ಕರ್ನಾಟಕ

karnataka

ETV Bharat / state

ಇದೊಂದು ರಾಜಕೀಯ ಷಡ್ಯಂತ್ರ, ಸೂಕ್ತ ಪುರಾವೆಯಿಲ್ಲದೆ ಆರೋಪ ಹೊರಿಸಲಾಗಿದೆ; ಮಾಜಿ ಸಚಿವ ಹೆಚ್ ​ಡಿ ರೇವಣ್ಣ - ABDUCTION CASE - ABDUCTION CASE

ಸಂತ್ರಸ್ತ ಮಹಿಳೆಯ ಅಪಹರಣ ಆರೋಪದ ಕುರಿತು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

HD Revanna
ಮಾಜಿ ಸಚಿವ ಹೆಚ್ ​ಡಿ ರೇವಣ್ಣ (ETV Bharat)

By ETV Bharat Karnataka Team

Published : May 5, 2024, 6:30 PM IST

Updated : May 5, 2024, 7:19 PM IST

ಮಾಜಿ ಸಚಿವ ಹೆಚ್ ​ಡಿ ರೇವಣ್ಣ (ETV Bharat)

ಬೆಂಗಳೂರು: ''ಇದೊಂದು ರಾಜಕೀಯ ಷಡ್ಯಂತ್ರ. ಯಾವುದೇ ಸೂಕ್ತ ಪುರಾವೆಯಿಲ್ಲದೆ ನನ್ನ ಮೇಲೆ ಆರೋಪ ಹೊರಿಸಲಾಗಿದೆ'' ಎಂದು ಮಾಜಿ ಸಚಿವ ಹೆಚ್ ​ಡಿ ರೇವಣ್ಣ ಅವರು ಆರೋಪಿಸಿದರು.

ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ಎಸ್​ಐಟಿ ತಂಡದಿಂದ ಬಂಧನವಾಗಿರುವ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆಸ್ಪತ್ರೆಗೆ ತೆರಳುವಾಗ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ರಾಜ್ಯದ ಇತಿಹಾಸದಲ್ಲೇ ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ ಎಂದರು.

''ನನ್ನ 40 ವರ್ಷದ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲ. ಇದು ದುರುದ್ದೇಷಪೂರಿತ. ಏಪ್ರಿಲ್ 28ರಂದು ನನ್ನ ಮೇಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಯಾವುದೇ ಪುರಾವೆಯಿಲ್ಲದೆ ಮೇ 2ರಂದು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ರಾಜಕೀಯ ಇತಿಹಾಸದಲ್ಲೇ ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ. ನನಗೆ ಇದನ್ನ ಎದುರಿಸುವ ಶಕ್ತಿಯಿದೆ. ನಾನು ಎಲ್ಲವನ್ನ ಹೇಳುತ್ತೇನೆ. ಈಗಲೇ ಏನನ್ನೂ ಮಾತನಾಡಲ್ಲ'' ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದ್ದು, ಬಳಿಕ ಎಸ್ಐಟಿ ಅಧಿಕಾರಿಗಳು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ರೇವಣ್ಣ ಅವರನ್ನ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ :ನ್ಯಾಯಾಧೀಶರ ಮನೆಗೆ ಹೆಚ್‌.ಡಿ.ರೇವಣ್ಣ ಹಾಜರುಪಡಿಸಲು ಎಸ್​ಐಟಿ ಸಿದ್ಧತೆ - H D Revanna

Last Updated : May 5, 2024, 7:19 PM IST

ABOUT THE AUTHOR

...view details