ತುಮಕೂರು: ಮಹಿಳೆಯೊಂದಿಗೆ ಅಸಭ್ಯ ವರ್ತನೆ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿಗೆ ಮಧುಗಿರಿ JMFC ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ಘೋಷಿಸಿದೆ.
ದೂರು ನೀಡಲು ಬಂದ ಮಹಿಳೆಯೊಂದಿಗೆ ಪೊಲೀಸ್ ಠಾಣೆಯಲ್ಲೇ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬಂನಕ್ಕೊಳಗಾಗಿರುವ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಇಂದು ಸಂಜೆ 4 ಗಂಟೆಗೆ ಮಧುಗಿರಿ ಪೊಲೀಸರು ಮಧುಗಿರಿ ಕೊರ್ಟ್ಗೆ ಹಾಜರುಪಡಿಸಿದ್ದರು.
ಪ್ರಧಾನ ಹಿರಿಯ ನ್ಯಾಯಾಧೀಶೆ ಪ್ರೇಮಿಳಾ ಅವರು ಪ್ರಕರಣದ ವಿಚಾರಣೆ ನಡೆಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನದ ತೀರ್ಪು ನೀಡಿದ್ದಾರೆ. ಕೋರ್ಟ್ನಲ್ಲಿ ಡಿವೈಎಸ್ಪಿ ರಾಮಚಂದ್ರಪ್ಪ ಪರವಾಗಿ ಹಿರಿಯ ವಕೀಲ ರಘುನಾಥ್ ರೆಡ್ಡಿ ವಾದ ಮಂಡಿಸಿದರು. ಸಂತ್ರಸ್ತೆ ಪರವಾಗಿ ತಕಾರಾರು ಮಂಡಿಸಲು ಜನವರಿ 7ರ ವರೆಗೆ ಗಡುವು ನೀಡಲಾಗಿದೆ.
ಇದನ್ನೂ ಓದಿ:ಮಹಿಳೆಯೊಂದಿಗೆ ಡಿವೈಎಸ್ ಪಿ ಅಸಭ್ಯ ವರ್ತನೆ ; ಬಂಧಿತ ಅಧಿಕಾರಿ ಇಂದು ಕೋರ್ಟ್ಗೆ ಹಾಜರು