ಮಂಗಳೂರು: ಹೊಸ ವರ್ಷಾಚರಣೆಗೆ ತರಿಸಲಾಗಿದ್ದ ಡ್ರಗ್ಸ್ ವಶಪಡಿಸಿಕೊಂಡಿರುವ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿಯ ದೇವರಾಜ್ (37) ಮೊಹಮ್ಮದ್ ಫರ್ವೆಜ್ ಉಮರ್ (25) ಮತ್ತು ಶೇಖ್ ತಹೀಮ್ (20) ಬಂಧಿತರು.
ಡಿ.18ರಂದು ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆ ತಂದಿದ್ದ ಸುಮಾರು 5 ಕೆ.ಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೊಕೇನ್, 17 ಗ್ರಾಂ 35 ಎಂಡಿಎಂಎ ಪಿಲ್ಸ್, 100 ಗ್ರಾಂ ಚರನ್, 8 ಗ್ರಾಂ ಹೈಡೋವಿಡ್ ಗಾಂಜಾ, 3 ಎಲ್.ಎಸ್.ಡಿ ಸ್ಕ್ರಿಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳಿಂದ ಒಂದು ಹರಿತವಾದ ಚಾಕು, ತೂಕ ಮಾಪನಗಳು, ಪ್ಲಾಸ್ಟಿಕ್ ಕವರ್ಗಳು ಹಾಗೂ ಇದನ್ನು ಸಾಗಾಟ ಮಾಡಲು ಉಪಯೋಗಿಸಿದ ಕಾರ್ ಮತ್ತು ಸ್ಕೂಟರ್ ಅನ್ನು ಜಪ್ತಿ ಮಾಡಲಾಗಿದೆ.