ಕರ್ನಾಟಕ

karnataka

ETV Bharat / state

ಕೆಐಎಡಿಬಿ ಕಚೇರಿಗಳ ಮೇಲೆ ಇಡಿ ದಾಳಿ: ₹1.5 ಕೋಟಿ ನಗದು ಜಪ್ತಿ, ಬ್ಯಾಂಕ್ ಖಾತೆಯಲ್ಲಿದ್ದ ₹55 ಲಕ್ಷ ಮುಟ್ಟುಗೋಲು - ED Raid On KIADB - ED RAID ON KIADB

ಕೆಐಎಡಿಬಿಯಲ್ಲಿ ಅವ್ಯವಹಾರ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು, 1.5 ಕೋಟಿ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 55 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ed
ಇಡಿ (ETV Bharat)

By ETV Bharat Karnataka Team

Published : Aug 13, 2024, 9:59 PM IST

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿದ್ದ ಅವ್ಯವಹಾರ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು 1.5 ಕೋಟಿ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 55 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇದೇ ಆಗಸ್ಟ್ 9 ಹಾಗೂ 10ರಂದು ಕೆಐಎಡಿಬಿಯಲ್ಲಿ ಅವ್ಯವಹಾರದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆರೋಪದ ಮಾಹಿತಿ ಮೇರೆಗೆ ಬೆಂಗಳೂರು ಹಾಗೂ ಧಾರವಾಡ ಕೆಐಎಡಿಬಿ ಕಚೇರಿಗಳು ಸೇರಿ ಒಟ್ಟು 12 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಧಾರವಾಡದ ಐಐಟಿ ಸೇರಿ ಮತ್ತಿತರ ಯೋಜನೆಗಳ ಭೂಸ್ವಾಧೀನದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಆರೋಪ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ:ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಪ್ರಕರಣ: ಇಂದು ಮುಂದುವರಿದ ತನಿಖೆ, ಓರ್ವ ವಶ - ED Raids Continue

ABOUT THE AUTHOR

...view details