ಕರ್ನಾಟಕ

karnataka

ETV Bharat / state

ಜಿ ಎಂ ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಮ್ಮ ಬೆಂಬಲವಿಲ್ಲ: ಎಂ ಪಿ ರೇಣುಕಾಚಾರ್ಯ - former minister m p renukacharya

ದಾವಣಗೆರೆ ಕ್ಷೇತ್ರದ ಟಿಕೆಟ್​ ನನಗೆ ಇಲ್ಲವೇ, ಡಾ. ರವಿಕುಮಾರ್ ಅವರಿಗೆ ಕೊಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.

former-minister-m-p-renukacharya-reaction-on-mp-g-m-siddeshwar
ಜಿ ಎಂ ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಮ್ಮ ಬೆಂಬಲವಿಲ್ಲ: ಎಂ ಪಿ ರೇಣುಕಾಚಾರ್ಯ

By ETV Bharat Karnataka Team

Published : Mar 13, 2024, 7:05 PM IST

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬಕ್ಕೆ ಯಾವ ಕಾರಣಕ್ಕೂ ಈ ಬಾರಿ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಅವರಿಗೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಗುರಿ, ಕನಸು ಒಂದೇ. ದೇಶದಲ್ಲಿ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು. 28 ಕ್ಷೇತ್ರದಲ್ಲೂ ಬಿಜೆಪಿ - ಎನ್​ಡಿಎ ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂದರು.

ಇಂದು ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಲಿದೆ. ನರೇಂದ್ರ ಮೋದಿ ಅವರಿಗಿರೋ ಬದ್ಧತೆ ನೋಡಿ ಸ್ವಾಭಿಮಾನಿ ಭಾರತದವರು, ಎಲ್ಲಾ ಭಾರತೀಯರು ಅವರ ಆಡಳಿತ ಒಪ್ಪಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲು ಆದರ್ಶಮಯರು. ರೇಣುಕಾಚಾರ್ಯ ಸಾಮಾನ್ಯ ಕಾರ್ಯಕರ್ತ. ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಇದೆ. ದಾವಣಗೆರೆ ಕ್ಷೇತ್ರದಲ್ಲಿ ನಾನು ಅಭ್ಯರ್ಥಿ ಅಂತ ಎಲ್ಲೂ ಹೇಳಿಲ್ಲ. ನಮ್ಮ ಬೆಂಬಲಿಗರು ನಿಲ್ಲಿ ಅಂತ ಒತ್ತಾಯಿಸುತ್ತಿದ್ದಾರೆ. ಟಿಕೆಟ್​ ನನಗೆ ಇಲ್ಲವೇ, ಡಾ. ರವಿಕುಮಾರ್ ಅವರಿಗೆ ಕೊಡಬೇಕು ಎಂದು ಆಗ್ರಹಿಸಿದರು.

''ಈಗಿರೋ ಲೋಕಸಭಾ ಸದಸ್ಯರು ನಾಲ್ಕು ಬಾರಿ ಗೆದ್ದಿದ್ದಾರೆ, ನಾವು ಸೋತಿರಬಹುದು. ಮಾಜಿ ಶಾಸಕರು, ಮಾಜಿ ಸಚಿವರಿಂದ ಈಗಿರೋ ಸಂಸದರಿಗೆ ವಿರೋಧ ಇದೆ. ದಾವಣಗೆರೆಯಲ್ಲಿ ನನ್ನ ಬಿಟ್ಟರೆ ಯಾರೂ ಇಲ್ಲ. ಶಾಮನೂರು ಶಿವಶಂಕರಪ್ಪ ವಿರುದ್ಧ ಹೋರಾಟ ಮಾಡಿರುವವನು ನಾನೊಬ್ಬನೇ. ನನಗೆ ಟಿಕೆಟ್ ಕೊಡಿ, ನನ್ನ ಹೆಂಡತಿಗೆ ಕೊಡಿ, ಇಲ್ಲ ಮಕ್ಕಳಿಗೆ ಕೊಡಿ ಅಂತ ಹೇಳ್ತಿದ್ದಾರೆ. ಅವರ ದುರಹಂಕಾರದ ಮಾತುಗಳ ಬಗ್ಗೆ ವಿರೋಧ ಇದೆ'' ಎಂದರು.

''ನಾವು ಸೋತಿರಬಹುದು. ಅವರ ಬಗ್ಗೆ ನಾವು ನೇರವಾಗಿ ವಿರೋಧ ಮಾಡಿದ್ದೇವೆ‌. ಇವರ ಮಗನಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ, ಹಾಗಾಗಿ ದಾವಣಗೆರೆ ಎಲ್ಲಾ ಸೀಟು ಸೋತರು ಅಂತ ಹೇಳಿದರು. ಆದರೆ ವೈದ್ಯನ ಮಗ ವೈದ್ಯ ಆಗಬೇಕು ಅಂದರೆ ವೈದ್ಯಕೀಯ ಶಿಕ್ಷಣ ಪಡೆಯಬೇಕು ಓದದೆಯೇ ಡಾಕ್ಟರ್ ಆಗಲು ಸಾಧ್ಯವಿಲ್ಲ. ದಾವಣಗೆರೆ ಜಿಲ್ಲೆಯ ಎಲ್ಲರೂ ಎಲ್ಲಾ ವಿಷಯ ತಿಳಿಸಿದ್ದೇವೆ. ಕಾಂಗ್ರೆಸ್‌ಗೆ ಅಡ್ಜಸ್ಟ್‌ಮೆಂಟ್ ಆಗಿದ್ದಾರೆ ಅಂತ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ. ನಿಮ್ಮ ಕುಟುಂಬದವರು ಎಷ್ಟು ಸಾರಿ ಬಿಜೆಪಿ ಬಾವುಟ ಹಿಡಿದು ಜೈ ಅಂದಿದ್ದಾರೆ?. ಇವರಿಗೆ ಟಿಕೆಟ್ ಕೊಟ್ಟ ಮೇಲೆ ಅವರ ಮನೆಯವರು ಬಿಜೆಪಿಗೆ ಮತ ಹಾಕಿದ್ದಾರೆ. ಅಲ್ಲಿವರೆಗೂ ಬಿಜೆಪಿಗೆ ಮತ ಹಾಕಿರಲಿಲ್ಲ'' ಎಂದು ಟೀಕಿಸಿದರು.

ಇದನ್ನೂ ಓದಿ:ಸಂವಿಧಾನ ಬದಲಾವಣೆ ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ: ಶಾಸಕ ಮಹೇಶ್​ ಟೆಂಗಿನಕಾಯಿ

ABOUT THE AUTHOR

...view details