ಶಿವಮೊಗ್ಗ:ತಾಲೂಕಿನ ಆಯನೂರು ಗ್ರಾಮದ ಬೇಕರಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದವು.
ಹಣಗೆರೆ ಕಟ್ಟೆ ರಸ್ತೆಯಲ್ಲಿನ ಎಸ್ಎಲ್ವಿ ಅಯ್ಯಂಗಾರ್ ಬೇಕರಿಯಲ್ಲಿ ಅವಘಡ ಸಂಭವಿಸಿತು. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಿಬ್ಬಂದಿ ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಹೋದಾಗ, ಎಲ್ಲರೂ ಬೇಕರಿ ಬಿಟ್ಟು ಹೊರ ಓಡಿದ್ದಾರೆ. ಈ ವೇಳೆ ಸಿಲಿಂಡರ್ ಸ್ಪೋಟವಾಗಿರಬಹುದೆಂದು ಶಂಕಿಸಲಾಗಿದೆ.
ಬೆಂಕಿಯಿಂದಾಗಿ ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳು ಮೂರು ಸಲ ಸ್ಫೋಟಗೊಂಡಿವೆ. ಸ್ಪೋಟಕ್ಕೆ ಸ್ಥಳೀಯರು ಹೆದರಿ ಓಡಿ ಹೋಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.
ತಪ್ಪಿದ ಭಾರೀ ಅನಾಹುತ:ಸ್ಪೋಟಗೊಂಡ ಬೇಕರಿಯ ಎದುರಿಗೆ ಪೆಟ್ರೋಲ್ ಬಂಕ್ ಇದ್ದು, ಯಾವುದೇ ಅನಾಹುತವಾಗಿಲ್ಲ. ಅಕ್ಕಪಕ್ಕದ ಅಂಗಡಿಗಳಿಗೆ ಸ್ವಲ್ಪ ಹಾನಿಯಾಗಿದೆ. ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಚಲಿಸುತ್ತಿದ್ದ ಸಾರಿಗೆ ಬಸ್ನಲ್ಲಿ ಬೆಂಕಿ; ತಪ್ಪಿದ ಅನಾಹುತ - Bus Catches Fire