೋ - Monkey Funeral Pyre