ಕರ್ನಾಟಕ

karnataka

ETV Bharat / state

ಸಿಎಂ ಚುನಾವಣಾ ರ್‍ಯಾಲಿ ವೇಳೆ ಭದ್ರತಾ ಲೋಪ: ಸಿದ್ದಾಪುರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಸೇರಿ​ ನಾಲ್ವರು ಸಿಬ್ಬಂದಿ ಅಮಾನತು - cm security lapse - CM SECURITY LAPSE

ಸಿಎಂ ಚುನಾವಣಾ ಪ್ರಚಾರದ ವೇಳೆ ಭದ್ರತಾ ವೈಫಲ್ಯವಾದ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಸಿಎಂ ಚುನಾವಣಾ ರ್‍ಯಾಲಿ ವೇಳೆ ಭದ್ರತಾ ಲೋಪ: ಸಿದ್ದಾಪುರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಸೇರಿ​ ನಾಲ್ವರು ಸಿಬ್ಬಂದಿ ಅಮಾನತ್ತು
Etv Bharaಸಿಎಂ ಚುನಾವಣಾ ರ್‍ಯಾಲಿ ವೇಳೆ ಭದ್ರತಾ ಲೋಪ: ಸಿದ್ದಾಪುರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಸೇರಿ​ ನಾಲ್ವರು ಸಿಬ್ಬಂದಿ ಅಮಾನತ್ತು

By ETV Bharat Karnataka Team

Published : Apr 20, 2024, 6:20 PM IST

ಬೆಂಗಳೂರು: ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರದ ವೇಳೆ ಭದ್ರತಾ ವೈಫಲ್ಯವಾದ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮೆಹಬೂಬ್, ಎಎಸ್ಐ ನಾಗರಾಜು ಹಾಗೂ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ.

ಏ. 8ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ವಾಹನದಲ್ಲಿ ರ್‍ಯಾಲಿ ಮೂಲಕ ಪ್ರಚಾರ ನಡೆಸುತ್ತಿದ್ದರು. ವಿಲ್ಸನ್ ಗಾರ್ಡನ್ ಬಳಿ ರ್‍ಯಾಲಿ ವಾಹನ ಹತ್ತಿ ಸಿದ್ದಾಪುರದ ಕಾಂಗ್ರೆೆಸ್ ಕಾರ್ಯಕರ್ತ ಸೈಯದ್ ರಿಯಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೂವಿನ ಹಾರ ಹಾಕಿದ್ದ. ಈ ವೇಳೆ ಸೈಯದ್ ರಿಯಾಜ್ ಸೊಂಟದಲ್ಲಿ ಗನ್​ ಇರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಭದ್ರತಾ ವೈಫಲ್ಯವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣಾ ಪೊಲೀಸರು, ಆರೋಪಿ ಸೈಯದ್ ರಿಯಾಜ್​ನ ಹೇಳಿಕೆ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ:ಸಿಎಂ ಪ್ರಚಾರದ ವೇಳೆ ಭದ್ರತಾ ಲೋಪ ಪ್ರಕರಣ: ಗನ್​ ಹೊಂದಿದ್ದ ವ್ಯಕ್ತಿ ಹೇಳಿದ್ದೇನು? - Security Lapse

ABOUT THE AUTHOR

...view details