ಗಂಗಾವತಿ(ಕೊಪ್ಪಳ): ಗ್ಯಾಸ್ ಗೀಸರ್ ಸ್ಫೋಟಗೊಂಡು ಐವರು ಮಹಿಳೆಯರು ಗಾಯಗೊಂಡ ಘಟನೆ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಸಾರಿಗೆ ಘಟಕದ ಸಮೀಪ ಸೋಮವಾರ ಸಂಜೆ ಸಂಭವಿಸಿತು. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿಕುಮಾರ ಐಲಿ ಎಂಬವರ ಮನೆಯಲ್ಲಿ ಸ್ಫೋಟ ನಡೆದಿದೆ. ಶೃತಿ ಐಲಿ, ಶೋಭಾ ಸಿರವಾರ, ಪ್ರೀತಿ, ಭಾಗ್ಯಮ್ಮ ಹಾಗೂ ಕವಿತಾ ಎಂಬವರು ಗಾಯಗೊಂಡಿದ್ದಾರೆ. ಶೃತಿ ಮನೆ ಮಾಲಕಿಯಾಗಿದ್ದು, ಮಿಕ್ಕ ನಾಲ್ವರು ಅಕ್ಕಪಕ್ಕದ ಮನೆಯವರು ಎಂದು ತಿಳಿದು ಬಂದಿದೆ.