ಮಂಗಳೂರು:ಮೀನುಗಾರಿಕೆಯ ಋತು ಆರಂಭವಾದ ಬೆನ್ನಲ್ಲೇ ಕಡಲಿನಲ್ಲಿ ಮೊದಲ ಅವಘಡ ಸಂಭವಿಸಿದೆ. ಮಂಗಳೂರಿನ ದಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ಇಂದು ಬೆಳಗ್ಗಿನ ಜಾವ ಸಮುದ್ರ ಮಧ್ಯೆ ಬೆಂಕಿ ಹೊತ್ತಿಕೊಂಡು ಮುಳುಗಿತು.
ಮಂಗಳೂರಲ್ಲಿ ಬೋಟ್ ಬೆಂಕಿಗಾಹುತಿ (ETV Bharat) ಹುಸೈನ್ ಎಂಬವರ ಮಾಲೀಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೋಟ್ನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ.
'ಈಟಿವಿ ಭಾರತ' ಜೊತೆಗೆ ಮಾತನಾಡಿದ ಹುಸೈನ್, "ರವಿವಾರ 10 ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಸೋಮವಾರ ಬೆಳಗ್ಗೆ ಬೋಟ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ದಕ್ಕೆಯಿಂದ ಸುಮಾರು 88 ನಾಟಿಕಲ್ ದೂರದಲ್ಲಿ ಬೋಟ್ ಮುಳುಗಿದೆ. ಜೊತೆಯಲ್ಲಿದ್ದ ಬೋಟ್ನವರು ಅವಘಡ ಗಮನಿಸಿ ಮೀನುಗಾರರನ್ನು ರಕ್ಷಿಸಿದರು. ನಮಗೆ ಸುಮಾರು 1 ಕೋಟಿ ರೂ. ನಷ್ಟವಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಲಸಿಗರನ್ನು ಹೊತ್ತು ಸಾಗುತ್ತಿದ್ದ ಬೋಟ್ಗೆ ಬಿದ್ದ ಬೆಂಕಿ; 40 ಜನ ಸಾವು - MIGRANTS DIED