ಕರ್ನಾಟಕ

karnataka

ETV Bharat / state

ಬೆಳೆ ಖರೀದಿಸಿ ಹಣ ನೀಡದ ಮಧ್ಯವರ್ತಿಗಳು: ಬಳ್ಳಾರಿಯ ನಾಲ್ವರು ರೈತರಿಂದ ಆತ್ಮಹತ್ಯೆ ಯತ್ನ - Farmers Attempt Suicide - FARMERS ATTEMPT SUICIDE

ವಿಷ ಸೇವಿಸಿ ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನಲ್ಲಿ ನಡೆದಿದೆ.

Four Farmers Attempt Suicide By Consuming Poison
ಆತ್ಮಹತ್ಯೆಗೆ ಯತ್ನಿಸಿದ ರೈತರನ್ನು ತಡೆಯುತ್ತಿರುವ ಗ್ರಾಮಸ್ಥರು (ETV Bharat)

By ETV Bharat Karnataka Team

Published : Jul 1, 2024, 7:08 AM IST

ಬಳ್ಳಾರಿ: ಒಣ ಮೆಣಸಿನಕಾಯಿ ಖರೀದಿಸಿದ ಮಧ್ಯವರ್ತಿಗಳು ಹಣ ನೀಡದ ಕಾರಣ ಮನನೊಂದು ನಾಲ್ವರು ರೈತರು ಅತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿ ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಒಂದೂವರೆ ವರ್ಷದ ಹಿಂದೆ ಗ್ರಾಮಸ್ಥರು ಇದೇ ಊರಿನವರಾದ ರಾಮರೆಡ್ಡಿ, ಸುದರ್ಶನ ಮತ್ತು ವಿರೂಪಾಕ್ಷ ಎಂಬ ಮಧ್ಯವರ್ತಿಗಳ ಮೂಲಕ ಒಣ ಮೆಣಸಿನಕಾಯಿಯನ್ನು ಖಾಸಗಿ ಕಂಪನಿಯೊಂದಕ್ಕೆ ಮಾರಾಟ ಮಾಡಿದ್ದರು. ಕಂಪನಿಯ ಅಶಾರಾಣಿ, ಆಶೋಕ ಕುಮಾರ, ಶಿವಮೂರ್ತಿ ಎಂಬವರು ಬೆಳೆ ಖರೀದಿಸಿದ್ದರು. ಇವರು ಗ್ರಾಮದ 65 ರೈತರ ಸುಮಾರು 1.93 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡು ಸತಾಯಿಸುತ್ತಿದ್ದಾರೆ. ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾರೆ ಎಂದು ನೊಂದು ಗ್ರಾಮದ ಹನುಮಂತ, ರುದ್ರೇಶ್, ಕೊಣೀರ, ಶೇಖರ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯರು ಅಸ್ವಸ್ಥಗೊಂಡ ರೈತರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಈಗಾಗಲೇ ಕುರುಗೋಡು ಪೊಲೀಸ್​ ಠಾಣೆಗೆ ದೂರು ನೀಡಿರುವ ರೈತರು, ಒಣ ಮೆಣಸಿನಕಾಯಿ ಖರೀದಿಸಿ, ಹಣ ನೀಡದೇ ಸತಾಯಿಸುತ್ತಿರುವವರನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಬೇಕು. ನಮ್ಮ ಹಣ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹೆಚ್ಚಳ ; 500ರ ಗಡಿ ದಾಟಿದ ಪ್ರಕರಣ - Dengue cases

ABOUT THE AUTHOR

...view details